September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಕ್ರಮ ಮದ್ಯ ಮಾರಾಟ ಅಡ್ಡೆಗೆ ಧರ್ಮಸ್ಥಳ ಪೊಲೀಸರ ದಾಳಿ : ಆರೋಪಿಯ ಬಂಧನ

ಪುದುವೆಟ್ಟು: ಅಕ್ರಮವಾಗಿ ಮಧ್ಯ ಸಂಗ್ರಹಿಸಿ ಮನೆಯ ತೋಟದಲ್ಲಿ ಶೇಖರಿಟ್ಟು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮದ್ಯದ ಅಡ್ಡೆ ಮೇಲೆ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ ಮದ್ಯ ವಶಪಡಿಸಿಕೊಂಡ ಘಟನೆ ಜೂ. 16 ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಬೊಳ್ಮನಾರು ನಿವಾಸಿ ಪುರುಷೋತ್ತಮ ಎಂಬಾತನ ಮನೆಯ ತೋಟದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಂಗ್ರಹಿಸಿಟ್ಟ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಜೂ.16 ರಂದು ಸಂಜೆ 6 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ಸಿಬ್ಬಂದಿ ಪುರುಷೋತ್ತಮ ಎಂಬಾತನ ಮನೆಯ ತೋಟದ ಮೇಲೆ ದಾಳಿ ಮಾಡಿ 4.860 ಲೀಟರ್ 54 ಎಂ.ಎಲ್. ಮೈಸೂರು ಲ್ಯಾನ್ಸರ್ ವಿಸ್ಕಿ ಮದ್ಯ ವಶಪಡಿಸಿಕೊಂಡಿದ್ದಾರೆ.

ಇದರ ಅಂದಾಜು ಮೌಲ್ಯ 2,700 ರೂಪಾಯಿ ಅಗಿದ್ದು. ಈ ಮದ್ಯ ಮರಾಟಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವುದರಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ಪುದುವೆಟ್ಟು ಗ್ರಾಮದ ಬೊಳ್ಮನಾರು ನಿವಾಸಿ ಕೊರಗಪ್ಪ ಪೂಜಾರಿ ಮಗ ಪುರುಷೋತ್ತಮ(40) ಎಂಬಾತನನ್ನು ಬಂಧಿಸಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related posts

ಬೆಳ್ತಂಗಡಿ : ಶ್ರೀಮತಿ ಆಲಿಸ್ ಪಿರೇರಾ ನಿಧನ

Suddi Udaya

ಕೃಷಿಕರ ಒಕ್ಕಲು ಎಬ್ಬಿಸಿ ತೊಂದರೆ ಮಾಡುವ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮಕೈಗೊಳ್ಳಬೇಕು : ಮೋಹನ್ ಗೌಡ

Suddi Udaya

ಉರುವಾಲು : ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ-ಸಮಾಲೋಚನಾ ಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಸದಸ್ಯರಿಗೆ ಲೋಕಲ್ ಆರ್ಗನೈಜೇಷನ್ ಡೆವಲಪ್ಮೆಂಟ್ ತರಬೇತಿ

Suddi Udaya

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ: ಬಂದಾರು, ಮೊಗ್ರು, ಕಣಿಯೂರು ಗ್ರಾಮದ ಭಕ್ತಾಧಿಗಳಿಂದ ಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya
error: Content is protected !!