ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೀಟ್ ಪರೀಕ್ಷೆಯಲ್ಲಿ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯತ್ತಮ ಸಾಧನೆ: ಅಖಿಲ ಭಾರತ ಮಟ್ಟದಲ್ಲಿ 88ನೇ ರ್‍ಯಾಂಕ್ ಪಡೆದ ಗಣೇಶ್

ಮೂಡಬಿದಿರೆ: ರಾಷ್ಟ್ರೀಯ ಪರೀಕ್ಷಾ ಮಂಡಳಿಯು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರದೇಶ ಪರೀಕ್ಷೆ(ನೀಟ್)ಯಲ್ಲಿ ಮೂಡುಬಿದಿರೆಯ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಅತ್ಯತ್ತಮ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಯಾದ ಗಣೇಶ್ 579 ಅಂಕವನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಹಾಗೂ ಕೆಟಗೆರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 88 ರ್ಯಾಂಕ್ ಗಳಿಸಿ ಸಾಧನೆಗೈದಿದ್ದಾರೆ. ಈಗಾಗಲೇ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಗಣೇಶ್ 600 ನೇ ರ್ಯಾಂಕ್ ಪಡೆದು ಮುಂಬೈ ಐಐಟಿಯಲ್ಲಿ ಸೀಟ್ ಪಡೆದುಕೊಂಡಿದ್ದನು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ:
720 ಅಂಕಗಳಲ್ಲಿ ಗಣೇಶ್ (579), ಅಭಿಷೇಕ್ ಸದಾಶಿವ ತೋರ್ಸೆ (553), ಯಶವಂತ್ ಬಿ (541), ಮಹದೇವ್ ಲಗಮಣ್ಣ ಬಿ ಪಾಟೀಲ್ (539), ವಿಶ್ವ ಸಂಗಾಪ್ಪ್ಪಶೆಟ್ಟರ್ (530),ಸೋಮನಗೌಡ ಅಸ್ಕಿ(529), ಪ್ರತೀಕ್ಷಾ ಶೆಟ್ಟಿ (516), ನೂತನ ಆರ್ ಗೌಡ (508), ಸಮೃದ್ಧ ಎಸ್ ಕೆ (506),ಹಿಬಾ ಸಿಮಲ್ (505), ಅಬ್ದುಲ್ ಜಬ್ಬರ್ (505), ಶರಣ್ ಯಂ ಎಸ್ (500), ಪೂರ್ವಿ ಎಂ(498) , ಚೇತನ್ ಕೆ ಎಂ (498), ಸೃಜನ್ ಸುರೇಶ್ ಕುಂಬರ್ (496),ಪುಷ್ಪಕ್ ಎ ಆರ್ (495), ತಸ್ಮಿಯಾ ಎಸ್ (494), ಮನೋಜ್ ಬಿ ಎನ್ (493),ಶಶಾಂಕ್ (484) ,ನಿವೇದಿತಾ ಹಿರೇಮಠ (482), ರವಿಶಂಕರ್ ಎಂ ಎಂ (479), ಪತಂಜಲಿ ಬಂಗೇರ (478), ಲಕ್ಷ್ಮಿ (475), ತನಿಷ್ಕಾ ಎಸ್ ಕೆ (473),ವೇದಿಕ್ ರಾಜ್ ಅರಸ್ ಎಂ ಸಿ (467), ಅತವಳಿಗಿ ಪೂಜಾ(466), ಅಕ್ಷತಾ ಜೆ (463), ನಿತಿನ್ ಡಿ ವೈ (462), ಆದರ್ಶ್ ಎಲ್ ಜಿ (457)ಫಾತಿಮಾ ಅಶುರ (454), ಈಶ್ವರ್ ಕಬನೂರಿ (453), ಸಂಗೀತ ಆರ್ ಡಿ (451) ಪಡೆದು ಸಾಧನೆ ಮಾಡಿರುತ್ತಾರೆ.

500 ಕ್ಕಿಂತಲೂ ಹೆಚ್ಚು ಅಂಕಗಳನ್ನು 12 ವಿದ್ಯಾರ್ಥಿಗಳು, 450 ಕ್ಕಿಂತಲೂ ಹೆಚ್ಚು ಅಂಕವನ್ನು 32 ವಿದ್ಯಾರ್ಥಿಗಳು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜು ನೀಡುತ್ತಿರುವ ಅತ್ಯತ್ತಮ ಕೋಚಿಂಗ್ ನಿಂದ ಈ ಒಂದು ಸಾಧನೆ ಮಾಡಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಈ ವರ್ಷ ಕಾಲೇಜಿನಿಂದ ಕೋಚಿಂಗ್ ಪಡೆದು ಉತ್ತಮ ಅಂಕಗಳಿಸಿದ ಹೆಚ್ಚಿನ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್ ಲಭಿಸುವ ನಿರೀಕ್ಷೆ ಇದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದರು.

Related posts

ಮೇ. 16 : ತುರ್ತು ಕಾಮಗಾರಿ ಪ್ರಯುಕ್ತ ನಾನಾ ಕಡೆಗಳಲ್ಲಿ ವಿದ್ಯುತ್ ಕಡಿತ

Suddi Udaya

ಎಸ್ ಎಸ್ ಎಲ್ ಸಿ ಪರೀಕ್ಷೆ: ಬೆಳ್ತಂಗಡಿ ಎಸ್.ಡಿ .ಎಮ್ ಆಂ.ಮಾ. ಶಾಲೆಗೆ ಸತತ ಎಂಟನೇ ಬಾರಿ ಶೇ100 ಫಲಿತಾಂಶ

Suddi Udaya

ಸಂಸತ್ತಿನಲ್ಲೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ತಮ್ಮ ದೇಶದ ಜನರೆದುರು ಕ್ಷಮೆಯಾಚಿಸಲಿ: ರಕ್ಷಿತ್ ಶಿವರಾಂ

Suddi Udaya

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ್ ಹೆಗ್ಡೆ ರವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

Suddi Udaya

ಪುದುವೆಟ್ಟು: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣೆ

Suddi Udaya

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಬಕ್ರೀದ್ ಆಚರಣೆ

Suddi Udaya
error: Content is protected !!