ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಮಡಂತ್ಯಾರು ಆಥಿತ್ಯದಲ್ಲಿ ಜೇಸಿ ಸಮ್ಮಿಲನ ಕಾರ್ಯಕ್ರಮ

ಮಡಂತ್ಯಾರು : ಜೆಸಿಐ ಮಡಂತ್ಯಾರು ಆಥಿತ್ಯದಲ್ಲಿ ಶಿಶು ವಿಹಾರ ಮಹಿಳಾ ಮಂಡಲದಲ್ಲಿ ಜೆಸಿ ಸಮ್ಮಿಲನ ಇತ್ತೀಚೆಗೆ ನಡೆಯಿತು.

ಜೆಸಿ ಭಾರತಿ ಸುರೇಶ್ ಅಥಿತಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಜೆಸಿ ಸದಸ್ಯರೆಲ್ಲರೂ ಜೆಸಿವಾಣಿ ವಾಚಿಸಿದರು. ಕಾರ್ಯಕ್ರಮವನ್ನು ಘಟಕದ ಪೂರ್ವಧ್ಯಕ್ಷರು ಜೆಸಿ ಬಿ. ಜಯಂತ ಶೆಟ್ಟಿ ಬಂಡಾರಿಗುಡ್ಡೆ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಶುಭವನ್ನ ಹಾರೈಸುವುದರೊಂದಿಗೆ ಹಿಂದಿನ ಘಟಕದ ಕಾರ್ಯಕ್ರಮಕ್ಕೂ ಈಗಿರುವ ಸಂಸ್ಥೆಯ ಕಾರ್ಯಕ್ರಮಕ್ಕೂ ಹೊಂದಾಣಿಕೆಯ ವಿಚಾರಗಳ ಬಗ್ಗೆ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜೆಸಿಐ ವಲಯ 15 ರ ಉಪಾಧ್ಯಕ್ಷ ರಂಜಿತ್ ಎಚ್ ಡಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಯನ್ನು 10 ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ (ರಿ.) ಮಡವು ಇದರ ಅಧ್ಯಕ್ಷ ಸಚಿನ್ ಸುವರ್ಣ ಇವರಿಗೆ ನೀಡಿ ಗೌರವಿಸಲಾಯಿತು.

ಅಧ್ಯಕ್ಷೆ ಜೆಸಿ ಅಮಿತಾ ಅಶೋಕ್ ಸ್ವಾಗತಿಸಿದರು. ಜೆಸಿ ಮನೋಜ್ ಮಾಯಿಲೋಡಿ ಸನ್ಮಾನಿತರ ಪರಿಚಯ ವಾಚಿಸಿದರು. ಜೆಸಿಐ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆ ಗೊಂಡ ಶ್ರೀಮತಿ ಅಶ್ವಿನಿ ಯವರಿಗೆ ವಲಯ ಉಪಾಧ್ಯಕ್ಷರು ಪ್ರಮಾಣ ವಚನ ಬೋದಿಸಿದರು, ವಲಯ ನಿರ್ದೇಶಕರಾದ HGF ಅಶೋಕ್ ಗುಂಡಿಯಲ್ಕ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ಜೇಸಿ ಆದರ್ಶ ಹಟ್ಟತ್ತೊಡಿ ಧನ್ಯವಾದವಿತ್ತರು.


ಜೆಸಿ ತುಳಸಿ ದಾಸ್ ಪೈ ಮನೋರಂಜನೇಯ ಆಟಗಳನ್ನು ಆಡಿಸಿ ವಿಜೇತರಿಗೆ ಬಹುಮಾನ ವಿತ್ತರು. ಜೇಸಿ ವಿಕೇಶ್ ಮಾನ್ಯ ಹಾಗೂ ಜೇಸಿ ಅಜಯ್ ಜೆ. ಶೆಟ್ಟಿ ಇವರ ಆತಿಥ್ಯದಲ್ಲಿ ಕಾರ್ಯಕ್ರಮ ನಡೆಯಿತು

Related posts

ಧರ್ಮಸ್ಥಳದಲ್ಲಿ ನಾಳೆ(ಫೆ.15) ಶಿವರಾತ್ರಿ ವೈಭವ : ಪಾದಯಾತ್ರಿಗಳ ಗಡಣ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಜಾಗರಣೆ, ಕಲಾಸೇವೆ

Suddi Udaya

ಲಾರಿ-ಕಾರು ಮಧ್ಯೆ ಅಪಘಾತ: ಕಾರು ನಜ್ಜುಗುಜ್ಜು

Suddi Udaya

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯ ನವೀಕರಿಸಿದ ಶಾಲಾ ಕಟ್ಟಡ ಹಸ್ತಾಂತರ

Suddi Udaya

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ತಲೆಮರೆಸಿಕೊಂಡಿದ್ದ ಪಡಂಗಡಿ ನೌಷದ್ ಹಾಗೂ ಮತ್ತೊರ್ವ ಆರೋಪಿ ಅಬ್ದುಲ್ ನಾಸಿರ್ ಬಂಧನ

Suddi Udaya

ನಾಳೆ(ಮಾ.22): ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರಿಗೆ, ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya
error: Content is protected !!