ಬೆಳ್ತಂಗಡಿ : ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ , ಒಕ್ಕಲಿಗ ಗೌಡರ ಯುವ ಸಂಘ ಒಕ್ಕಲಿಗ ಗೌಡರ ಮಹಿಳಾ ಸಂಘ , ಒಕ್ಕಲಿಗ ಗೌಡರ ಮಹಿಳಾ ಯುವ ಸಂಘ, ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ (ನಿ.) ಉಜಿರೆ ಇವರ ಸಹಯೋಗದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಪ್ರಸನ್ನ ಶಿಕ್ಷಣ ಸಮೂಹ ಸಂಸ್ಥೆಗಳು ಲಾಯಿಲ, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಮತ್ತು ಊರ ನಾಗರಿಕರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಜೂ. 27 ರಂದು ಮಂಜುನಾಥ ಸ್ವಾಮಿ ಕಲಾಮಂದಿರದ ಬಳಿ ಇರುವ ಬಯಲು ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಲಾಯಿಲ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ. ಗಂಗಾಧರ ಗೌಡ ನೆರವೇರಿಸಿದರು.


ಮುಖ್ಯ ಅತಿಥಿಗಳಾಗಿ ಒಕ್ಕಲಿಗ ಗೌಡರ ಸಂಘ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು , ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ , ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಯಂಜ , ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ವಸಂತ ಗೌಡ ಮರಕಡ, ಒಕ್ಕಲಿಗ ಗೌಡರ ಯುವ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಜಿಲ್ಲಾ ಒಕ್ಕಲಿಗ ಗೌಡರ ಸಂಘ ನಿರ್ದೇಶಕ ವಿಜಯ ಗೌಡ ವೇಣೂರು, ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾ ಒಕ್ಕಲಿಗ ಗೌಡರ ಸಂಘ ಜೊತೆ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ , ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಜಯಂತ ಗೌಡ ಸಾಯಿಕೃಪಾ ಗುರಿಪಳ್ಳ , ಬೆಳ್ತಂಗಡಿ ತಾಲೂಕು ವಕೀಲ ಸಂಘ ಕಾರ್ಯದರ್ಶಿ ನವೀನ್ ಬಿ.ಕೆ., ಜಿಲ್ಲಾ ಒಕ್ಕಲಿಗ ಗೌಡರ ಟ್ರಸ್ಟ್ ಜೊತೆ ಕೋಶಾಧಿಕಾರಿ ಸೂರಜ್ ವಳಂಬ್ರ, ಒಕ್ಕಲಿಗ ಗೌಡರ ಸಂಘ ಕಾರ್ಯದರ್ಶಿಗಳಾದ ಬಾಲಕೃಷ್ಣ ಗೌಡ ಕಲ್ಲಾಜೆ , ಭರತ್ ಗೌಡ ಹಾನಿಬೆಟ್ಟು , ಮಂಗಳೂರು ಬ್ಲಡ್ ಸೆಂಟರ್, ಕೆಎಂಸಿ, ವೈದ್ಯಕೀಯ ಅಧಿಕಾರಿ ಡಾ| ಸಿಂಚನ, ಒಕ್ಕಲಿಗ ಗೌಡರ ಮಹಿಳಾ ವೇದಿಕೆ ಅಧ್ಯಕ್ಷ ಶ್ರೀಮತಿ ಅಪರ್ಣ ಶಿವಕಾಂತ ಗೌಡ, ಒಕ್ಕಲಿಗ ಗೌಡರ ಮಹಿಳಾ ಯುವ ವೇದಿಕೆ ಅಧ್ಯಕ್ಷೆ ಶ್ರೀಮತಿ ಅನುಪಮ ಸತೀಶ್ ಮಾಳಿಗೆಮನೆ ಉಪಸ್ಥಿತರಿದ್ದರು.
ಶಾಸಕ ಹರೀಶ್ ಪೂಂಜ ಬೃಹತ್ ರಕ್ತದಾನ ಶಿಬಿರಕ್ಕೆ ಬೇಟಿ ನೀಡಿದರು.
ಒಕ್ಕಲಿಗ ಗೌಡರ ಯುವ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಸ್ವಾಗತಿಸಿ, ರಾಘವೇಂದ್ರ ಗೌಡ ವಂದಿಸಿ, ನಿತಿನ್ ಸುರಳಿ ವಂದಿಸಿದರು.











