ನಡ : ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ಜೂ. 21 ರಂದು ವಿಶ್ವ ಯೋಗ ದಿನವನ್ನು ನಡ ಸರಕಾರಿ ಪ್ರೌಢ ಶಾಲೆಯಲ್ಲಿ ಆಚರಿಸಲಾಯಿತು.

ಸುಮಾರು 6000 ವರ್ಷಗಳ ಇತಿಹಾಸವಿರುವ ಯೋಗದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದವರು ಭಾರತೀಯರು. ದೇಹ ಮನಸ್ಸು ಮತ್ತು ಆಧ್ಯಾತ್ಮಿಕತೆಗಳನ್ನು ಕೂಡಿಸುವ ಏಕ ಮಾರ್ಗವೇ ಯೋಗ. ಯೋಗದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗದ ಹಲವು ಆಸನಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಯೋಗದ ಮಹತ್ವವನ್ನು ಪರಿಚಯಿಸಲಾಯಿತು.


ಶಾಲಾ ಮುಖ್ಯ ಶಿಕ್ಷಕ ಮೋಹನ ಬಾಬು ಡಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಶಿಕ್ಷಕ ಸುರೇಶ್ ಶೆಟ್ಟಿ ನಿರೂಪಿಸಿ ಯೋಗದ ನಾನಾ ಆಸನಗಳನ್ನು ಪರಿಚಯಿಸುವ ಮೂಲಕ ಮಕ್ಕಳಿಗೆ ಸೂಕ್ತ ತರಬೇತಿ ನೀಡಿದರು. ಶಿಕ್ಷಕರಾದ ಶಿವಪುತ್ರ ಸುಣಗಾರ, ಸೆಫಿಯಾ, ಜಯ ಜೆಸಿಂತಾ ಸ್ಟ್ರೆಲ್ಲಾ, ಸುಧಾ ಉಪಸ್ಥಿತರಿದ್ದರು.











