September 6, 2026
ವರದಿ

ರೆಖ್ಯ: ಜನರ ಜೀವ ಬಲಿ ಪಡೆಯುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ರೆಖ್ಯ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ರೆಖ್ಯ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ( 75 ) ರ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ, ಆದರೆ ರೆಖ್ಯ ಗ್ರಾಮದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಿ, ಜನರ ಜೀವ ಬಲಿಪಡೆಯುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ರೆಖ್ಯ ಗ್ರಾಮದ ಎಂಜಿರ, ನೇಲ್ಯಡ್ಕ, ಪರಕ್ಕಳದಲ್ಲಿ ಅವೈಜ್ಞಾನಿಕ ಕಾಮಗಾರಿ ಆಗಿದ್ದು ಎಂಜಿರದಲ್ಲಿ ಸರ್ವಿಸ್ ರಸ್ತೆ ಮಾಡಿಲ್ಲ , ರಸ್ತೆ ಮಧ್ಯದ ತಡೆಗೋಡೆಯಿಂದ ಶಾಲಾ ಮಕ್ಕಳು / ಸಾರ್ವಜನಿಕರು ರಸ್ತೆ ದಾಟಲು ಪರದಾಟ ಮಾಡುವ0ತಾಗಿದೆ. ಕೋಳಾರು ಸಂಪರ್ಕ ರಸ್ತೆ ನೇಲ್ಯಡ್ಕದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಮಾಡಿಲ್ಲ , ಅಗತ್ಯವಿದ್ದ ಕಡೆ ದಾರಿ ದೀಪ ಅಳವಡಿಸಿಲ್ಲ , ಅನಗತ್ಯ ಸ್ಥಳಗಳಲ್ಲಿ ಬಸ್ಸು ತಂಗುದಾಣ ನಿರ್ಮಾಣ ಮಾಡಿದ್ದಾರೆ, ಬೃಹತ್ ಗುಡ್ಡ ವಿರುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣ ಮಾಡದೆ ಇರುವ ಹಿನ್ನಲೆಯಲ್ಲಿ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಗ್ರಾಮಸ್ಥರೆಲ್ಲರು ಒಟ್ಟಾಗಿ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Related posts

ಶ್ರೀ ಧ ಮಂ ಆಂ.ಮಾ. ಶಾಲೆಗೆ ಅರ್ಜುನ ಪ್ರಶಸ್ತಿ ವಿಜೇತ ಹೊನ್ನಪ್ಪ ಸಿ ಗೌಡ ಭೇಟಿ

Suddi Udaya

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಪೂರ್ವ ತಯಾರಿ ಸಭೆ

Suddi Udaya

ಕರಾಟೆ ಪಂದ್ಯಾಟ: ಉಜಿರೆಯ ಮೋಹನ್ ರಿಗೆ ಕುಮಿತೆ ಹಾಗೂ ಕಟಾ ವಿಭಾಗದಲ್ಲಿ ಚಿನ್ನದ ಪದಕ

Suddi Udaya

ಶಿಶಿಲ: ಪಡ್ಪು ನಿವಾಸಿ ಧರ್ಣಪ್ಪ ಗೌಡ ನಿಧನ

Suddi Udaya

ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ರೂ.2.00 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ತಿಂಗಳ ಸಭೆ ಹಾಗೂ ಆಟಿಡ್ ಒಂಜಿ ವಿಶೇಷ ತಿನಸ್

Suddi Udaya
error: Content is protected !!