ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು: ಕೊಲ್ಪಾಡಿ ಶಾಲೆಗೆ ದಾನಿಗಳಿಂದ ಕೊಡುಗೆಗಳ ಹಸ್ತಾಂತರ

ಬೆಳಾಲು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ವಿವಿಧ ದಾನಿಗಳು ನೀಡಿದ ಕೊಡುಗೆಗಳನ್ನು ಶಾಲೆಗೆ ಹಸ್ತಾಂತರ ಮಾಡಲಾಯಿತು.

ಶಾಲೆಯ ಐದನೇ ತರಗತಿಯ ನಿರ್ಗಮಿತ ವಿದ್ಯಾರ್ಥಿಗಳು ಊಟದ ತಟ್ಟೆಗಳನ್ನು ಇಡುವ ಕಬ್ಬಿಣದ ಸ್ಟ್ಯಾಂಡ್, ಶಾಲಾ ಹಿರಿಯ ವಿದ್ಯಾರ್ಥಿ ಲೋಕೇಶ್ ಓನಾಜೆಯವರು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಹಾಗೂ ಬೆಳ್ತಂಗಡಿಯ ಮುಳಿಯ ಜುವ್ಯೆಲರ್ಸ್ ವತಿಯಿಂದ ಕೊಡೆಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿರ್ಗಮಿತ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಾಧವ ಗೌಡರು ಎಲ್ಲಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾದ ಶ್ರೀಮತಿ ಲೇಖಾವತಿ, ನೂತನ ಎಸ್.ಡಿ‌.ಎಂ.ಸಿ.ಅಧ್ಯಕ್ಷರಾದ ಹರೀಶ್ ಕೆರಕೋಡಿ, ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ತೀರ್ಥಲತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಅತಿಥಿ ಶಿಕ್ಷಕರಾದ ದಿನೇಶ್ ಕೆ. ಸ್ವಾಗತಿಸಿದರು. ಗೌರವ ಶಿಕ್ಷಕರಾದ ಕರಿಯಣ್ಣ ಗೌಡ ವಂದಿಸಿದರು.

Related posts

ಬೆಳ್ತಂಗಡಿ: ಕಲ್ಲಗುಡ್ಡೆ ನಿವಾಸಿ ಚಂದ್ರ ನಿಧನ

Suddi Udaya

ನಾವರ: ಮನೆಯೊಳಗೆ ಅವಿತುಕೊಂಡಿದ್ದ ಕಾಳಿಂಗ ಸರ್ಪ, ಭಯಭೀತರಾದ ಕುಟುಂಬ: ಸ್ನೇಕ್ ಅಶೋಕ್ ಲಾಯಿಲರವರಿಂದ ಯಶಸ್ವಿ ಕಾರ್ಯಾಚರಣೆ

Suddi Udaya

ಉಜಿರೆ ಹಳೇಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಟ ರಮೇಶ್ ಅರವಿಂದ್ ಭೇಟಿ: ಅಭಿವೃದ್ಧಿ ಹೊಂದುತ್ತಿರುವ ಶಾಲೆಯ ಬಗ್ಗೆ ಮೆಚ್ಚುಗೆ

Suddi Udaya

ಬೆಳ್ತಂಗಡಿ ಸರಕಾರಿ ಸಮುದಾಯ ಆಸ್ಪತ್ರೆಗೆ ಆರೋಗ್ಯ ರಕ್ಷಾ ಸಮಿತಿ ಭೇಟಿ: ಡೆಂಗ್ಯೂ ಹೆಚ್ಚಾಗುತ್ತಿರುವ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ವೈದ್ಯಾಧಿಕಾರಿ ಜೊತೆ ಸಭೆ

Suddi Udaya

ಆರತಕ್ಷತೆ ಊಟ ಸೇವಿಸಿದ ಮಂದಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು: ಓರ್ವೆ ಮಹಿಳೆ ಸಾವು-ಮತ್ತೋರ್ವೆ ಗಂಭೀರ

Suddi Udaya

ಡಿ.3: ಬೆಳ್ತಂಗಡಿ ಹಳೆಕೋಟೆ ಜೋರ್ಡನ್ ರಿವರ್ ವೆಲ್ ವ್ಯೂ ರೂಮ್ಸ್ & ಸೂಟ್ಸ್ ವಿಸ್ಕೃತ ಕಟ್ಟಡದ ಉದ್ಘಾಟನೆ

Suddi Udaya
error: Content is protected !!