23.5 C
ಪುತ್ತೂರು, ಬೆಳ್ತಂಗಡಿ
March 7, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಮ್. ಪಿಯು ಕಾಲೇಜಿನಲ್ಲಿ ಯೋಗ ಶಿಬಿರ ಉದ್ಘಾಟನೆ

ಉಜಿರೆ: 11ನೇ ವಿಶ್ವ ಯೋಗ ದಿನದ ಪ್ರಯುಕ್ತ  ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವತಿಯಿಂದ ಯೋಗ  ಶಿಬಿರವನ್ನು  ಆಯೋಜಿಸಲಾಗಿತ್ತು. ಶಿಬಿರವನ್ನು  ಎಸ್ ಡಿ ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಹಾಯಕ ಪ್ರಧ್ಯಾಪಕಿ ಡಾ. ಹರ್ಷಿಣಿ  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ” ಯೋಗ ಮನಸ್ಸನ್ನು ಹತೋಟಿಯಲ್ಲಿ ಇಡಲು ಸಹಕಾರಿ. ಪ್ರತಿ ದಿನ ಯೋಗ ಮಾಡುವುದರಿಂದ ಉತ್ತಮ ಅರೋಗ್ಯ ಕಾಪಾಡಿಕೊಳ್ಳಬಹುದು “ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಮಾತನಾಡಿ ” ಯೋಗ ಶಿಬಿರದಲ್ಲಿ ಕಲಿತ ಯೋಗ ಜ್ಞಾನವನ್ನು ಬರಿ ಇಲ್ಲಿಗೆ ಸೀಮಿತಗೊಳಿಸದೆ ಮುಂದೆಯೂ ಅಳವಡಿಸಿಕೊಂಡು  ಅರೋಗ್ಯವಂತ ಜೀವನ ನಡೆಸುವಂತಾಗಲಿ  ” ಎಂದು ಹೇಳಿದರು. 

ವೇದಿಕೆಯಲ್ಲಿ ಉಜಿರೆ ಎಸ್ ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಡಾ.ಚೇತನಾ ಭಟ್ , ಜೀವ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಕೋಮಲ್ ಪಿ ಸಿ, ಎನ್ ಎಸ್ ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್,ಸಹಯೋಜನಾಧಿಕಾರಿ ಶ್ರೀಮತಿ ಶೋಭಾ ಪಿ ಉಪಸ್ಥಿತರಿದ್ದರು. 

ಸ್ವಯಂ ಸೇವಕಿ ರಾಶಿಕಾ ನಿರೂಪಿಸಿ   ನಾಗಲಕ್ಷ್ಮಿ ಸ್ವಾಗತಿಸಿ ಮೌಲ್ಯ ವಂದಿಸಿದರು.

Related posts

ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ವೀರಣ್ಣ ಶೆಟ್ಟಿರವರಿಗೆ ಸೇವಾ ನಿವೃತ್ತಿ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

Suddi Udaya

ನಾವೂರು: ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಸ್ವಚ್ಚತಾ ಆಂದೋಲನ

Suddi Udaya

ಇಂದು (ಡಿ.2) ಗುರುವಾಯನಕೆರೆ ಎಕ್ಸೆಲ್ ಸಂಸ್ಥೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ: ಚೌಕಿ ಪೂಜೆ

Suddi Udaya

ಕರ್ನೋಡಿ ಸ.ಉ.ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ನೋಟ್ ಬುಕ್-ಲೇಖನ ಸಾಮಗ್ರಿಗಳ ವಿತರಣೆ

Suddi Udaya

ಶ್ರೀ ಧ.ಮಂ.ಅ.ಹಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!