ಗ್ರಾಮಾಂತರ ಸುದ್ದಿಚಿತ್ರ ವರದಿ

ಕೊಕ್ರಾಡಿ ಅತ್ರಿಜಾಲ್ ನಿಂದ ಕುತ್ಲೂರು ಸಂಪರ್ಕಿಸುವ ರಸ್ತೆಯ ಸೇತುವೆ ಕುಸಿದು ರಸ್ತೆ ಸಂಪರ್ಕ ಕಡಿತ ಅಡಿಕೆ ಮರದ ತಾತ್ಕಾಲಿಕ ಸೇತುವೆ ನಿರ್ಮಾಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಿಜೆಪಿ ಕಾರ್ಯಕರ್ತರು

ಕೊಕ್ರಾಡಿ: ಅತೀವ ಮಳೆಯಿಂದ ಕೊಕ್ರಾಡಿ ಅತ್ರಿಜಾಲ್ ನಿಂದ ಕುತ್ಲೂರು ಸಂಪರ್ಕಿಸುವ ರಸ್ತೆಯ ಸೇತುವೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಸಾರ್ವಜನಿಕರು ಓಡಾಟ ನಡೆಸಲು ಕಷ್ಟವಾಗಿದೆ.

ಸೇತುವೆ ನಿರ್ಮಾಣದ ವಿಚಾರಕ್ಕೆ ಸರಕಾರಕ್ಕೆ ಅನೇಕ ಭಾರಿ ಮನವಿ ಸಲ್ಲಿಸಿದರು ಇನ್ನೂ ಭೇಡಿಕೆ ಈಡೇರಿಲ್ಲ.ಇದರಿಂದ ಸಾರ್ವಜನಿಕರಿಗೆ,ಉದ್ಯೋಗಸ್ಥರಿಗೆ,ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದೆ.

ಇದೀಗ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ,ಅಂಡಿಂಜೆ ಗ್ರಾಮ‌ ಪಂಚಾಯತ್ ಸದಸ್ಯ ಜಗದೀಶ್ ಹೆಗ್ಡೆ ನೇತೃತ್ವದಲ್ಲಿ ಹಾಗೂ ಭಾರತೀಯ ಜನತಾ ಪಾರ್ಟಿಯ ಗ್ರಾಮ ಸಮಿತಿ ಹಾಗೂ ಊರಿನವರ ಸಹಕಾರದಿಂದ ಕೊಕ್ರಾಡಿ ಅತ್ರಿಜಾಲ್ ನಿಂದ ಕುತ್ಲೂರು ಸಂಪರ್ಕಿಸುವ ರಸ್ತೆಯ ಸೇತುವೆಗೆ ಅಡಿಕೆ ಮರದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿಕೇಂದ್ರದ ಅದ್ಯಕ್ಷ ಜಗದೀಶ್ ಹೆಗ್ಡೆ, ಕೊಕ್ರಾಡಿ ಬೂತ್ ಸಮಿತಿ ಅಧ್ಯಕ್ಷ ನೀಲಕಂಠ ಪ್ರಸಾದ್,ಕಾರ್ಯದರ್ಶಿ ಲೋಹಿತ್,ಶಾರದಾಂಭ ಯುವಕ ಮಂಡಲದ ಸದಸ್ಯರು,ಸ್ಥಳಿಯರಾದ ಚಂದ್ರಶೇಖರ ಶೆಟ್ಟಿಗಾರ್ ,ಕರುಣಾಕರ,ಸುಜಿತ್,ಸಂಜೀವ, ಹರೀಶ್,ಬೋಜ ಶೆಟ್ಟಿ ಹಾಗೂ ಇತರರು ಇದ್ದರು. ಈ ಸಂದರ್ಭ ನಾರಾವಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾಲತಾ ಭೇಟಿ ನೀಡಿದರು.

Related posts

ಬೆಳ್ತಂಗಡಿ ತಾಲೂಕು ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ

Suddi Udaya

ಆ. 31: ತಾಲೂಕು ಜೈನ ಸಮಾಜದವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ವಾಹನ ಜಾಥಾ

Suddi Udaya

ಕುಕ್ಕಳ, ಪಾರೆಂಕಿ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಪಟ್ರಮೆ: ಕೀಟನಾಶಕ ಸೇವಿಸಿ ಯುವಕ ಆತ್ಮಹತ್ಯೆ

Suddi Udaya

ಶಿಶಿಲ: ಗುಡ್ಡೆತೋಟ ಮನೆ ಯಮುನಾ ನಿಧನ

Suddi Udaya

ಅಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆರಿಗೆ ಮಾಡಿಸಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಕಿಯರು

Suddi Udaya
error: Content is protected !!