ಬೆಳ್ತಂಗಡಿ: ಅಳದಂಗಡಿಯ ವಿದುಷಿ ವಿದ್ಯಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ 2025ರಲ್ಲಿ 12ನೇ ತರಗತಿ ಪೂರೈಸಿದ ಮತ್ತು ಎಂಜಿನಿಯರಿಂಗ್ (ಬಿಇ/ಬಿ. ಟೆಕ್) ಅಥವಾ ಡಿಪ್ಲೊಮಾ ಕೋರ್ಸ್ ಗಳಲ್ಲಿ ಪ್ರವೇಶ ಪಡೆದ ಬೆಳ್ತಂಗಡಿ ತಾಲೂಕು ಮೂಲದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.
12ನೇ ತರಗತಿಯಲ್ಲಿ ಕನಿಷ್ಠ ಶೇ.70 ಅಂಕ, ಮಾನ್ಯತಾಪ್ರಾಪ್ತ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಕಾಲೇಜಿಗೆ ಪ್ರವೇಶ, ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು. ಜು.15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸೀಮಿತ ಮಂದಿಗೆ ಮಾತ್ರ ಅವಕಾಶವಿದ್ದು, ಅರ್ಜಿ ಸಲ್ಲಿಸುವವರು (<https://forms. gle/prPzEhZPSHmUF88z5>) ಭೇಟಿ ನೀಡಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.











