September 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಂಗಡಿ: ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

ಹೊಸಂಗಡಿ : ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು , ಆಸ್ಪತ್ರೆ ಮಿಜಾರ್ ಮತ್ತು ರಾಜ್ಯ ಪ್ರಶಸ್ತಿ ಪಡೆದ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಜೂ.22 ರಂದು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾ ಭವನದಲ್ಲಿ ನಡೆಯಿತು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ ಫ್ರೆಂಡ್ಸ್ ಕ್ಲಬ್ ಸದಾ ಗ್ರಾಮಸ್ಥರ ಆರೋಗ್ಯದ ಬಗ್ಗೆ ಒತ್ತುಕೊಟ್ಟು ಆಳ್ವಾಸ್ ಆಸ್ಪತ್ರೆ ವತಿಯಿಂದ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆಯ ಏರ್ಪಾಡು ಮಾಡುತ್ತಿದೆ. 50 ವರ್ಷಗಳು ಮೇಲ್ಪಟ್ಟವರ ರಕ್ತದೊತ್ತಡ ಹಾಗೂ ಮಧುಮೇಹದ ತಪಾಸಣೆಗಾಗಿ ತನ್ನ ಕ್ಲಬ್ ನ ಸಭಾಂಗಣವನ್ನು ಕೊಟ್ಟಿದ್ದು ಗ್ರಾಮಸ್ಥರು ಇದರ ಸದುಪಯೋಗ ಮಾಡಬೇಕೆಂದು ಮನವಿ ಮಾಡಿದರು.

ಆಳ್ವಾಸ್ ಹೋಮಿಯೋಪತಿಕ್ ಆಸ್ಪತ್ರೆ ವೈದ್ಯ ಡಾ. ಭರತ್ ಮಾತನಾಡಿ, ಆರೋಗ್ಯ ಇದ್ದರೆ ಮಾತ್ರ ಜೀವನ ಮತ್ತು ನಮ್ಮ ಸಂಸ್ಥೆಯ ಆರೋಗ್ಯ ಶಿಬಿರದ ಸದುಪಯೋಗಪಡಿಸುವಂತೆ ಕರೆ ನೀಡಿ ಈ ನಿಟ್ಟಿನಲ್ಲಿ ನಿರಂತರವಾಗಿ ಸಹಕರಿಸುತ್ತಿರುವ ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಮತ್ತು ಮಾಜಿ ಅಧ್ಯಕ್ಷ ದಿ| ಹರಿಪ್ರಸಾದ್ ರವರನ್ನು ಸ್ಮರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಡಾ ಪ್ರಶಾಂತ್ , ಡಾ ಶಿವಕುಮಾರ್ , ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್ ಸೀತಾರಾಮ ರೈ ,ಬೆಳ್ತಂಗಡಿ ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ ,ಕ್ಲಬ್ ಅಧ್ಯಕ್ಷ ಶ್ರೀಪತಿ ಉಪಾದ್ಯಾಯ, ಗ್ರಾ.ಪಂ. ಸದಸ್ಯ ಆನಂದ ಬಂಗೇರ ಕೊಡಂಗೇರಿ ಉಪಸ್ಥಿತರಿದ್ದರು.

ಚಂದ್ರ ಪೇರಿ ,ಭರತ್ ,ನಾಗೇಶ್ ಕೋಟಿಯಾನ್ ಹೊಸಂಗಡಿ ,ಸಚ್ಚಿದಾನಂದ ಪೆರಿಂಜೆ ,ದೇವದಾಸ್ ,ರಾಜೇಶ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಶ್ರೀಪತಿ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಜಿತ್ ವಂದಿಸಿದರು.

Related posts

ಬೆಳ್ತಂಗಡಿ: ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ನಾಯಕರ ಆಯ್ಕೆ

Suddi Udaya

ಶ್ರೀ ಗು.ನಾ.ಸ್ವಾ. ಸೇವಾ ಸಂಘ, ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ ಕುವೆಟ್ಟು- ಓಡಿಲ್ನಾಳ ಗ್ರಾಮ ಸಮಿತಿ ವತಿಯಿಂದ ಆಟಿಡೊಂಜಿ ಕೂಟ

Suddi Udaya

ಕನ್ನಡದಲ್ಲಿ ಬರಲಿದೆ ದಸ್ಕತ್ ತುಳು ಚಿತ್ರ

Suddi Udaya

ಬಂಟ್ವಾಳದಲ್ಲಿ ಸಮರ ಸೌಗಂಧಿಕೆ ತಾಳಮದ್ದಳೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆಲಂಗಾಣ ರಾಜ್ಯದ ಸಾರಿಗೆ ಸಚಿವ ಪೊಣ್ಣಂ ಪ್ರಭಾಕರ್ ಭೇಟಿ

Suddi Udaya

ಕೊಯ್ಯೂರು ರಸ್ತೆಗೆ ಉರುಳಿದ ಹೆಮ್ಮರ : ಸ್ಥಳೀಯರ ಸಹಕಾರದಲ್ಲಿ ಇಲಾಖೆಯಿಂದ ತೆರವು

Suddi Udaya
error: Content is protected !!