27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೃಷಿಕರ ಒಕ್ಕಲು ಎಬ್ಬಿಸಿ ತೊಂದರೆ ಮಾಡುವ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮಕೈಗೊಳ್ಳಬೇಕು : ಮೋಹನ್ ಗೌಡ

ಬೆಳ್ತಂಗಡಿ: ಮಲವಂತಿಗೆ-ಮಿತ್ತಬಾಗಿಲು ಭಾಗದಲ್ಲಿ ರೈತರ ಕೃಷಿ ಭೂಮಿ ನಾಶ ಮಾಡಿ ಒಕ್ಕಲು ಎಬ್ಬಿಸಿ ತೊಂದರೆ ಮಾಡುವ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸರಕಾರಕ್ಕೆ ಮೋಹನ್ ಗೌಡ ಆಗ್ರಹ ಮಾಡಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶ ಜನತೆ ಆನೆ ಚಿರತೆ ಹಾವಳಿಯಿಂದ ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ. ಪ್ರಕೃತಿ ಪರಿಸರ ಸಂರಕ್ಷಣೆಯಲ್ಲಿ ಅವರ ಕೊಡುಗೆ ಕೃಷಿ ಜೀವನ ಮೂಲಕ ಆಗುತ್ತಿದೆ. ಅವರ ಪಾಡಿಗೆ ಅವರು ಜೀವನ ನಡೆಸುತ್ತಿದ್ದಾರೆ ಒಂದು ವೇಳೆ ಕಾನೂನು ರೀತಿ ಅವರನ್ನು ಒಕ್ಕಲು ಎಬ್ಬಿಸಿ ತೊಂದರೆ ಕೊಡುವುದೇ ಆದಲ್ಲಿ ಮೊದಲು ಅವರಿಗೆ ಶಾಶ್ವತ ಪರಿಹಾರವನ್ನು ಭೂಮಿ ನೀಡಿ ಘೋಷಣೆ ಮಾಡಬೇಕಿತ್ತು. ಅದು ಬಿಟ್ಟು ಏಕ ಏಕೀ ಅವರನ್ನು ಎಬ್ಬಿಸಿ ತೊಂದರೆ ಮಾಡುವ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಸರ್ಕಾರ ಯಾವುದೇ ಇರಲಿ ಅದು ಜನಪರ ಕಾರ್ಯಕ್ರಮ ಮಾಡಬೇಕು. ಜನವಿರೋಧಿ ನೀತಿ ಮಾಡಿದ್ದಲ್ಲಿ ಮತ ನೀಡಿದ ಮತದಾರ ವಿರುದ್ಧ ನಿಲ್ಲುವ ದಿನ ದೂರ ಇಲ್ಲ. ಇಲ್ಲಿಯ ಜನ ಕೇಂದ್ರ ಸರ್ಕಾರ ಸಂಸದರಿಗೆ, ಶಾಸಕರಿಗೆ ಮತ ನೀಡಿ ಗೆಲ್ಲಿಸಿದ್ದಾರೆ
ದಯವಿಟ್ಟು ಈ ಬಗ್ಗೆ ಸ್ಥಳ ಪರಿಶೀಲಿಸಿ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸದಾ ಈ ಭಾಗದ ರಸ್ತೆ ಹಾಗೂ ಕೃಷಿಕರ ಧ್ವನಿ ಆಗಿರುವ ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸರಕಾರ ಕ್ಕೆ ಒತ್ತಾಯಿಸಿದ್ದಾರೆ.

Related posts

ಜೂ.7: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘದಿಂದ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ

Suddi Udaya

ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆ, ಬೆಳ್ತಂಗಡಿ ಲಯನ್ಸ್ ಸೇವಾ ಸಂಸ್ಥೆ, ಲಿಯೋ ಕ್ಲಬ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾಸಿಕ ಸಭೆ.

Suddi Udaya

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ದಿಗ್ವಿಜಯ: ಬೆಳ್ತಂಗಡಿಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ

Suddi Udaya

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಎಸ್‌.ಡಿ.ಎಂ ಮನೋವಿಜ್ಞಾನ ವಿಭಾಗ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಬಗೆಯ ಅನನ್ಯ ಕಾರ್ಯಕ್ರಮಗಳ ಪ್ರಯೋಗ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು

Suddi Udaya
error: Content is protected !!