32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಿಟ್ಟಡೆ ಕುಂಭಶ್ರೀ ಪಿಯು ಕಾಲೇಜಿನಲ್ಲಿ ನೈತಿಕತೆ ತರಗತಿಗೆ ಉತ್ತಮ ಸ್ಪಂದನೆ

ವೇಣೂರು: ಕುಂಭಶ್ರೀ ಪಿಯು ಕಾಲೇಜಿನಲ್ಲಿ ನೈತಿಕತೆ ತರಗತಿಯನ್ನು ಅತ್ಯಂತ ಶಿಸ್ತಿನಿಂದ ಹಾಗೂ ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ವಿದ್ಯಾರ್ಥಿಗಳ ನೈತಿಕ ಮೌಲ್ಯಗಳನ್ನು ಗಟ್ಟಿ ಮಾಡುವುದು, ಅವರಲ್ಲಿ ಸಮಾಜದತ್ತ ಜವಾಬ್ದಾರಿ ಭಾವನೆ ಮೂಡಿಸುವುದು, ಶಿಸ್ತಿನ ಹಾದಿಯಲ್ಲಿ ಮುಂದುವರಿಯುವ ಪ್ರೇರಣೆಯನ್ನು ನೀಡುವುದು ಈ ತರಗತಿಯ ಮುಖ್ಯ ಉದ್ದೇಶವಾಗಿತ್ತು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಮತ್ತು ಗಣಿತ ವಿಭಾಗದ ಉಪನ್ಯಾಸಕ ಅಶ್ವಿತ್ ಕುಲಾಲ್, ಪ್ರಾಂಶುಪಾಲರಾದ ಶ್ರೀಮತಿ ಓಮನಾ ಎಂ.ಎ. ಹಾಗೂ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಮನೋಜ್ ಎಸ್, ಇವರು ನೈತಿಕತೆ ಕುರಿತಾಗಿ ಮಾತನಾಡಿದರು.


ಅಶ್ವಿತ್ ಕುಲಾಲ್ ಅವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ, ಹಾಗೂ ವ್ಯಕ್ತಿತ್ವ ವಿಕಾಸದಲ್ಲಿ ನೈತಿಕತೆಯ ಪಾತ್ರದ ಕುರಿತು ದೃಷ್ಟಾಂತಗಳೊಂದಿಗೆ ವಿವರಿಸಿದರು.
ಶ್ರೀಮತಿ ಓಮನಾ ಎಂ.ಎ. ಅವರು ಜೀವನದಲ್ಲಿ ಆತ್ಮವಿಶ್ವಾಸ, ಪ್ರಾಮಾಣಿಕತೆ, ಶ್ರದ್ಧೆ ಮತ್ತು ಸಹಕಾರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.


ಮನೋಜ್ ಎಸ್ ಅವರು ಮಾನವೀಯ ಮೌಲ್ಯಗಳ ಅನ್ವಯಿಕತೆಯ ಕುರಿತು ತಿಳಿಸಿ, ಶಾಂತಿ, ಸಹನೆ, ಸಹಾನುಭೂತಿ ಇವು ವಿದ್ಯಾರ್ಥಿಗಳ ಜೀವನಕ್ಕೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಪ್ರಭಾವಶೀಲವಾಗಿ ವಿಸ್ತಾರಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಮಾದರಿಯಾಗಿ ನಿಂತರು. ತರಗತಿಯು ಸಂವಾದಾತ್ಮಕವಾಗಿ ನಡೆದಿದ್ದು, ಕೆಲವು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ನೈತಿಕ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು.


ಈ ತರಗತಿಯು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಸದ್ಭಾವನೆ ಮತ್ತು ಸದುದ್ದೇಶಗಳ ಬೀಜ ಬಿತ್ತಿದಂತಾಯಿತು. ನೈತಿಕತೆ ಎಂಬ ವಿಷಯವು ಪಠ್ಯ ಪುಸ್ತಕದ ಅಕ್ಷರಗಳಲ್ಲಿ ಸೀಮಿತವಾಗದೆ, ನಿತ್ಯ ಜೀವನದಲ್ಲಿ ಅನ್ವಯವಾಗುವಂತೆ ಪ್ರೇರಣೆಯಾದದ್ದು ವಿಶೇಷವಾಗಿದೆ. ಇಂತಹ ತರಗತಿಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉತ್ತಮತೆ, ಜವಾಬ್ದಾರಿ ಹಾಗೂ ಮಾನವೀಯತೆಯ ಆಳವಾದ ಅರಿವನ್ನು ಮೂಡಿಸುತ್ತವೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂಬ ಆಶಯ ವ್ಯಕ್ತವಾಯಿತು.

Related posts

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನಲ್ಲಿ ನಡೆದ ಘಟನೆ: ನದಿಯಲ್ಲಿ ಕಾಲು ಜಾರಿ ಬಿದ್ದು ನಾವೂರಿನ ಯುವಕ ಮನ್ಸೂರ್ ಮೃತ್ಯು

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿ ಮನೆಗೆ ಮೆಸ್ಕಾಂ ವಿಜಿಲೆನ್ಸ್ ಎ ಡಬ್ಲ್ಯೂ ಇ ಪ್ರವೀಣ್ ಹಾಗೂ ಮೆಸ್ಕಾಂ ವಿಜಿಲೆನ್ಸ್ ಪೊಲೀಸ್ ಭೇಟಿ

Suddi Udaya

ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಶೈಲೇಶ್ ಕುಮಾರ್ ಕುತೋ೯ಡಿ

Suddi Udaya

ನೆರಿಯ, ಕೊಕ್ಕಡದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ನಾಯಕರು

Suddi Udaya

ಗುರುವಾಯನಕೆರೆ ಶ್ರೀ ಶಾರದಾಂಭ ಭಜನಾ ಮಂಡಳಿ ವತಿಯಿಂದ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ

Suddi Udaya

ಎರಡನೇ ವಾತಿಕಾನ್ ಮಹಾಸಮ್ಮೇಳನದ ಸಂವಿಧಾನಿಕ ದಾಖಲೆಗಳ ಕುರಿತು ವಿಶೇಷ ಕಲಿಕಾ ಶಿಬಿರ

Suddi Udaya
error: Content is protected !!