22.9 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಶ್ರೀ ಆದಿಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ತಾಲೂಕಿಗೆ ಮಾದರಿಯಾದ ‘ತಪೋವನ’ : ಜನರ ನೆಮ್ಮದಿ ಶಾಂತಿಗೆ ಪೂರಕ ವಾತಾವರಣ ತಪೋವನ ನೀಡಲಿದೆ: ಬ್ರಹ್ಮಾನಂದ ಶ್ರೀ

ಧಮ೯ಸ್ಥಳ: ಶ್ರೀ ಆದಿಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನ ಶ್ರೀ ಗುರುದೇವ ಮಠ ದೇವರ ಗುಡ್ಡೆಯಲ್ಲಿ “ತಪೋವನ’ ಸಸಿ ನೆಡುವ ಕಾರ್ಯಕ್ರಮ ಜೂ.29 ರಂದು ಜರುಗಿತು.

1008 ಮಹಾಮಂಡಲೇಶ್ವರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಪಜೀರಡ್ಕದ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ತಪೋವನ ನಿರ್ಮಾಣಕ್ಕೆ ಸಸ್ಯಗಳ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ,ಶುದ್ಧವಾದ ಗಾಳಿ, ಪರಿಸರಕ್ಕೆ ತಪೋವನ ಅತ್ಯಗತ್ಯ.ಪರಿಸರಕ್ಕೆ ಪೂಜೆ ಸಲ್ಲಿಸುವ ಸ್ಥಳದಲ್ಲಿ ದೇವರು ನೆಲೆಯಾಗುತ್ತಾನೆ. ಸಾರ್ವಜನಿಕರ ನೆಮ್ಮದಿ ಶಾಂತಿಗೆ ತಪೋವನ ಪೂರಕ ವಾತಾವರಣ ನೀಡಲಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ,. ದೇಗುಲಗಳ ಪರಿಸರಗಳಲ್ಲಿ ಪವಿತ್ರವನಗಳ ನಿರ್ಮಾಣ ಅತ್ಯಗತ್ಯ. ಪ್ರಕೃತಿಯನ್ನು ಉಳಿಸುವ ಮೂಲಕ ನಮ್ಮ ನೆಲೆಯನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ ಪ್ರಕೃತಿ ವಿಕೋಪಕ್ಕೆ ಪರಿಸರ ನಾಶ ಮುಖ್ಯ ಕಾರಣ. ದೇವರ ಹೆಸರಲ್ಲಿ ಕಾಡು ಉಳಿಸುವ ಸ್ವಾಮೀಜಿಗಳ ಈ ಕಾರ್ಯ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಪ್ರಮುಖರಾದ ನಿವೃತ್ತ ಎಸ್.ಪಿ ಪಿತಾಂಬರ ಹೇರಾಜೆ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ರಾಜ್ಯ ಕಾಂಗ್ರೆಸ್ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಮಿತಾ ಕೆ.ಪೂಜಾರಿ, ಶ್ರೀ ದೇವಲಿಂಗೇಶ್ವರ ಭಕ್ತ ಮಂಡಳಿ ಅಧ್ಯಕ್ಷ ವಿ.ಆರ್. ನಾಯಕ್, ನ್ಯಾಯವಾದಿ ಕೇಶವ ಬೆಳಾಲು, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷಎಂ.ಕೆ. ಪ್ರಸಾದ್,. ಗ್ಯಾರಂಟಿ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಜಿಲ್ಲಾ
ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಯುವ ವಾಹಿನಿ ಅಧ್ಯಕ್ಷ ಗುರುರಾಜ್ ಗುರುಪಳ್ಳ, ಅನಂತೇಶ್ ಚಡಗ, ಲೋಕೇಶ್ವರಿ ವಿನಯ ಚಂದ್ರ, ಎನ್. ಲಕ್ಷ್ಮಣಗೌಡ, ಮತ್ತಿತರರು ಉಪಸ್ಥಿತರಿದ್ದರು

ಟ್ರಸ್ಟಿ ತುಕಾರಾಂ ಸಾಲಿಯನ್ ಕಾರ್ಯಕ್ರಮ ನಿರೂಪಿಸಿದರು.
ಆದಿ ಪಜರಡ್ಕದಲ್ಲಿರುವ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಹಿಂದಿನ ಕಾಲದಲ್ಲಿ ಇದ್ದ ಅಗಸ್ತ್ಯ ಮುನಿಗಳ ತಪೋವನದಲ್ಲಿ ಸುಮಾರು 74 ಜಾತಿಯ 200ಕ್ಕಿಂತ ಅಧಿಕ ಅಳಿವಿನಂಚಿನಲ್ಲಿರುವ ಹಾಗೂ ನಾನಾ ಭಾಗಗಳ ಹಣ್ಣು ಹಂಪಲುಗಳ ಗಿಡಗಳನ್ನು ನೆಡಲಾಯಿತು.
.

Related posts

ಸೆ.22ರಿಂದ ಅ.1: ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

Suddi Udaya

ಕಾರಿಂಜ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿದೇವರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ಭವ್ಯ ಮೆರವಣಿಗೆಯೊಂದಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya

ಮೃತ ಅಕಾಂಕ್ಷ ಮೃತದೇಹ ಮನೆಗೆ ಆಗಮನ : ಶಾಸಕ ಹರೀಶ್ ಪೂಂಜ ಭೇಟಿ, ಸಾಂತ್ವನ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಮಂಗಳೂರು ವಿ.ವಿ. ಮಟ್ಟದ ತ್ರೋಬಾಲ್ ಕ್ರೀಡಾಕೂಟ

Suddi Udaya

ಉಜಿರೆ ಗುರು ಮಂದಿರ ನಿರ್ಮಾಣದ ಸಮಾಲೋಚನೆ ಸಭೆ

Suddi Udaya

ಮರೋಡಿ: ಮಡ್ಲದಲ್ಲಿ ಬರೆ ಕುಸಿತ ಮನೆಗೆ ಹಾನಿ

Suddi Udaya
error: Content is protected !!