22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನಿಡಿಗಲ್: ರಾ.ಹೆದ್ದಾರಿಯಲ್ಲಿ ಮೂರು ದಿನದಿಂದ ಅನಾಥವಾಗಿ ನಿಂತ ಬೈಕ್: ವಾರುಸುದಾರನ ಪತ್ತೆಯಿಲ್ಲ ನಾಗರೀಕರಲ್ಲಿ ಸಂಶಯ

ಕಲ್ಮಂಜ: ನಿಡಿಗಲ್ ಸೀಟು ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಷಿತಾರಣ್ಯದ ಕುಕ್ಕುದ ಕಟ್ಟೆ ಬಳಿ ಕಳೆದ ಮೂರು ದಿನಗಳಿಂದ ಬೈಕೊಂದು ಅನಾಥ ರೀತಿಯಲ್ಲಿ ಸೈಡ್ ಸ್ಯಾಂಡ್ ಹಾಕಿ ನಿಲ್ಲಿಸಿರುವುದು ಕಂಡುಬಂದಿದೆ.

ಮೇಲ್ನೋಟಕ್ಕೆ ಯಾರೋ ಬೈಕ್ ನಿಲ್ಲಿಸಿ ಬಹಿರ್ದೆಸೆಗೆ ಹೋಗಿರಬಹುದು ಎಂಬಂತೆ ಕಂಡು ಬರುವುದರಿಂದ ಯಾರೂ ನಿಲ್ಲಿಸಿರುವ ಬೈಕ್ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ ಅದರೆ ದಿನ ನಿತ್ಯ ಪ್ರಯಾಣಿಸುವ ವಾಹನ ಸವಾರರು ಈ ಬಗ್ಗೆ ಗಮನ ಹರಿಸಿ ಕಳೆದ 4 ದಿನಗಳಿಂದ ಬೈಕ್ ನಿಂತಲ್ಲಿಯೇ ಇದ್ದು, ಅದರ ಹ್ಯಾಂಡಲ್ ನಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ಒಂದು ಶರ್ಟ್ ಇದ್ದು. ರಾಮನಗರ ನೋಂದಾವಣೆಯ ನಂಬರ್ ಬೈಕ್ ನಲ್ಲಿ ಇದೆ ಎಂಬ ಮಾಹಿತಿ ಸ್ಥಳೀಯರು ನೀಡಿದ್ದಾರೆ.

ಯಾರೋ ಬೈಕ್ ರಸ್ತೆಯಲ್ಲೆ ಬಿಟ್ಟು ಎಲ್ಲಾದರೂ ಹೋಗಿದ್ದರೋ, ಏನಾದರೋ ಮಾಡಿಕೊಂಡಿದ್ದರೋ, ಕಳ್ಳತನ ಮಾಡಿದ ಬೈಕೊ ಅಥವಾ ಬೈಕ್ ಹಾಳಾಗಿದ್ದು ಅದನ್ನು ಅಲ್ಲೇ ಬಿಟ್ಟು ಹೋಗಿದ್ದರೋ ಒಂದು ವೇಳೆ ಹೆದ್ದಾರಿ ಕಾಮಗಾರಿ ನಿರ್ವಹಿಸುವವರ ಬೈಕ್ ಆಗಿದ್ದರೆ ನಿಂತಲ್ಲಿಯೇ ನಿಲ್ಲಿಸಲು ಸಾಧ್ಯವೇ, ಎನ್ನುವ ಅನುಮಾನ ಸ್ಥಳೀಯವಾಗಿ ಮೂಡುತಿದ್ದು, ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತನಿಖೆಯಿಂದ ಸ್ಪಷ್ಟ ಉತ್ತರ ದೊರಕಲಿದೆ.

Related posts

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಮಲವಂತಿಗೆ: ತೋಟಕ್ಕೆ ನುಗ್ಗಿದ ಕಾಡಾನೆ; ಅಪಾರ ಕೃಷಿ ಹಾನಿ

Suddi Udaya

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

Suddi Udaya

ಮಾಲಾಡಿ : ಕಸ ಎಸೆದವರಿಂದಲೇ ಹೆಕ್ಕಿಸಿ ರೂ.5 ಸಾವಿರ ದಂಡ ವಿಧಿಸಿದ ಮಾಲಾಡಿ ಗ್ರಾಮ ಪಂಚಾಯತ್

Suddi Udaya

ಭಾರಿ ಗಾಳಿ-ಮಳೆ: ಪಟ್ರಮೆ ಅನಾರುವಿನಲ್ಲಿ ಹಲವು ಮನೆಗಳಿಗೆ ಹಾನಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ

Suddi Udaya
error: Content is protected !!