23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಶಿಶಿಲೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ ವಿಳಂಬ: ದೇವಸ್ಥಾನ ದೈನಂದಿನ ಪೂಜಾ ಕಾರ್ಯ ಹಾಗೂ ವಾರ್ಷಿಕ ಆಚರಣೆಗಳಿಗೆ ತೀವ್ರ ಅಡಚಣೆ: ಮಳೆಯಿಂದ ದೇವಾಲಯದ ತಡೆಗೋಡೆ ಕುಸಿದು ದೇವಾಲಯದ ಒಳಗೆ ಕೆಸರುಮಯವಾದರೂ ಕೇಳುವವರಿಲ್ಲ: ಭಕ್ತರ ತೀವ್ರ ಅಕ್ರೋಶ, ದೇವಸ್ಥಾನದಲ್ಲಿ ಧರಣಿ ನಡೆಸುವ ಎಚ್ಚರಿಕೆ

ಶಿಶಿಲ: ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಬೆಳ್ತಂಗಡಿ ತಾಲೂಕಿನ ಶಿಶಿಲದ ಶಿಶಿಲೇಶ್ವರ ದೇವಸ್ಥಾನಕ್ಕೆ ಕಳೆದ ಎರಡು ವರ್ಷಗಳಿಂದ ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡದೆ ದೇವಸ್ಥಾನ ದೈನಂದಿನ ಪೂಜಾ ಕಾರ್ಯಗಳಿಗೆ ಹಾಗೂ ವಾರ್ಷಿಕ ಆಚರಣೆಗಳನ್ನು ಮಾಡಲು ಅಡಚಣೆಯಾಗಿದೆ. ಸರಕಾರವು ದೇವಸ್ಥಾನದ ವಿಷಯದಲ್ಲಿ ರಾಜಕೀಯವನ್ನು ಮಾಡದೆ ಸ್ಥಳೀಯ ಭಕ್ತರ ಸಭೆಯನ್ನು ಕರೆದು ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಿತಿ ರಚನೆ ಮಾಡುವವರೆಗೂ ಹೋರಾಟ: ಸಂದೀಪ್ ಅಮ್ಮುಡಂಗೆ
ವ್ಯವಸ್ಥಾಪನಾ ಸಮಿತಿ ರಚನೆ ಆಗದೇ ದೇವಸ್ಥಾನದ ಅಭಿವೃದ್ಧಿ ಕುಂಟಿತಗೊಂಡಿದ್ದು. ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದ ದೇವಳದ ತಡೆಗೋಡೆ ಕುಸಿದು ದೇವಳದ ಒಳಗಡೆ ನೀರು ನುಗ್ಗಿ ಕೆಸರುಮಯವಾಗಿದೆ . ಇದರಿಂದ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಧರಣಿ ಕೂರುವ ಎಚ್ಚರಿಕೆ ನೀಡಿದ್ದು ಧರಣಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಧರ್ಮದಾಯ ದತ್ತಿ ಇಲಾಖೆಯವರು ಆಗಮಿಸಿ ಸಮಿತಿ ರಚನೆ ಮಾಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್‌ ಅಮ್ಮುಡಂಗೆ ತಿಳಿಸಿದ್ದಾರೆ.

ಹಿಂದೂ ಸಮಾಜದ ಭಕ್ತರ ಸಭೆ ಕರೆಯಲಿ: ನವೀನ್ ನೆರಿಯ
ಈ ದೇವಸ್ಥಾನವು ಮತ್ಸ್ಯ ಸಂಕುಲಕ್ಕೆ ಪ್ರಸಿದ್ಧಿಯಾಗಿದ್ದು ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ದೇವಸ್ಥಾನದ ಆವರಣ ಗೋಡೆ ಹಾಗೂ ದೇವಸ್ಥಾನಕ್ಕೆ ಹೋಗುವ ರಸ್ತೆಗಳಿಗೆ ಹಾನಿಯಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರಕಾರವು ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡದೆ ದೇವಸ್ಥಾನದ ತುರ್ತು ಕಾರ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆದ್ದರಿಂದ ಸ್ಥಳೀಯ ಹಿಂದೂ ಸಮಾಜದ ಭಕ್ತರ ಸಭೆಯನ್ನು ಕರೆದು ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇನೆ ಎಂದು ಪುತ್ತೂರು ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ತಿಳಿಸಿದ್ದಾರೆ.

