25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುಂಡೂರಿ: ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ ಆರೋಪ: ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ಗುಂಡೂರಿ : ಇಲ್ಲಿಯ ಶಾಂತಿಗುಡ್ಡೆ ಎಂಬಲ್ಲಿ ಸುಭಾಷ್ ಪೂಜಾರಿ ಮನೆ ಬಳಿಯ ಗುಡ್ಡೆಯಲ್ಲಿ ಸೊಪ್ಪು ಕಡಿದು ತೆಂಗಿನ ಮರದ ಬುಡಕ್ಕೆ ತಂದು ಹಾಕುತ್ತಿದ್ದುದನ್ನು ಆಕ್ಷೇಪಿಸಿ ರಾಜು, ವಿನೋದ, ದೀಪಕ್ ರವರು ಸುಭಾಷ್ ಪೂಜಾರಿ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.ಎಂದು ಆರೋಪಿಸಿ ನೀಡಿದ ದೂರಿನಂತೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿಜೂ.27ರಂದು ಪ್ರಕರಣ ದಾಖಲಾಗಿದೆ.


ಘಟನೆ ವಿವರ: ಜೂ.27 ರಂದು ಗುಂಡೂರಿ ಗ್ರಾಮದ ಶಾಂತಿಗುಡ್ಡೆ ಎಂಬಲ್ಲಿ ಸುಭಾಷ್ ಪೂಜಾರಿ ಎಂಬುವವರು ತನ್ನ ವಾಸದ ಮನೆಯಲ್ಲಿರುವ ಸಮಯ ರಾಜು ಮತ್ತು ಆತನ ಹೆಂಡತಿ ಶ್ರೀಮತಿ ವಿನೋದ ರವರು ಸುಭಾಷ್ ಪೂಜಾರಿ ಮನೆ ಬಳಿಯ ಗುಡ್ಡೆಯಲ್ಲಿ ಸೊಪ್ಪು ಕಡಿದು ಸುಭಾಷ್ ಪೂಜಾರಿ ಸ್ವಾಧೀನವಿರುವ ತೆಂಗಿನ ಮರದ ಬುಡಕ್ಕೆ ತಂದು ಹಾಕುತ್ತಿದ್ದುದನ್ನು ಕಂಡು ಸುಭಾಷ್ ಪೂಜಾರಿ ಆಕ್ಷೇಪಿಸಿದ್ದಕ್ಕೆ ರಾಜು ಎಂಬಾತನು ಸುಭಾಷ್ ಪೂಜಾರಿ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಿ ಏಕಾಏಕಿಯಾಗಿ ರಾಜು, ವಿನೋದ ಮತ್ತು ಅವರ ಮಗನಾದ ದೀಪಕ್ ರವರುಗಳು ಸೇರಿ ದೊಣ್ಣೆಗಳಿಂದ ಸುಭಾಷ್ ಪೂಜಾರಿರವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಸಲಾಗಿದೆ.ಹಲ್ಲೆಯಿಂದ ಸುಭಾಷ್ ಪೂಜಾರಿ ರವರಿಗೆ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ದ.ಕ.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಜೊತೆ ರಕ್ಷಾ ಸಮಿತಿ ಸದಸ್ಯರಿಂದ ಸಮಿತಿ ಸಭೆ ಹಾಗೂ ರೋಗಿಗಳ ಭೇಟಿ

Suddi Udaya

ಎಸ್.ಐ.ಟಿ ತಂಡ ಬೆಳ್ತಂಗಡಿ ಕಚೇರಿಗೆ ಆಗಮನ: ಇಂದು ತಲೆಬುರುಡೆ ತೆಗೆದ ಸ್ಥಳ ಮಹಜರು ಸಾಧ್ಯತೆ

Suddi Udaya

ನಾಳ ಗೋಪಾಲಕೃಷ್ಣ ಕಾಮತ್ ನಿಧನ

Suddi Udaya

ಮೂಡುಬಿದಿರೆ: ವೈಬ್ರೆಂಟ್ ವಿದ್ಯಾರ್ಥಿಗಳಿಗೆ ವಿಜೃಂಭಣೆಯ ಲಾಂಗ್ ಟರ್ಮ್ ಡೇ

Suddi Udaya

ಕಾಪಿನಡ್ಕ: ಶಿವಗಿರಿ ಕೃಪಾದಲ್ಲಿ ಅಂಧರ ಗೀತಾ ಗಾಯನ ಕಾರ್ಯಕ್ರಮ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ

Suddi Udaya
error: Content is protected !!