30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಹೆದ್ದಾರಿಯಲ್ಲಿ ತೆರೆದ ಚರಂಡಿಗಳು: ಸುದ್ದಿ ಉದಯ ಜನಧ್ವನಿ

ಉಜಿರೆ: ಉಜಿರೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಬದಿ ಸಾರ್ವಜನಿಕರು ಓಡಾಟ ನಡೆಸುವಲ್ಲಿ ಬಹಳಷ್ಟು ತೆರೆದ ಚರಂಡಿಗಳಿದ್ದು ಅಪಾಯದ ವಾತಾವರಣವನ್ನು ತಂದೊಡ್ಡಿದೆ.

ಚರಂಡಿ ನಿರ್ಮಾಣ ಕಾಮಗಾರಿ ಅಲ್ಲಲ್ಲಿ ನಡೆದಿದ್ದು ಹೆಚ್ಚಿನ ಕಡೆಗಳಲ್ಲಿ ಚರಂಡಿಗಳನ್ನು ಮುಚ್ಚಿಲ್ಲ, ಚರಂಡಿ ಪ್ರದೇಶಗಳಲ್ಲಿ ಸುಮಾರು 4 ಅಡಿ ಅಂತರದ ತೆರೆದ ಚರಂಡಿಗಳಿದ್ದು, ಪಾದಚಾರಿಗಳು ಬಿದ್ದು ಗಾಯಗೊಂಡ ಘಟನೆ ಇತ್ತೀಚಿಗೆ ಸೋಮಂತಡ್ಕದ ಪ್ರದೇಶದಲ್ಲಿ ನಡೆದಿದೆ.

ಉಜಿರೆ-ಚಾರ್ಮಾಡಿ ರಸ್ತೆಯ ಎಸ್.ಆರ್ ಬಾರ್ ಬಳಿಯ ಟೆಕ್ನೋ ಇಂಡಸ್ಟ್ರೀಸ್, ಗ್ಯಾರೇಜ್ ಮುಂಭಾಗದ 3,4 ಕಡೆಗಳಲ್ಲಿ ತೆರೆದ ಚರಂಡಿಗಳು ಇದ್ದು, ಸಮರ್ಪಕವಾದ ಬೀದಿ ದೀಪಗಳು ಇಲ್ಲದಿರುವ ಕಾರಣ ರಾತ್ರಿ ಹೊತ್ತು ಈ ಚರಂಡಿ ಮೇಲೆ ನಡೆದುಕೊಂಡು ಹೋಗುವುದು ಅಪಾಯವಾಗಿದೆ. ಈ ಚರಂಡಿಯ ನೀರು ನಿಡಿಗಲ್(ನೇತ್ರಾವತಿ) ನದಿಯನ್ನು ಸಂಪರ್ಕಿಸಿದ್ದು, ಬಾರ್ ಮುಂಭಾಗದಲ್ಲೇ ತೆರೆದ ಚರಂಡಿಗಳು ಇರುವ ಕಾರಣ ಕುಡುಕರು ಕುಡಿದ ಅಮಲಿನಲ್ಲಿ ತೇಲಾಡಿ ತೆರೆದ ಚರಂಡಿಯೊಳಗೆ ಬಿದ್ದರೆ ನಿಡಿಗಲ್(ನೇತ್ರಾವತಿ) ನದಿಯಲ್ಲಿ ಹುಡುಕುವ ಪ್ರಸಂಗ ನಡೆದೀತು.

ಈಗಾಗಲೇ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಶಂಕಿತ ಡೆಂಗೆ ಪ್ರಕರಣಗಳು ಕಂಡುಬಂದಿದ್ದು ತೆರೆದ ಚರಂಡಿ ಇರುವ ಪ್ರದೇಶಗಳ ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ತೆರೆದ ಚರಂಡಿ ಕುರಿತು ಆರೋಗ್ಯ ಇಲಾಖೆ, ಪಂಚಾಯಿತಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.

Related posts

ಯಶೋಧ ಕೃಷ್ಣ ವೀಡಿಯೋ ಸ್ಪರ್ಧೆ: ಕಲ್ಮಂಜದ ರಿದ್ವಿ ಡಿ.ಆರ್ ಹಾಗೂ ಭಕ್ತಿ ಜಿ. ವಿನ್ನರ್

Suddi Udaya

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯ ನವೀಕರಿಸಿದ ಶಾಲಾ ಕಟ್ಟಡ ಹಸ್ತಾಂತರ

Suddi Udaya

ಕೊಯ್ಯೂರು : ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂತನ ಭಜನಾ ಮಂದಿರ ನಿರ್ಮಾಣದ ಸಮಿತಿ ರಚನೆ

Suddi Udaya

ಉಜಿರೆಯಲ್ಲಿ ಗೌತಮ್ ಬಿ.ಆರ್ ಮಾಲಕತ್ವದ ಹೋಟೆಲ್ ನ್ಯೂ ಸಪ್ನಾ ಶುಭಾರಂಭ

Suddi Udaya

ನಾರಾವಿ ಬಿಜೆಪಿ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಚಿನ್ನಯ್ಯ ಸಹೋದರಿ ಎಸ್.ಐ.ಟಿ ಕಚೇರಿಗೆ ಹಾಜರು

Suddi Udaya
error: Content is protected !!