September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಸಹಕಾರ ಭಾರತಿ ಅಭ್ಯರ್ಥಿಗಳ ಅವಿರೋಧ ಆಯ್ಕೆ

ಕಳೆಂಜ: ಇಲ್ಲಿಯ ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಆಡಳಿತ ಮಂಡಳಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳಾ ಮೀಸಲು ಸ್ಥಾನಕ್ಕೆ ಮೀಸಲಿರಿಸಿದ ಸ್ಥಾನದಿಂದ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ೧೧ ಜನ ಸಹಕಾರ ಭಾರತಿ ಅಭ್ಯರ್ಥಿಗಳು ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.


ನಿರ್ದೇಶಕರಾಗಿ ರತ್ನಾಕರ ಗೌಡ ಗುತ್ತು (ಸಾಮಾನ್ಯ), ಸುಬ್ರಾಯ ಗೌಡ ಕೊಡಂಗೆ (ಸಾಮಾನ್ಯ), ಆನಂದ ಗೌಡ ಭಂಡಾರಿಮಜಲು (ಸಾಮಾನ್ಯ), ನಾರಾಯಣ ಗೌಡ ಪಲ್ಲದಂಗಡಿ (ಸಾಮಾನ್ಯ), ಹರೀಶ್ ರಾವ್ ಕಾಯಡ (ಸಾಮಾನ್ಯ), ಚಂದ್ರಶೇಖರ ಗೌಡ ಪಿಲ್ಯಡ್ಕ (ಸಾಮಾನ್ಯ), ಶಶಿಕಲಾ ಧನಂಜಯ ಗೌಡ (ಸಾಮಾನ್ಯ), ಸುಂದರ ಪೂಜಾರಿ (ಹಿಂದುಳಿದ ವರ್ಗ ಎ ಪ್ರವರ್ಗ), ಮೋಹನ ಗೌಡ ಬದಿಮಾರ್ (ಹಿಂದುಳಿದ ವರ್ಗ ಬಿ ಪ್ರವರ್ಗ), ದೇವಕಿ ಪದ್ಮನಾಭ ಗೌಡ ಬೀಜದಡಿ (ಮಹಿಳಾ ಮೀಸಲು), ಭಾರತಿ ಧರ್ಣಪ್ಪ ಗೌಡ ವಳಂಬಲ (ಮಹಿಳಾ ಮೀಸಲಾತಿ) ಆಯ್ಕೆಯಾಗಿದ್ದಾರೆ.


ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಜೂ. 27ಕ್ಕೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ.ವಿ. ನಡೆಸಿದರು. ಕಾರ್ಯದರ್ಶಿ ಸುಶಾಂತ್ ಸಹಕರಿಸಿದರು.

Related posts

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕೊಯ್ಯೂರಿನಲ್ಲಿ ಕ.ಸಾ.ಪ ತಾಲೂಕು ಸಮ್ಮೇಳನ; ಡಾ. ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ.ಯೋಜನೆ, ನಾಲ್ಕೂರು ಎ.ಬಿ ಒಕ್ಕೂಟದ ಪದಗ್ರಹಣ ಸಮಾರಂಭ: ನವಜೀವನ ಸಮಿತಿ ಸದಸ್ಯರಿಗೆ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ

Suddi Udaya

ಕುಕ್ಕೇಡಿ ಗ್ರಾ.ಪಂ. ವತಿಯಿಂದ “ಆರೋಗ್ಯ ತಪಾಸಣಾ ಶಿಬಿರ”

Suddi Udaya

ಮಚ್ಚಿನ ಸ.ಉ. ಹಿ.ಪ್ರಾ. ಶಾಲೆಯ ಮೇಲ್ಚಾವಣಿ ಸೋರಿಕೆ: ಪೋಷಕರಿಂದ ಶೀಟ್, ಹಂಚು ಹಾಕಿ ಶ್ರಮದಾನ

Suddi Udaya

ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!