32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಮುಂಡಾಜೆಯಲ್ಲಿ ಹೆದ್ದಾರಿಗೆ ಉರುಳಿದ ಮರ, ಮೂರು ವಿದ್ಯುತ್ ಕಂಬಗಳಿಗೆ ಹಾನಿ

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಚರ್ಚ್ ಸಮೀಪ ಬೃಹತ್ ಗಾತ್ರದ ಮರ ರಸ್ತೆ ಮತ್ತು ವಿದ್ಯುತ್ ಲೈನ್ ಮೇಲೆ ಉರುಳಿ ಮೂರು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾದ ಘಟನೆ ಇಂದು (ಜು.2 )ನಡೆದಿದೆ.


ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್ ನಿಂದ ಮುಂಡಾಜೆ ಫೀಡರ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಎಚ್ ಟಿ ವಿದ್ಯುತ್ ಕಂಬಗಳು ತುಂಡಾದ ಪರಿಣಾಮ ಮುಂಡಾಜೆ, ಸೋಮಂತಡ್ಕ, ಕಡಂಬಳ್ಳಿ, ಕಾಯರ್ತೋಡಿ, ಕೊಡಂಗೆ,ಕಲ್ಲಾರ್ಯ, ಅಂಬಡ್ತ್ಯಾರು, ನೆಯ್ಯಾಲು, ಮೂಲಾರು, ಕುಡೆಂಚಿ, ಆಸುಪಾಸಿನಲ್ಲಿ ನೂರಾರು ಗ್ರಾಹಕರಿಗೆ ವಿದ್ಯುತ್ ವ್ಯತಯ ಉಂಟಾಗಿದೆ.


ಮರವು ರಸ್ತೆಗೂ ಉರುಳಿದ ಕಾರಣ ಟ್ರಾಫಿಕ್ ಜಾಮ್ ಉಂಟಾಯಿತು. ಗ್ರಾಪಂ ಸದಸ್ಯ ಗಣೇಶ ಬಂಗೇರ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು, ಮೆಸ್ಕಾಂ,ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಸಹಕರಿಸಿದರು. ಮರ ಉರುಳಿ ಬೀಳುವ ವೇಳೆ ವಾಹನಗಳ ಸಂಚಾರ ಇರದಿದ್ದ ಕಾರಣ ಸಂಭವನೀಯ ಅಪಾಯ ತಪ್ಪಿದೆ.

Related posts

ಶಿಶಿಲ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೂರಜ್ ನೆಲ್ಲಿತ್ತಾಯ ಆಯ್ಕೆ

Suddi Udaya

ಕಾಂಗ್ರೆಸ್ ಕಾರ್ಯಕರ್ತ ಯೋಗೀಶ್ ಗೌಡ ನೂಜಿಲ ಬಿಜೆಪಿಗೆ ಸೇರ್ಪಡೆ

Suddi Udaya

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ ಸೇವಾಭಾರತಿ ಆಶ್ರಯದಲ್ಲಿ 100ನೇ ಬೃಹತ್ ರಕ್ತದಾನ ಶಿಬಿರ

Suddi Udaya

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಧರ್ಮಸ್ಥದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹ75 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ

Suddi Udaya
error: Content is protected !!