
ಪುಂಜಾಲಕಟ್ಟೆ: ಸ್ಪಂದನ ಆಟೋ ಚಾಲಕ ಮಾಲಕ ಸಂಘದಿಂದ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರನ್ನು ಭೇಟಿ ಮಾಡಿ ರಸ್ತೆ ದುರಸ್ತಿ ಹಾಗೂ ಸಂಘದ ಇತರ ಬೇಡಿಕೆಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಆಟೋ ಚಾಲಕ ಮಾಲಕ ಸಂಘದ ಬೇಡಿಕೆಗೆ ಸ್ಪಂದಿಸಿದ ಶಾಸಕರು ಪುಂಜಾಲಕಟ್ಟೆ ಪುರಿಯ ರಸ್ತೆಗೆ ತಾತ್ಕಾಲಿಕ ಪರಿಹಾರ ಹಾಗೂ ಜನವರಿಯಲ್ಲಿ ಮರು ಡಾಂಬರೀಕರಣ ಮಾಡಿಸುತ್ತೇನೆಂದು ಭರವಸೆ ನೀಡಿದರು ಹಾಗೂ ಪೆರ್ಡೇ ಕ್ರಾಸ್ ನಿಂದ ಉರ್ಲಾವರೆಗಿನ ಕಾಂಕ್ರೀಟ್ ರಸ್ತೆಯ ಕೆಲಸ ಒಂದು ವಾರದಲ್ಲಿ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಎಸ್ ಪುಂಜಾಲಕಟ್ಟೆ ಅಧ್ಯಕ್ಷ ದಿವಾಕರ್ ಶೆಟ್ಟಿ ಕಂಗಿತ್ತಿಲು, ಸ್ಪಂದನ ಆಟೋ ಚಾಲಕರ ಮಾಲಕರ ಸಂಘದ ಗೌರವ ಅಧ್ಯಕ್ಷರಾದ ಗ್ರೇಗೊರಿ ಮಿರಂದ, ಅಧ್ಯಕ್ಷರಾದ ರಘುವೀರ್ ಬಾಳಿಗ, ಕಾರ್ಯದರ್ಶಿ ಯೋಗೀಶ್ ಧರ್ಬೇ, ಜೊತೆ ಕಾರ್ಯದರ್ಶಿ ಕಿರಣ್ ಶೆಟ್ಟಿ, ಕೋಶಾಧಿಕಾರಿ ಜಯರಾಮ್ ಗರ್ಡಾಡಿ, ಮಾಲಾಡಿ ಪಂಚಾಯತ್ ಸದಸ್ಯರಾದ ಬೆನೆಡಿಕ್ಟ್ ಮಿರಂದ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.











