September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾಲಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ, ಗಿಡ ನಾಟಿ ಕಾರ್ಯಕ್ರಮ

ಮಾಲಾಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಗುರುವಾಯನಕೆರೆ ಹಾಗೂ ಸ ಹಿ ಪ್ರಾ ಶಾಲೆ ಮಾಲಾಡಿ ಸಹಕಾರದೊಂದಿಗೆ ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾತನಾಡಿದ ವಲಯದ ಮೇಲ್ವಿಚಾರಕರು ಶ್ರೀಮತಿ ಹೇಮಾವತಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳೆಸಬೇಕು, ಅವಕಾಶ ಇರುವ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಿ ಪ್ರಾಣಿ ಪಕ್ಷಿಗಳಿಗೆ ಎಲ್ಲಾ ಸಮಯದಲ್ಲಿಆಹಾರ ಸಿಗುವಂತೆ ಮಾಡಬೇಕು ಎಂದು ತಿಳಿಸಿದರು.

ಶಾಲಾ ಅಭಿವೃದ್ಧಿ ಅಧ್ಯಕ್ಷ ಹಕೀಮ್ ಮಾತನಾಡಿ ನಾವೆಲ್ಲರೂ ಸೇರಿ ಗಿಡಗಳನ್ನು ನೆಟ್ಟು ಪರಿಸರದ ಮೌಲ್ಯವನ್ನು ಹೆಚ್ಚಿಸೋಣ, ಗಿಡ ಮರಗಳನ್ನು ನಾವು ನಿರಂತರವಾಗಿ ಕಾಪಾಡಿಕೊಂಡು ಹೋಗಬೇಕು. ಪರಿಸರ ಇದ್ದರೆ ನಾವು , ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬದ ದಿನ ಗಿಡ ನಾಟಿ ಮಾಡಿ ಆಚರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಲತಾ ಕೆ, ನೌಕರ ಸಂಘದ ಅಧ್ಯಕ್ಷ ಜಯರಾಜ್ ಜೈನ್ , ಸೇವಾಪ್ರತಿನಿಧಿ ಲಾನ್ಸಿ ಶಾಲಾ ಶಿಕ್ಷಕ ವೃಂದ, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು, ನಂತರ ಶಾಲಾ ಆವರಣದಲ್ಲಿ ಯಶಸ್ವಿಯಾಗಿ ಗಿಡ ನಾಟಿ ಮಾಡಲಾಯಿತು.

Related posts

ನ.25: ಡಾ. ಡಿ ವೀರೇಂದ್ರ ಹೆಗ್ಗಡೆಯವರ 76 ನೇ ಜನ್ಮ ದಿನದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Suddi Udaya

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಮಹಾಸಭೆ, ಸಮಿತಿ ರಚನೆ

Suddi Udaya

ಉಜಿರೆ: ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ಸಪ್ತಾಹ ಉದ್ಘಾಟನೆ

Suddi Udaya

ಕನ್ಯಾಡಿ-1 ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಪುಂಜಾಲಕಟ್ಟೆ: ‘ಸ್ವಾಸ್ತ್ಯ ಸಂಕಲ್ಪ’ ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!