ಹೊಕ್ಕಾಡಿಗೋಳಿ: ಸ. ಉ. ಪ್ರಾ. ಶಾಲೆ ಹೊಕ್ಕಾಡಿಗೋಳಿಯಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷ ದಿನೇಶ್ ಹುಲಿಮೇರು ಇವರ ಅಧ್ಯಕ್ಷತೆಯಲ್ಲಿ ದಾನಿಗಳಿಂದ ಮಕ್ಕಳಿಗೆ ವಿವಿಧ ಕೊಡುಗೆಗಳನ್ನು ವಿತರಿಸಲಾಯಿತು.
EDRT ಸಂಸ್ಥೆಯಿಂದ ಶ್ರೀಮತಿ ಮೀನಾಕ್ಷಿ ಮಾತಾಜಿ ಮತ್ತು ಹರೀಶ್ ಆಚಾರ್ಯ ಇವರ ನೇತೃತ್ವದಲ್ಲಿ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ ಮತ್ತು ಕ್ರೀಡಾ ಸಾಮಗ್ರಿ, ಎಸ್. ಮಹಮ್ಮದ್ ಟೋಟಲ್ ಕ್ಲೀನ್ ಲಾಂಡ್ರಿ ಮಾಲೀಕರು ಇವರಿಂದ ಟ್ರ್ಯಾಕ್ ಸೂಟ್, ಮನೋಜ್ ಐತೇರಿ ಇವರಿಂದ ಉಚಿತ ನೋಟ್ ಪುಸ್ತಕ, ನರೇಶ್ ಪೂಜಾರಿ ಪ್ರಧಾನ ಅರ್ಚಕರು ಶ್ರೀ ಕೊರಗಜ್ಜ ಕ್ಷೇತ್ರ, ದೇಲೋಡಿ, ಆರಂಬೋಡಿ ಇವರಿಂದ ಉಚಿತ ನೋಟ್ ಪುಸ್ತಕ, ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿಜಯ ಕುಂಜಾಡಿ ಇವರಿಂದ ಹೊಸದಾಗಿ ದಾಖಲಾದ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಉಚಿತ ನೋಟ್ ಪುಸ್ತಕ, ಶ್ರೀಮತಿ ಜೂಲಿಯಾನ ಡಿಸೋಜ ಇವರ ಮಗ ಅಲ್ವಿನ್ ಡಿಸೋಜಾ ಇವರಿಂದ ಉಚಿತ ಛತ್ರಿ, ಕಿರಣ್ ಮಂಜಿಲ ಉದ್ಯಮಿ ಇವರಿಂದ ಗೌರವ ಶಿಕ್ಷಕರ ವೇತನ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಇವರಿಂದ ಎರಡು ಫ್ಯಾನ್ ಕೊಡುಗೆಯಾಗಿ ನೀಡಿದರು.
ಕೊಡುಗೆ ನೀಡಿದ ಎಲ್ಲಾ ದಾನಿಗಳನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಸಂತೋಷ್ ಮಂಜಲ, ನಿತೇಶ್, ಶಾಲಾ ಎಸ್. ಡಿ. ಎಂ. ಸಿ. ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶ್ರೀಮತಿ ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರ ಸ್ವಾಗತಿಸಿ, ಶ್ರೀಮತಿ ಶುಭವತಿ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಮೆಟಿಲ್ಡಾ ಮತ್ತು ಶ್ರೀಮತಿ ಸಿಲ್ವಿಯ ಮಿರಾಂದ, ಕುಮಾರಿ ಸುತೀಕ್ಷ ದಾನಿಗಳ ಬಗ್ಗೆ ತಿಳಿಸಿದರು.











