25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ನಿಟ್ಟಡೆ ಕುಂಭಶ್ರೀ ಪದವಿಪೂರ್ವ ಕಾಲೇಜಿನಲ್ಲಿ SPECTRUM -2025 ಫ್ರೆಶರ್ಸ್ ಡೇ ಕಾರ್ಯಕ್ರಮ

ವೇಣೂರು: ನಿಟ್ಟಡೆ ಕುಂಭಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಿಜೃಂಭಣೆಯಿಂದ SPECTRUM -2025 ಫ್ರೆಶರ್ಸ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಉದ್ದೇಶವು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತವನ್ನು ನೀಡುವುದು.

ಮುಖ್ಯ ಅತಿಥಿಯಾಗಿ ಕಾಲೇಜಿನ ಸಂಸ್ಥಾಪಕ ಗಿರೀಶ್ ಕೆ.ಹೆಚ್ ಭಾಗವಹಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶ್ಲಾಘಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿ ಜೀವನದ ಮಹತ್ವ, ಪರಿಶ್ರಮದ ಶಕ್ತಿ, ಶಿಸ್ತು ಮತ್ತು ಗುರಿಯತ್ತ ನಿಭಾಯಿಸುವ ನಡೆಗಳ ಬಗ್ಗೆ ಸ್ಪಷ್ಟವಾದ ಮತ್ತು ಸ್ಪೂರ್ತಿದಾಯಕ ಸಂದೇಶವೊಂದನ್ನು ನೀಡಿದರು.


ಸಂಸ್ಥೆಯ ಸಂಚಾಲಕ ಗಣಿತ ಉಪನ್ಯಾಸಕ ಅಶ್ವಿತ್ ಕುಲಾಲ್ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಹಾಗೂ ಪ್ರಾಚಾರ್ಯರು ಹಾಗೂ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಆತ್ಮೀಯ ಶುಭಾಶಯಗಳನ್ನು ಸಲ್ಲಿಸಿದರು.


ಹಳೆಯ ವಿದ್ಯಾರ್ಥಿಗಳು ಹೊಸ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ಸಾಹದ ಮಾತುಗಳನ್ನು ಹಂಚಿಕೊಂಡು ಸ್ನೇಹಪೂರ್ಣವಾಗಿ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಪುಥ್ವಿ ಮತ್ತು ಸ್ವೀಕೃತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related posts

ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ವತಿಯಿಂದ 78ನೇ ವಷ೯ದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಕುಕ್ಕಾವು ಕೊಪ್ಪಂದಗುಂಡಿಯಲ್ಲಿ ರಸ್ತೆಗೆ ಬಿದ್ದ ಮರ: ದ್ವಿಚಕ್ರ ಸವಾರರಿಗೆ ಗಾಯ

Suddi Udaya

ಗೇರುಕಟ್ಟೆ ಆಟೋ ಚಾಲಕರ ಸಂಘದ ವತಿಯಿಂದ ಶಿವರಾಮ ಪೂಜಾರಿ ರವರಿಗೆ ಧನಸಹಾಯ

Suddi Udaya

ಆರ್‌ಎಸ್‌ಎಸ್ ಮುಖಂಡ ಮೋಹನ್ ರಾವ್ ಕಲ್ಮಂಜ ರವರನ್ನು ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ

Suddi Udaya

ರಾಷ್ಟ್ರಮಟ್ಟದ ಅಬಕಾಸ್ ಚಾಂಪಿಯನ್ ಶಿಪ್ ಸ್ಪರ್ಧೆ: ಅರ್ಹನ್ ಬೈಗ್ ಮತ್ತು ಅರ್ಮನ್ ಬೈಗ್ ದ್ವಿತೀಯ ಚಾಂಪಿಯನ್

Suddi Udaya
error: Content is protected !!