ಬೆಳ್ತಂಗಡಿ: ಎಸ್.ಡಿ.ಪಿ.ಐ 17ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮ ಬೆಳ್ತಂಗಡಿಯ ಜಮೀಯತುಲ್ ಫಲಾಹ್ ಸಂಕೀರ್ಣದ ಮುಂಭಾಗದಲ್ಲಿ ಜೂ.21ರಂದು ನಡೆಯಿತು.
ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಎಸ್. ವಹಿಸಿದ್ದರು.

ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಸ್.ಡಿ.ಪಿ.ಐ. ಯು ಸಂವಿಧಾನವನ್ನು ಅಪ್ಪಿಕೊಂಡಿದ್ದು, ಇಲ್ಲಿ ಮೋಸ, ವಂಚನೆಗೆ ಅವಕಾಶವಿಲ್ಲ. ನಮ್ಮಲ್ಲಿ ಕಾಯಕ ಮಾಡುವಂತಹ ಸೇವಕರು ಇರುವುದೇ ಹೊರತು ಯಾವುದೇ ರೀತಿಯ ನಾಯಕರುಗಳು ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಡ್ವಕೇಟ್ ಅಶ್ರಫ್ ಅಗ್ವಾಡಿ, ಸಮಾಜವಾದಿ ಚಿಂತಕರು ದಾಮೋದರ್ ಬಿ., ಮಂಗಳೂರು ಗ್ರಾಮಾಂತರ ಜಿಲ್ಲೆ ಉಪಾಧ್ಯಕ್ಷರು ಇನಾಸ್ ರೊಡ್ರಿಗಸ್, ಮ೦ಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದೀಕ್ ಅಲೆಕ್ಕಾಡಿ, ನವಾಝ್ ಷರೀಫ್ ಕಟ್ಟೆ, ಅಶ್ರಫ್ ತಲಪಾಡಿ, ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಟರ್ ಬೆಳ್ತಂಗಡಿ, ಸಮಿತಿ ಸದಸ್ಯರಾದ ಆನಂದ ಮಿತ್ತಬೈಲ್, ಹನೀಫ್ ಪುಂಜಾಲಕಟ್ಟೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವುಮೆನ್ಸ್ ಇಂಡಿಯಾ ಮೊಮೆಂಟ್ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷೆ ಕ್ಷಮಾ ಅಲಿ, ಎಸ್.ಡಿ.ಪಿ.ಐ. ನ ಪದಾಧಿಕಾರಿಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ಅಬ್ದುಲ್ ರವುಫ್ ನಿರೂಪಿಸಿದರು. ನವಾಝ್ ಷರೀಫ್ ಕಟ್ಟೆ ಸ್ವಾಗತಿಸಿದರು.