ಸರಕಾರ ಸಮಿತಿ ಮಾಡದೆ ಮೀನಾ ಮೇಷ ಎಣಿಸುತ್ತಿದೆ: ಕಿರಣ್ ಚಂದ್ರ
ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವಂತಹ ಮತ್ಸ್ಯತೀರ್ಥ ಶ್ರೀ ಶಿಶಿಲೇಶ್ವರ ದೇವಸ್ಥಾನವು ಅತಿ ಹೆಚ್ಚು ಪ್ರವಾಸಿಗರು ಬರುವಂತಹ (ಎ ಗ್ರೇಡ್ )ಧಾರ್ಮಿಕ ಕ್ಷೇತ್ರವಾಗಿದೆ. ಆದರೆ ವಿಪರ್ಯಾಸ ಎಂದರೆ ಈಗಿನ ಸರಕಾರ ಈವರೆಗೂ ಆಡಳಿತ ಸಮಿತಿ ಮಾಡದೆ ಮೀನಾ ಮೇಷ ಎಣಿಸುತ್ತಿದೆ. ತೀವ್ರ ಮಳೆಯಿಂದ ಶಿಶಿಲೇಶ್ವರ ದೇವಸ್ಥಾನದಲ್ಲಿ ಅಪಾರ ಹಾನಿಯಾಗಿದ್ದು ಇದರ ಜವಾಬ್ದಾರಿ ತೆಗೆದುಕೊಳ್ಳಲು ಯಾವುದೇ ಆಡಳಿತ ಮಂಡಳಿ ಇಲ್ಲದಂತಾಗಿದೆ ಹಿಂದೂ ಧಾರ್ಮಿಕ ಶ್ರದ್ಧ ಕೇಂದ್ರವನ್ನು ಈ ರೀತಿ ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ.ಕೂಡಲೇ ಸಂಬಂಧಪಟ್ಟ ಧಾರ್ಮಿಕ ಪರಿಷತ್ ಮುಜರಾಯಿ ಸಚಿವರು ಗಮನ ಹರಿಸಿ ವ್ಯವಸ್ಥಾಪನ ಸಮಿತಿಯನ್ನು ನೇಮಿಸಬೇಕು ಎಂದು ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ತಿಳಿಸಿದ್ದಾರೆ.

ರಾಜಕೀಯ ಬಿಟ್ಟು ಈ ಪುಣ್ಯ ಕ್ಷೇತ್ರಕ್ಕೆ ಕೂಡಲೇ ಸಮಿತಿ ರಚನೆ ಮಾಡಿ: ಜಯರಾಮ ನೆಲ್ಲಿತ್ತಾಯ
ಶಿಶಿಲ ದೇವಸ್ಥಾನವು ರಾಜ್ಯದಲ್ಲೇ ಹೆಸರುವಾಸಿಯಾದ ದೇವಸ್ಥಾನ ಆದರೆ ಇಡೀ ಜಿಲ್ಲೆಯಲ್ಲಿ ದೇವಸ್ಥಾನಗಳಿಗೆ ಸಮಿತಿಯಾದರೂ, ಶಿಶಿಲ ದೇವಸ್ಥಾನಕ್ಕೆ ಮಾತ್ರ ಮೀನ ಮೇಷ ಆಗುತ್ತಿದೆ. ರಾಜಕೀಯ ಹೊರತುಪಡಿಸಿ ಈ ಪುಣ್ಯ ಕ್ಷೇತ್ರಕ್ಕೆ ಕೂಡಲೇ ಸಮಿತಿ ರಚನೆ ಮಾಡದಿದ್ದಲ್ಲಿ ಗ್ರಾಮಸ್ಥರಾದ ನಾವೆಲ್ಲರೂ ಧರಣಿ ಮಾಡುವುದು ಖಂಡಿತ. ಮೊನ್ನೆಯ ಮಳೆಯಿಂದಾಗಿ ದೇವಸ್ಥಾನಕ್ಕೆ ಬಹಳಷ್ಟು ಸಮಸ್ಯೆಯಾಗಿದ್ದು ಯಾರು ಕೇಳುವವರಿಲ್ಲದಂತಾಗಿದೆ. ಹೀಗಾಗಿ ನಾವೆಲ್ಲರೂ ಸಂಘಟಿತರಾಗಿ ಸಮಿತಿ ರಚನೆ ಮಾಡುವುದು ಅನಿವಾರ್ಯವಾಗಿದೆ ಎಂದು ಧಾರ್ಮಿಕ ಮುಂದಾಳು ಜಯರಾಮ ನೆಲ್ಲಿತ್ತಾಯ ಶಿಶಿಲ ತಿಳಿಸಿದ್ದಾರೆ.

Related posts

ಶ್ರೀ.ಧ.ಮಂ. ಕಾಲೇಜಿನಲ್ಲಿ ‘ತೆರಿಗೆಯ ಮೂಲಭೂತ ಅಂಶಗಳು’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ. ಅ. ಸೆಕೆಂಡರಿ ಶಾಲೆಯಲ್ಲಿ ಸಂಭ್ರಮದ ‘ಪ್ರಾರಂಭೋತ್ಸವ’

Suddi Udaya

ಬೆಳ್ತಂಗಡಿ-ಪುತ್ತೂರು ಮುಳಿಯದಲ್ಲಿ ನವರತ್ನ ಉತ್ಸವದ ಸಂಭ್ರಮ: ಒಂಬತ್ತು ವಿಭಿನ್ನ ರತ್ನದ ಕಲ್ಲುಗಳ ಹಾಗೂ ನವರತ್ನ ಆಭರಣಗಳ ಪ್ರದರ್ಶನ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳ ಸಭೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿಗಳ ವಾರ್ಷಿಕ ಸಮ್ಮೇಳನ ಉದ್ಘಾಟನೆ

Suddi Udaya

ಅಳದಂಗಡಿ: ಹೊಟೇಲ್ ಉದ್ಯಮ ನಿರ್ವಹಿಸುತ್ತಿದ್ದ ಯೋಗೀಶ್ ಪೂಜಾರಿ ಹೆನ್ಕಲ ಅನಾರೋಗ್ಯದಿಂದ ನಿಧನ

Suddi Udaya
error: Content is protected !!