September 6, 2026
ಆಯ್ಕೆಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಧರ್ಮಸ್ಥಳ ಗ್ರಾಮ ಸಮಿತಿ ರಚನೆ

ಬೆಳ್ತಂಗಡಿ: ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ತಾಲೂಕು ಘಟಕ ಬೆಳ್ತಂಗಡಿ, ಇದರ ಆಶ್ರಯದಲ್ಲಿ, ಧರ್ಮಸ್ಥಳ ಗ್ರಾಮ ಸಮಿತಿಯು ಡಿ. 2 ರಂದು ಅಶೋಕನಗರದ ಸೂರ್ಯ ಸಭಾಭವನದಲ್ಲಿ ಘಟಕದ ಅಧ್ಯಕ್ಷ ದಿನೇಶ್ ಕೆ ಕೊಕ್ಕಡ, ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶೇಖರ್ ವಿ ಧರ್ಮಸ್ಥಳ, ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಶೇಖರ್ ಡಿ ಧರ್ಮಸ್ಥಳ, ಹಾಗೂ ನಿಕಟಪೂರ್ವ ಕಾರ್ಯದರ್ಶಿ ಶರತ್ ಕೊಕ್ಕಡ, ಉಪಸ್ಥಿತರಿದ್ದರು. ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೆ ಕೊಕ್ಕಡ ಮಾತನಾಡಿ, ದಿನಾಂಕ ೨೪.೧೨.೨೦೨೩ ರಂದು ಮಂಗಳೂರಿನ ಪುರಭವನದಲ್ಲಿ ನಡೆಯುವ ಆದಿದ್ರಾವಿಡ ಸಮುದಾಯದ ರಾಜ್ಯ ಸಮಾ ವೇಶದಲ್ಲಿ ಸರಕಾರಕ್ಕೆ ಸಲ್ಲಿಸಲಿರುವ ಹಕ್ಕೊತ್ತಾಯದ ಅಂಶಗಳನ್ನು ಸಭೆಗೆ ವಿವರಿಸಿ, ಸಮಾವೇಶದ ಯಶಸ್ಸಿಗೆ ಎಲ್ಲರೂ ಸಂಘಟಿತರಾಗಿ ಸಹಕರಿಸಲು ಕರೆ ನೀಡಿದರು. ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಗ್ರಾಮದ ಜಾತಿಬಾಂಧವರ ಜೊತೆ ಉತ್ತಮ ಭಾಂದವ್ಯ ಬೆಳೆಸಿಕೊಂಡು ಸಮುದಾಯಕ್ಕೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಾದರಿ ಗ್ರಾಮ ಘಟಕವಾಗಿ ರೂಪುಗೊಳ್ಳಲಿ ಎಂದು ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ಬೆಳ್ತಂಗಡಿ, ಗ್ರಾಮ ಸಮಿತಿ ಧರ್ಮಸ್ಥಳದ ನೂತನ ಅಧ್ಯಕ್ಷರಾಗಿ ಶ್ರೀ ಗಣೇಶ್ ಡಿ, ಉಪಾಧ್ಯಕ್ಷರಾಗಿ ಶ್ರೀಮತಿ ಸುಜಾತ, ಕಾರ್ಯದರ್ಶಿಯಾಗಿ ಶ್ರೀಮತಿ ಶಶಿಕಲಾ, ಕೋಶಾಧಿಕಾರಿಯಾಗಿ ಶ್ರೀ ರಾಘವ ಎಸ್, ಇವರುಗಳು ಆಯ್ಕೆಯಾದರು.

ಶ್ರೀಮತಿ ಸುಜಾತ ಅತಿಥಿಗಳನ್ನು ಸ್ವಾಗತಿಸಿ, ಧರ್ಮಸ್ಥಳ ಗ್ರಾಮ ಘಟಕದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಧನ್ಯವಾದವಿತ್ತರು.

Related posts

ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ನ್ನು ಭೇಟಿಯಾದ ಶಾಸಕ ಹರೀಶ್ ಪೂಂಜ

Suddi Udaya

ಅಶ್ರಫ್ ಆಲಿಕುಂಞಿ (ಅಚ್ಚು) ಮುಂಡಾಜೆ ಅವರಿಗೆ ಲಯನ್ಸ್ ಜಿಲ್ಲಾ “ಗೋಲ್ಡನ್ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್” ಪುರಸ್ಕಾರ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಂ| ಸಿ| ಟೆಸಿ ಮಾನುವೆಲ್ ಎಸ್ ಎಚ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ

Suddi Udaya

ವೇಣೂರು ಐಟಿಐ: ಸೋಲಾರ್ ತರಬೇತಿ ಶಿಬಿರ ಉದ್ಘಾಟನೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಅಳದಂಗಡಿ ಮಹಾಶಕ್ತಿಕೇಂದ್ರದ ಸಭೆ

Suddi Udaya

ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್‌ಇ ಶಾಲೆಗೆ ಶೇ,100 ಫಲಿತಾಂಶ

Suddi Udaya
error: Content is protected !!