ಬೆಳ್ತಂಗಡಿ : ಭಾರತೀಯ ಮಜ್ದೂರ್ ಸಂಘದೊಂದಿಗೆ ಸಂಯೋಜಿಸಲ್ಪಟ್ಟ ರಿಕ್ಷಾ ಚಾಲಕ ಮಾಲಕರ ಸಂಘ ಬೆಳ್ತಂಗಡಿ ಇದರ ಚಾಲಕರ ಆಪತ್ಕಾಲದ ಸಹಾಯಧನ ನೀಡಲು ಅಂಗೀಕರಿಸಿದ ಕ್ಷೇಮನಿಧಿ ಯೋಜನೆಯ ವತಿಯಿಂದ ಪೆರಾಡಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿನೇಶ್ ಪೆರಾಡಿ ಇವರು ರಿಕ್ಷಾ ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಸ್ತುತ ಮನೆಯಲ್ಲೇ ವಿಶ್ರಾಂತಿಯಲ್ಲಿರುವ ಕಾರಣ ಇವರಿಗೆ ಕ್ಷೇಮನಿಧಿಯ ಆಪತ್ಕಾಲದ 27ನೇ ಸಹಾಯಧನವಾಗಿ ರೂ. 5000 ಮೊತ್ತವನ್ನು ನೀಡಿ ಇವರ ಚಿಕಿತ್ಸೆಗೆ ಸಹಕರಿಸಲಾಯಿತು.
ಈ ಸಂದರ್ಭದಲ್ಲಿ ಬಿಎಂಎಸ್ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ಪೆರಾಡಿ ಹಾಗೂ ಪೆರಾಡಿ ರಿಕ್ಷಾ ಚಾಲಕ ಸಂಘದ ಸದಸ್ಯರಾದ ಸದಾಶಿವ ಕುಲಾಲ್, ಹರೀಶ್ ಉಪಸ್ಥಿತರಿದ್ದರು.











