32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ ಶಾಲಾ ಕ್ರೀಡಾ ಸಂಘ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಹಾಗೂ ಕಬ್ ಮತ್ತು ಬುಲ್ ಬುಲ್ ಹಾಗೂ ಬನ್ನಿಸ್ ಇದರ ಜಂಟಿ ಆಶಯದೊಂದಿಗೆ ಜರುಗಿತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆಯ ವಿದ್ಯಾರ್ಥಿನಿಯರಾದ ಕು| ಸಾನಿಧ್ಯ ಹಾಗೂ ಕುಮಾರಿ ಅನನ್ಯ ಆಗಮಿಸಿ ವಾರವಿಡೀ ವಿದ್ಯಾರ್ಥಿಗಳಿಗೆ ಯೋಗ ತರಬೇತು ನೀಡಿದ್ದು ಅವರು ವಾರವಿಡೀ ಹೇಳಿಕೊಟ್ಟ ಯೋಗದ ವಿವಿಧ ಆಸನಗಳನ್ನು ಮಾಡುವುದರ ಮೂಲಕ ಸಮಾರೋಪ ಸಮಾರಂಭವನ್ನು ಸಮಾಪ್ತಿಗೊಳಿಸಿದರು.

ಭಾರತ ಸ್ಕೌಟ್ ಗೈಡ್ ನ ವಿದ್ಯಾರ್ಥಿಗಳು ಬನ್ನಿ ಹಾಗೂ ಕಬ್ ಮತ್ತು ಬುಲ್ ಬುಲ್ ಗಳಿಗೆ ತಾವು ಕಲಿತಂತಹ ಆಸನಗಳ ತರಬೇತಿಯನ್ನು ನೀಡಿದರು. ಸ್ಕೌಟ್ ಮಾಸ್ಟರ್ ಶ್ರೀಮತಿ ಆಶಾ ಕುಮಾರಿ ಇವರು ಅತಿಥಿಗಳಿಗೆ ಧನ್ಯವಾದವಿತ್ತರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಇವರ ಮಾರ್ಗದರ್ಶನದಲ್ಲಿ ಶಾಲಾ ಕ್ರೀಡಾ ಸಂಘದ ಮಾರ್ಗದರ್ಶಕರಾಗಿರುವ ಸಂತೋಷ್ ಇವರ ಸಹಾಯದೊಂದಿಗೆ ಯೋಗ ದಿನಾಚರಣೆ ಸಂಪನ್ನಗೊಂಡಿತು. ಶಾಲಾ ಶಿಕ್ಷಕ ವೃಂದ, ಕಬ್ ಬುಲ್ ಬುಲ್ ಹಾಗೂ ಸ್ಕೌಟ್ ಹಾಗೂ ಗೈಡ್ ಇದರ ಜವಾಬ್ದಾರಿ ಹೊತ್ತ ಶಿಕ್ಷಕರು ಭಾಗವಹಿಸಿದ್ದರು.

Related posts

ಪಡಂಗಡಿ ಗ್ರಾ.ಪಂ. ನಲ್ಲಿ ಕ್ರಿಯಾ ಯೋಜನೆ ತಯಾರಿ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya

ಧರ್ಮಸ್ಥಳ: 22ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಫಲಿತಾಂಶ

Suddi Udaya

ಕಡಿರುದ್ಯಾವರ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya

ಚಿತ್ರಕಲಾ ಸ್ಪರ್ಧೆ: ಬೆಳ್ತಂಗಡಿ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆರಾಧ್ಯ ಪ್ರಥಮ ಸ್ಥಾನ

Suddi Udaya

ಜಿಲ್ಲಾ ಮಟ್ಟದ ಕ್ರೀಡಾಕೂಟ: ನಡ ಕಾಲೇಜಿಗೆ ತೃತೀಯ ಸ್ಥಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಲೇಡಿ ಜೇಸಿ ಮತ್ತು ಜೆಜೆಸಿ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!