September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಜಿಲ್ಲಾ ಸಂಸ್ಕಾರ ಭಾರತೀ ವತಿಯಿಂದ ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿಯಲ್ಲಿ “ಸಂಸ್ಕಾರ ಸಿಂಧೂರ” ಚಿಂತನ ಮಂಥನ ಕಾರ್ಯಕ್ರಮ

ವೇಣೂರು: ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಜೂ. 17 ರಂದು ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿ, ಪಲ್ಲಂದೋಡಿ ಬಜಿರೆಯಲ್ಲಿ “ಸಂಸ್ಕಾರ ಸಿಂಧೂರ” ಎಂಬ ಕಾರ್ಯಕ್ರಮದಡಿ ಸನಾತನ ಸಂಸ್ಕೃತಿಯ ಮೆಲುಕು -ಚಿಂತನ ಮಂಥನ ಕಾರ್ಯಕ್ರಮ ಆರಂಭಗೊಂಡಿತು.

ಜಂತೋಡಿಗುತ್ತು ಪ್ರವೀಣ್ ಚಂದ್ರ ಜೈನ್ ರವರಿಂದ ದೀಪೋಜ್ವಲನದ ಮೂಲಕ ಉದ್ಘಾಟನೆಯಾದ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲೆ ಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಫರೆಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ, ಸಂಸ್ಕಾರ ಭಾರತೀ ಕರ್ನಾಟಕ ಪ್ರಾಂತ ದ ಸಹ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಮಂಗಳೂರು, ವೇಣೂರಿನ ಉದ್ಯಮಿಗಳಾದ ಭಾಸ್ಕರ್ ಪೈ, ಸಂಸ್ಕಾರ ಭಾರತೀ ದ.ಕ.ದ ಕೋಶ ಪ್ರಮುಖ್ ಶ್ರೀಮತಿ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರಥಮ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು. ಜನನದಿಂದ ಮರಣದವರೆಗಿನ ಆಚರಣೆಗಳಲ್ಲಿನ ಬದಲಾವಣೆಗಳು ಎಂಬ ವಿಚಾರದಲ್ಲಿ ಚಿಂತನೆ ನಡೆಸಿದವರು ಸಾಮರಸ್ಯ ಟೋಳಿಯ ವಿಭಾಗ ಪ್ರಮುಖ್ ಸುರೇಶ್ ನರ್ಕಳ, ಸಂ‌.ಭಾ.ಕರ್ನಾಟಕ ಪ್ರಾಂತದ ಕೋಶ ಪ್ರಮುಖ್ ರಘುವೀರ್ ಗಟ್ಟಿ, ಸಂ.ಭಾ.ದ.ಕ ಜಿಲ್ಲೆಯ ಉಪಾಧ್ಯಕ್ಷ ದತ್ತಾತ್ರೇಯ ರಾವ್ ಪುತ್ತೂರು, ಸಂ.ಭಾ.ದ.ಕ.ಜಿಲ್ಲೆಯ ಸಾಹಿತ್ಯ ಸಂಯೋಜಕರಾದ ಶ್ರೀಮತಿ ಶಂಕರಿ ಶರ್ಮ ಪುತ್ತೂರು ಉಪಸ್ಥಿತರಿದ್ದರು.

ಸಂ.ಭಾ.ದ.ಕ.ಜಿಲ್ಲೆಯ ಕಾರ್ಯಕಾರಿಣಿ ಸದಸ್ಯ ಪಿ.ಎನ್.ಪರುಷೋತ್ತಮ ರಾವ್ ಕಾರ್ಯಕ್ರಮ ನಿರೂಪಿಸಿದರು.

Related posts

ಟೀಂ ಅಭಯಹಸ್ತ ಪ್ರಧಾನ ಸಂಚಾಲಕ ಸಂದೀಪ್ ಸುಂದರ್ ನೀರಲ್ಕೆರವರಿಂದ ಸುಲ್ಕೇರಿಮೊಗ್ರು ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Suddi Udaya

ಎಸ್.ಐ.ಟಿ ಕಚೇರಿಗೆ ಸುಜಾತ ಭಟ್ ವಿಚಾರಣೆಗೆ ಹಾಜರು

Suddi Udaya

ಜಾಗತಿಕ ಕ್ರೀಡೋತ್ಸವದ ಪದಾಧಿಕಾರಿಗಳ ಪೂರ್ವಭಾವಿ ಸಭೆ

Suddi Udaya

ಜ.8-12: ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ಬ್ರಹ್ಮಕಲಶೋತ್ಸವ : ಅರಸರಾದ ಡಾ. ಪದ್ಮಪ್ರಸಾದ್ ಅಜಿಲರ ನೇತೃತ್ವದಲ್ಲಿ ಪೂರ್ವಾಸಿದ್ದತಾ ಸಭೆ

Suddi Udaya

ಬೆಳ್ತಂಗಡಿ: ಲಕ್ಷ್ಮೀ ಸ್ವೀಟ್ ಮತ್ತು ಕಾಂಡಿಮೆಂಟ್ಸ್ ಶುಭಾರಂಭ

Suddi Udaya

ಪ್ರತಿಭಾ ಕಾರಂಜಿ ಮಿಮಿಕ್ರಿ ಸ್ಪರ್ಧೆ: ಮಚ್ಚಿನ ಸ.ಪ್ರೌ. ಶಾಲೆಯ ವಿದ್ಯಾರ್ಥಿ ಮನೀಷ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!