25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತೀಯ ಡೆಂಟಲ್ ಅಸೋಸಿಯೇಷನ್ ನ ಪುತ್ತೂರು ಶಾಖೆಯ ಅಧ್ಯಕ್ಷೆ ಡಾ| ಆಶಾ ರಾಘವೇಂದ್ರ ಪಿದಮಲೆ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಯೋಗವು ಮನಸ್ಸಿಗೆ ಆನಂದ ನೀಡುತ್ತದೆ, ಕೋಪವನ್ನು ನಿಯಂತ್ರಿಸುತ್ತದೆ. ತಾಳ್ಮೆ ಎನ್ನುವ ಜೀವನಪಾಠವನ್ನು ಕಲಿಸುತ್ತದೆ ಎಂದರು.

ಮುಖ್ಯ ಅತಿಥಿ, ಉಜಿರೆಯ ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ| ಪ್ರಣವ್ ಪಿ.ಪಿ. ಮಾತನಾಡಿ, ಯೋಗವು ಮಾನಸಿಕವಾಗಿ ದೈಹಿಕವಾಗಿ ಪರಿಣಾಮ ಬಿರುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ ಮುಂತಾದ ಸಮಸ್ಯೆಗಳನ್ನು ಯೋಗದಿಂದ ಗುಣಪಡಿಸಬಹುದು. ಕೋವಿಡ್ ಸಂದರ್ಭದಲ್ಲಿ ಯೋಗ ಉಪಯೋಗವಾಗಿದೆ ಎಂದರು. ಯೋಗದ ಒಂದು ಶುದ್ಧೀಕರಣ ವ್ಯಾಯಾಮವಾದ ನೌಲಿ ಕ್ರಿಯೆಯ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು.

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶಿಕ್ಷಣ ಸಂಯೋಜಕ ಶಶಿಶೇಖರ್ ಎನ್. ಕಾಕತ್ಕರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್, ಯೋಗ ತರಬೇತುದಾರರು, ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕ್ಷಮಾ ಮತ್ತು ಅಮೃತವರ್ಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಸುರೇಶ್ ಕೆ. ಸ್ವಾಗತಿಸಿದರು. ಸಂಸ್ಕೃತ ಅಧ್ಯಾಪಕಿ ಭಾಗ್ಯಲಕ್ಷ್ಮೀ ಅತಿಥಿ ಪರಿಚಯ ನೀಡಿದರು. 8ನೇ ತರಗತಿ ವಿದ್ಯಾಥಿನಿಯರು ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮ ಸಂಘಟಕ, ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ್ ವಂದಿಸಿದರು. ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

ವಿಜಯ ದಶಮಿಯಂದು ಗೆಜ್ಜೆ ಗಿರಿಯಲ್ಲಿ ಒಂಬತ್ತನೇ ಮಹಾಸಭೆ

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪೂರ್ವಭಾವಿ ಸಭೆ

Suddi Udaya

ಕಳೆಂಜ: ಜಾಗದ ವಿಚಾರವಾಗಿ ಹಲ್ಲೆ, ಬೆದರಿಕೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ವರ್ತಕರ ಸಂಘ ಹಾಗೂ ಬೆಳ್ತಂಗಡಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವತಿಯಿಂದ ಸ್ವಾತಂತ್ರ ದಿನಾಚರಣೆ

Suddi Udaya

ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ ಪ್ರಕರಣ: ಬಿಹಾರದ ಆರೋಪಿಯನ್ನು ಹೆಡೆಮುರಿ ಕಟ್ಟಿದ ವೇಣೂರು ಪೊಲೀಸರು

Suddi Udaya

ಕಳೆಂಜ ಗ್ರಾ,ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಭೆ

Suddi Udaya
error: Content is protected !!