26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಪತ್ರಕರ್ತರಿಗೆ ಅಪಘಾತ ವಿಮೆ ಯೋಜನೆ ನೋಂದಣಿ

ಬೆಳ್ತಂಗಡಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಂಚೆ ಇಲಾಖೆಯ ಸಹಯೋಗದಲ್ಲಿ ಪತ್ರಕರ್ತ ರಿಗೆ ಅಪಘಾತ ವಿಮೆ ಯೋಜನೆಯ ನೋಂದಣಿ ಕಾರ್ಯಕ್ರಮ ಸೆ.6ರಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆಯಿತು.

ಜಿಲ್ಲಾ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅವರು ವಿಮಾ ಪತ್ರ ಹಸ್ತಾಂತರಿಸಿ ಜಿಲ್ಲಾ ಪತ್ರಕರ್ತರ ಕ್ಷೇಮಾ ಭಿವೃದ್ಧಿ ನಿಧಿಯಿಂದ ವಿಮಾ ಪ್ರೀಮಿ ಯಂನ್ನು ಭರಿಸಲಾಗುತ್ತದೆ. ರಿಲಯನ್ಸ್ ಸಂಸ್ಥೆಯ ಮೂಲಕ ವಿಮಾ ಹಣ ಪಾವತಿಯಾಗುತ್ತದೆ. ಬೆಳ್ತಂಗಡಿ, ಕಡಬ ಹಾಗೂ ಮೂಲ್ಕಿಯ ಪತ್ರಕರ್ತರ ಸಂಘದ ನಿವೇಶನದ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಮಾತುಕತೆ ನಡೆಸಿರುವುದನ್ನು ವಿವರಿಸಿದರು. ಅಂಚೆ ಅಧಿಕಾರಿ ಸುಂದರ್ ಸಾಲಿಯಾನ್ ವಿಮಾ ನೋಂದಣಿ ಪ್ರಕ್ರಿಯೆ ನಡೆಸಿಕೊಟ್ಟರು.

ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ವಿಮಾ ಪ್ರಯೋಜನಗಳನ್ನು ತಿಳಿಸಿದರು. ತಾಲೂಕು ಸಂಘದ ಅಧ್ಯಕ್ಷ ಪ್ರಸಾದ್‌ ಶೆಟ್ಟಿ, ಕಾರ್ಯದರ್ಶಿ ತುಕಾರಾಮ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸದಸ್ಯರು ಉಪಸ್ಥಿತರಿದ್ದರು.

Related posts

ನೆಲ್ಯಾಡಿ ಲಾವತಡ್ಕದಲ್ಲಿ ಕಾರು ಪಲ್ಟಿ : 6 ಮಂದಿಗೆ ಗಂಭೀರ ಗಾಯ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರನ್ನು ಭೇಟಿ ಮಾಡಿದ ಬೆಳ್ತಂಗಡಿ ವಕೀಲರ ಸಂಘ

Suddi Udaya

ಮಾ.8 ರಿಂದ 11 ರವರೆಗೆ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿದ್ವತ್ ಕಾಲೇಜಿನಿಂದ ಪ್ರತಿಭಾನ್ವೇಷಣೆ ಪರೀಕ್ಷೆ– 2026

Suddi Udaya

ಓಡಿಲ್ನಾಳ: ಕೋರ್ಯಾರು ರಸ್ತೆಯಲ್ಲಿ ವಿದ್ಯುತ್ ಲೈನ್ ಗೆ ಬಿದ್ದ ಮರ

Suddi Udaya

ಉಜಿರೆ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!