30.8 C
ಪುತ್ತೂರು, ಬೆಳ್ತಂಗಡಿ
September 12, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸಲೆಂಟ್ ಸಿಬಿಎಸ್ಇ ಶಾಲಾ ವಿದ್ಯಾರ್ಥಿಗಳಿಂದ ವನ ಮಹೋತ್ಸವ

ಮೂಡುಬಿದಿರೆ: ‘ ಪರಿಸರ ಉಳಿಸಿ, ಪರಿಸರ ಬೆಳೆಸಿ ‘ ಎನ್ನುವ ಉಕ್ತಿಯಂತೆ ಎಕ್ಸಲೆಂಟ್ ಸಿಬಿಎಸ್ಇ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ವನಮಹೋತ್ಸವ ಕಾರ್ಯಕ್ರಮವನ್ನು ಪಡ್ಡಂದಡ್ಕ ಗ್ರಾಮದ ಪರಿಸರ ಪ್ರೇಮಿ ಶ್ರೀಮತಿ ಪ್ರಸನ್ನ ರವರ ಮನೆಯ ಸುತ್ತಮುತ್ತಲಿನ ವಿಶಾಲ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮದ ಮೂಲ ರೂವಾರಿ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ರವರು ಸ್ವತಃ ತಾವೇ ಗಿಡವನ್ನು ನೆಡುವ ಮೂಲಕ ಮಕ್ಕಳಿಗೆ ಪರಿಸರದ ಹಾಗೂ ವನಸಂಪತ್ತಿನ ಉಳಿವಿನ ಅರಿವು ಮೂಡಿಸಿದರು.

ಪರಿಸರ ಪ್ರೇಮಿಯಾದ ಶ್ರೀಮತಿ ಪ್ರಸನ್ನ ರವರು ಮಾತನಾಡಿ ‘ಪ್ರಕೃತಿಯ ಉಳಿವು ನಮ್ಮೆಲ್ಲರ ಉಳಿವು’ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯ ಎಂದು ಮಕ್ಕಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಸನ್ನ ರವರ ಪುತ್ರಿಯಾದ ಶ್ರೀಮತಿ ಹೇಮಲತಾ ರವರು ಉಪಸ್ಥಿತರಿದ್ದರು . ಶಿಕ್ಷಕಿಯಾದ ಕುಮಾರಿ ಪ್ರಜ್ಞಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related posts

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಉಜಿರೆಯಲ್ಲಿ ಎನ್ ಎಸ್ ಯು ಐ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ

Suddi Udaya

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ: ಮುಂಡೂರು ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ.ಬಿ. ಆಯ್ಕೆ

Suddi Udaya

ಶಿಬಾಜೆ: ಭಂಡಿಹೊಳೆ ಸ.ಕಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರು ಯುವಶಕ್ತಿ ಸೇವಾ ಫೌಂಡೇಶನ್ ನಿಂದ ಉಚಿತ ಬ್ಯಾಗ್, ಪುಸ್ತಕ ವಿತರಣೆ

Suddi Udaya
error: Content is protected !!