32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೊಗ್ರು ಸರಕಾರಿ ಶಾಲೆಯಲ್ಲಿ ಆಂ.ಮಾ. ಶಿಕ್ಷಣ ನೀಡಲು ಅನುಮತಿ: ಟ್ರಸ್ಟ್ ನ ಪ್ರಯತ್ನ | ಶಾಸಕರ ಸಾಥ್ | ಸರಕಾರದ ನಿರ್ಧಾರ

ಮೊಗ್ರು : ಸರಕಾರಿ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್(ರಿ) ಮೊಗ್ರು ಮುಗೇರಡ್ಕ ಇದರಿಂದ ದತ್ತು ಸ್ವೀಕರಿಸಲ್ಪಟ್ಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು, ಬೆಳ್ತಂಗಡಿ ಇಲ್ಲಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಅನುಮೋದನೆಯೊಂದಿಗೆ 2024-25 ರ ಶೈಕ್ಷಣಿಕ ಅವಧಿಯ 1ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ದ್ವಿ ಭಾಷಾ ಶಿಕ್ಷಣ ನೀತಿಯಲ್ಲಿ ಶಿಕ್ಷಣ ನೀಡಲು ಅನುಮತಿಯನ್ನು ಶಿಕ್ಷಣ ಇಲಾಖೆ ಹೊರಡಿಸಿದೆ.

ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇದನ್ನು ದತ್ತು ಸ್ವೀಕಾರ ಮಾಡಿದ ಮುಗೇರಡ್ಕ ಸರಕಾರಿ ಶಾಲಾ ಟ್ರಸ್ಟ್ ಈಗಾಗಲೇ ಶಾಲೆಗೆ ಬೇಕಾದ ಇಬ್ಬರು ಆಂಗ್ಲ ಭಾಷಾ ಶಿಕ್ಷಣ ನೀಡುವ ಅನುಭವಿ ಶಿಕ್ಷಕಿಯರನ್ನು ನೇಮಕ ಮಾಡಿದ್ದು, ಶಾಲೆಗೆ ಬೇಕಾದ ಪೀಠೋಪಕರಣ ಹಾಗೂ ಇನ್ನಿತರ ಮೂಲಭೂತ ಸೌಲಭ್ಯ ಒದಗಿಸುತ್ತಿದೆ. ಟ್ರಸ್ಟ್ನ ನೇತೃತ್ವದಲ್ಲಿ ಶಾಲಾ ವಾಹನ ಸೌಲಭ್ಯವನ್ನು ಒದಗಿಸಿದೆ.


ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಣ ಅನುಮತಿ ಪಡೆಯುವ ಪ್ರಯತ್ನವನ್ನು ಟ್ರಸ್ಟ್ನ ಅಧ್ಯಕ್ಷ ಕುಶಾಲಪ್ಪ ಗೌಡ ನೆಕ್ಕರಾಜೆ ವಹಿಸಿದ್ದು, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸಾಥ್ ನೀಡಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಸಹಕರಿಸಿದರು.

ಟ್ರಸ್ಟ್ನ ಕಾರ್ಯದರ್ಶಿ ಮನೋಹರ ಅಂತರ, ಕೋಶಾಧಿಕಾರಿ ಪುರಂದರ , ಪಂಚಾಯತ್ ಸದಸ್ಯ ಟ್ರಸ್ಟಿ ಬಾಲಕೃಷ್ಣ ಮುಗೇರಡ್ಕ, ಟ್ರಸ್ಟಿ ಚಂದಪ್ಪ ಡಿ. ಎಸ್, ಟ್ರಸ್ಟಿ ಪ್ರದೀಪ್, ಶಾಲಾ ಪ್ರಬಾರ ಮುಖೋಪಾಧ್ಯಾಯ ಮಾಧವ ಗೌಡ, ನಿಕಟಪೂರ್ವ ಎಸ್.ಡಿ.ಎಂ,ಸಿ ಅಧ್ಯಕ್ಷ ಶೀನಪ್ಪ ಗೌಡ ನೆಕ್ಕರಜೆ ಸಹಕರಿಸಿದರು.


ಈ ವರ್ಷ ಆಂಗ್ಲ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಮಕ್ಕಳಿಗೆ ಅವಕಾಶವಿದ್ದು ಶಾಲೆಗೆ ಪ್ರವೇಶ ಪಡೆಯಬಹುದು.
ಸಂಪರ್ಕಿಸಿ : 9480004379 /   9845588740

Related posts

ಕರಾಯ ವಿದ್ಯುತ್ ಫೀಡರುಗಳಲ್ಲಿ ನಾಳೆ (ಆ.8) ವಿದ್ಯುತ್ ನಿಲುಗಡೆ

Suddi Udaya

ಹೊಕ್ಕಾಡಿಗೋಳಿ ಸ. ಉ. ಪ್ರಾ. ಶಾಲೆಗೆ ದಾನಿಗಳಿಂದ ವಿದ್ಯಾರ್ಥಿಗಳಿಗೆ ವಿವಿಧ ಕೊಡುಗೆಗಳ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya

ಮುಂಡಾಜೆ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ

Suddi Udaya

ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ನಗರ ಸಮಿತಿ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಂಗಾಡಿ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ: ಬ್ಯಾಂಕ್ ವ್ಯವಹಾರಕ್ಕಾಗಿ ಗ್ರಾಹಕರ ಪರದಾಟ

Suddi Udaya
error: Content is protected !!