32.8 C
ಪುತ್ತೂರು, ಬೆಳ್ತಂಗಡಿ
October 12, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪುತ್ತೂರುಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ತಲೆಮರೆಸಿಕೊಂಡಿದ್ದ ಪಡಂಗಡಿ ನೌಷದ್ ಹಾಗೂ ಮತ್ತೊರ್ವ ಆರೋಪಿ ಅಬ್ದುಲ್ ನಾಸಿರ್ ಬಂಧನ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಹಿಂದೂ ಸಂಘಟನೆ ಕಾರ್ಯಕರ್ತ ಹಾಗೂ ಕೋಳಿ ಅಂಗಡಿ ವ್ಯವಹಾರ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು(32) ಎಂಬವರನ್ನು 26-07-2022 ರಂದು ರಾತ್ರಿ ಸುಮಾರು 8:30 ಕ್ಕೆ ಕೋಳಿ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುವ ಸಮಯದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಸಂಬಂಧ ಈವರೆಗೆ ರಾಷ್ಟ್ರೀಯ ತನಿಖಾ ದಳ(NIA) ಒಟ್ಟು 28 ಆರೋಪಿಗಳ ಪೈಕಿ 21 ಮಂದಿಯನ್ನು ಬಂಧಿಸಿದ್ದರು.

ಉಳಿದ ಆರೋಪಿಗಳ ಬಂಧನಕ್ಕೆ ಬಹುಮಾನ ಘೋಷಣೆ ಮಾಡಿ ಹುಡುಕಾಟ ನಡೆಸುತ್ತಿದ್ದರು.ಇದೀಗ 4 ವರ್ಷಗಳ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಎನ್.ಐ.ಎ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಎನ್.ಐ.ಎ ಅಧಿಕಾರಿಗಳು ಪ್ರವೀಣ್ ನೆಟ್ಟಾರು ಕೊಲೆ ಬಳಿಕ ಆರೋಪಿಗಳನ್ನು ಕಾರಿನಲ್ಲಿ ಪರಾರಿಯಾಗಲು ಕಾರು ಚಾಲಕನಾಗಿ ಸಹಾಯ ಮಾಡಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಹಮೀದ್ ಮಗ (ಆರೋಪಿ -23 ಆಗಿರುವ) ನೌಷದ್(32) ನನ್ನು ಬೆಂಗಳೂರು ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಚೌವ್ಡ್ಲೀ ಕಾನ್ವೇಂಟ್ ರೋಡ್ ನಿವಾಸಿ ಇಬ್ರಾಹಿಂ ಮಗ (ಆರೋಪಿ 22 ಆಗಿರುವ) ಅಬ್ದುಲ್ ನಾಸೀರ್(41) ಎಂಬವನನ್ನು ಕೊಚ್ಚಿಯಿಂದ ಜು.11 ರಂದು ಬಂಧಿಸಿದ್ದಾರೆ.

ಇನ್ನೂ ಐದು ಮಂದಿಯ ಬಂಧನ ಬಾಕಿ ಇದ್ದು. ಬಂಧನಕ್ಕಾಗಿ ಎನ್.ಐ.ಎ ಹುಡುಕಾಟ ಮುಂದುವರಿಸಿದ್ದಾರೆ.ಆರೋಪಿಗಳಾದ ಬೆಳ್ತಂಗಡಿಯ ನೌಷದ್ ಮತ್ತು ಕೊಡಗಿನ ಅಬ್ದುಲ್ ನಾಸೀರ್ ತಲೆಮರೆಸಿಕೊಂಡಿದ್ದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಪತ್ರಿಕಾ ಪ್ರಕಟಣೆ ಹೊರಡಿಸಿ ಪತ್ತೆಗೆ ಸಹಕರಿಸಿದ್ದಲ್ಲಿ ತಲಾ 2 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

Related posts

ಮದುವೆ ಸಮಾರಂಭದಲ್ಲಿ ಮಾದರಿ ಕಾರ್ಯ ವರನ ತಂದೆ ಮುಳುಗು ತಜ್ಞ ರಿಗೆ ಬಂಧು ಮಿತ್ರರಿಂದ ಸನ್ಮಾನ: ತನ್ನ ಪ್ರಾಯ ಲೆಕ್ಕಿಸದೆ ಇನ್ನೊಬ್ಬರ ಪ್ರಾಣ ರಕ್ಷಿಸುವ ಬಂದಾರು ಮಹಮ್ಮದರ ಸೇವೆ ಅನುಕರಣೀಯ :ಕೆ. ಎಂ.ಮುಸ್ತಫ

Suddi Udaya

ಅಳದಂಗಡಿ: ದಿ| ಸುಶೀಲ ಪೂಜಾರ್ತಿರವರ ಪ್ರಥಮ ವರ್ಷದ ಪುಣ್ಯಸ್ಮರಣೆ: ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಮನ ಮೆಚ್ಚುವ ಕಾರ್ಯ, ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ನಿಡ್ಲೆ: ಆಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿ. ಹೊಸ ಕಾರ್ಖಾನೆಯ ಉದ್ಘಾಟನೆ

Suddi Udaya

ಪ.ಪೂ. ಕಾಲೇಜುಗಳ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ಇಂದುಮತಿ ಮತ್ತು ಪಂಚಮಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಪೆರಿಯಶಾಂತಿಯಲ್ಲಿ ಸ್ಕಿಡ್ ಆಗಿ ಬಿದ್ದ ಬೈಕ್ : ಬೈಕ್ ಸವಾರನಿಗೆ ಗಾಯ: ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!