32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಟ್ಟಡ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವದಿಂದ ಕಾರ್ಮಿಕರಿಗೆ ಕೆಲಸ ಲಭಿಸದಿರುವ ಕುರಿತು ಹಾಗೂ ಹೊರರಾಜ್ಯದ ಕಾರ್ಮಿಕರನ್ನು ನೋಂದಣಿಗೊಳಿಸುವಂತೆ ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದಿಂದ ತಹಶೀಲ್ದಾರ್, ಹಾಗೂ ಪೊಲೀಸ್ ಠಾಣೆಗೆ ಮನವಿ

ಬೆಳ್ತಂಗಡಿ : ಕಟ್ಟಡ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವದಿಂದ ಕಾರ್ಮಿಕರಿಗೆ ಕೆಲಸ ಲಭಿಸದಿರುವ ಕುರಿತು ಹಾಗೂ ಹೊರರಾಜ್ಯದ ಕಾರ್ಮಿಕರನ್ನು ನೋಂದಣಿಗೊಳಿಸುವಂತೆ ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದಿಂದ ಬೆಳ್ತಂಗಡಿ ತಹಶೀಲ್ದಾರ್, ಹಾಗೂ ಪೋಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗೆ ಕೆಂಪುಕಲ್ಲು ಮತ್ತು ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವು ಲಭಿಸುತ್ತಿಲ್ಲ ಸಾಮಗ್ರಿಗಳ ಪೂರೈಕೆ ಮತ್ತು ಸಾಗಾಟದ ವಿಷಯದಲ್ಲಿ ಅಧಿಕಾರಿಗಳು ಜಿಲ್ಲೆಗೆ ಅನೇಕ ಹೊಸ ನೀತಿ ನಿಯಮಗಳನ್ನು ಜಾರಿ ಮಾಡಿ ಇದರಿಂದ ಕಟ್ಟಡ ನಿರ್ಮಾಣಕ್ಕಾಗಿ ಬೇಕಾಗುವ ಸಾಮಗ್ರಿಗಳು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಕಾರ್ಮಿಕರು ವಿವಿಧ ರೀತಿಯ ಸಾಲಗಳನ್ನು ಮಾಡಿಕೊಂಡು ಅದಕ್ಕೆ ಕಂತುಗಳನ್ನು ಕಟ್ಟುವ ಜವಾಬ್ದಾರಿಯನ್ನು ಹೊಂದಿರುವುದು ಇದರಿಂದ ಕಾರ್ಮಿಕರು ಭಾರಿ ರೀತಿಯ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಅಲ್ಲದೆ ಇದು ಶಾಲಾ ಆರಂಭದ ದಿನಗಳಾಗಿದ್ದರಿಂದ ಕಾರ್ಮಿಕರ ಮಕ್ಕಳ ಶಾಲಾ ಶೈಕ್ಷಣಿಕ ಖರ್ಚಿಗಾಗಿ ಹೆಚ್ಚಿನ ರೀತಿಯ ಹಣವು ಕಾರ್ಮಿಕರಿಗೆ ಅವಶ್ಯಕತೆ ಇರುವುದರಿಂದ ಈ ಸಂದರ್ಭ ಕಾರ್ಮಿಕರ ಜೀವನಕ್ಕೆ ನಿರ್ಧಾರಗಳಿಂದ ಬಾರಿ ಪ್ರಮಾಣದ ತೊಂದರೆಗಳಾಗಿದೆ ಈ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಕೋರಿಕೆ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಹೊರರಾಜ್ಯದ ಕಾರ್ಮಿಕರು ತಾಲೂಕಿನ ಅತ್ಯಂತ ಕೆಲಸವನ್ನು ನಿರ್ವಹಿಸುತ್ತಿದ್ದು ನಮ್ಮ ತಾಲೂಕಿನಲ್ಲಿ ಕೆಲಸ ನಿರ್ವಹಿಸುವ ಹೊರರಾಜ್ಯದ ಕಾರ್ಮಿಕರ ನೋಂದಣಿಯನ್ನು ಮಾಡಿಕೊಳ್ಳಲುವಂತೆ ಮನವಿ ಮೂಲಕ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಭಾರತೀಯ ಮಜ್ದೂರು ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಯು, ಬಿಎಂಎಸ್ ಪ್ರಧಾನ ರಾಜ್ಯ ಕಾರ್ಯದರ್ಶಿ ಜಯರಾಜ್, ಬಿ,ಬಿಎಂ.ಎಸ್ ತಾಲೂಕು ಅಧ್ಯಕ್ಷ ಉದಯ ಬಿ.ಕೆ ಬಂದಾರು, ಪ್ರಮುಖರಾದ ಉದಯ್ ಕುಮಾರ್ ಉಜಿರೆ, ಗಣೇಶ್ ಪೆರಾಡಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಕುಮಾರ್ ನಾಥ್ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

Related posts

ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya

ಕಲ್ಮಂಜ: ನಿಡಿಗಲ್ ಆದರ್ಶನಗರದ ನಿವಾಸಿ ಚಂದ್ರಶೇಖರ್ ಎಮ್. ನಿಧನ

Suddi Udaya

ನಾವೂರು: ನಮನ ಟ್ರೇಡರ್‍ಸ್ ಶುಭಾರಂಭ

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya
error: Content is protected !!