September 6, 2026
ಶಾಲಾ ಕಾಲೇಜು

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷದ್ರುವ – ಯಕ್ಷ ಶಿಕ್ಷಣ ನಾಟ್ಯ ತರಬೇತಿ ಉದ್ಘಾಟನೆ


ಬೆಳ್ತಂಗಡಿ :ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವಲ್ಲಿ ಪಠ್ಯಚಟುವಟಿಕೆಗಳಿಗೆ ಪೂರಕವಾಗಿ ಯಕ್ಷಗಾನ ಕಲಿಕೆಯು ಪ್ರಯೋಜನಕಾರಿಯಾಗಿದೆ ಎಂದು ಪಟ್ಲ ಪೌಂಡೇಷನ್ ನ ಟ್ರಸ್ಟ್ರಿಗಳಾದ ಭುಜಬಲಿ ಧರ್ಮಸ್ಥಳ ಹೇಳಿದರು.


ಅವರು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷದ್ರುವ- ಯಕ್ಷ ಶಿಕ್ಷಣ ನಾಟ್ಯ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ಯಕ್ಷಗಾನವು ಆರೋಗ್ಯ ಮತ್ತು ನೆಮ್ಮದಿಯನ್ನು ಪಡೆಯಲು ಸಹಕಾರಿಯಾಗಿದೆ. ಪಟ್ಲ ಪೌಂಡೇಶ್ ನವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನವನ್ನು ಕಲಿಸುವ ಯೋಜನೆ ಶ್ಲಾಘನೀಯ. ಅವರ ಪರಿಶ್ರಮವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಇದರೊಂದಿಗೆ ಪೋಷಕರಿಗೆ,ಶಿಕ್ಷಣ ಸಂಸ್ಥೆಗೆ ಕೀರ್ತಿ ತರಬೇಕು ಎಂದರು.
ವಾಣಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಣೇಶ ಗೌಡ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಪೌಂಡೇಶನ್ ನ ಯಕ್ಷದ್ರುವ- ಯಕ್ಷ ಶಿಕ್ಷಣದ ಕೇಂದ್ರೀಯ ಸಂಚಾಲಕರಾದ ವಾಸುದೇವ ಐತಾಳ್ ಪಣಂಬೂರು ಮುಖ್ಯ ಅತಿಥಿಗಳಾಗಿದ್ದು ಯಕ್ಷದ್ರುವ ಪಟ್ಲ ಪೌಂಡೇಶನ್ ನ ಧ್ಯೇಯೋಧ್ಧೇಶಗಳನ್ನು ತಿಳಿಸುತ್ತಾ, ವಿದ್ಯಾರ್ಥಿಗಳಲ್ಲಿ ಉತ್ತಮ ಜ್ಞಾನ,ಆಚಾರ- ವಿಚಾರ ಸಂಸ್ಕಾರಕ್ಕೆ ಪೂರಕವಾಗಿ ಯಕ್ಷಗಾನದ ಕಲಿಕೆಯು ಮಹತ್ವದ್ದಾಗಿದೆ ಎಂದರು. ಯಕ್ಷಗಾನ ಗುರುಗಳಾದ ದೇವಿಪ್ರಸಾದ್ ಗುರುವಾಯನಕೆರೆ ಉಪಸಿತರಿದ್ದರು.
ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಎಂ ಸ್ವಾಗತಿಸಿದರು. ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಲಕ್ಷ್ಮೀನಾರಾಯಣ ಕೆ ಧನ್ಯವಾದವಿತ್ತರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.

Related posts

ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಮೋಕ್ಷಿತ್ ಎಸ್ ಬಂಗೇರ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ಎಸ್‌ಡಿಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯ ಹಳೆ ವಿದ್ಯಾರ್ಥಿನಿ ಡಾ| ಶಿವಾನಿ ಎಂ.ಡಿ ರವರಿಗೆ ಅಭಿನಂದನ ಕಾರ್ಯಕ್ರಮ

Suddi Udaya

ರೂ. 1.10 ಕೋಟಿ ವೆಚ್ಚದ ಕೂಕ್ರಬೆಟ್ಟು ಪ್ರಾಥಮಿಕ ಶಾಲಾ ನೂತನ ಕಟ್ಟಡದ ಲೋಕಾರ್ಪಣೆ: ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ನಿರ್ಮಿಸುವ ವಿವೇಕ ಯೋಜನೆಯನ್ನು ಜಾರಿಗೆ ತನ್ನಿ ರಾಜ್ಯ ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ಸ.ಪ್ರ.ದ. ಕಾಲೇಜು ಬೆಳ್ತಂಗಡಿಯಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನವಯುವ ಕಾರ್ಯಕ್ರಮ

Suddi Udaya

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಸಭೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya
error: Content is protected !!