28.6 C
ಪುತ್ತೂರು, ಬೆಳ್ತಂಗಡಿ
September 19, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಸಾಮಾಜಿಕ ಜಾಲತಾಣದಲ್ಲಿ ಎಸ್‌ಡಿಪಿಐ ವಿರುದ್ಧ ಅವಹೇಳನಕಾರಿ ಪೋಸ್ಟ್: ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಧರ್ಮಸ್ಥಳ ಠಾಣೆಗೆ ದೂರು

ಬೆಳ್ತಂಗಡಿ : ಸಾಮಾಜಿಕ ಜಾಲತಾಣವಾದ ವಾಟ್ಸಪ್ಪ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವಿರುದ್ಧ ಅವಹೇಳನಕಾರಿ ಪೋಸ್ಟ್/ ಬರಹ ವಿರುದ್ಧ ಬೆಳ್ತಂಗಡಿ ವಿಧಾನಸಭಾ ಕ್ಷೇತಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅವರ ನಿಯೋಗದಿಂದ ಧರ್ಮಸ್ಥಳ ಠಾಣೆಗೆ ದೂರು ನೀಡಲಾಯಿತು.

ಚಾರ್ಮಾಡಿಯ MIDLEST CHARMADY ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಮಹಮ್ಮದ್ ಮುನೀರ್ ಮತ್ತು ನೌಫಲ್ ಎಂಬ ಯುವಕರು ನಿರಂತರ ಪಕ್ಷ ಹಾಗೂ ನಾಯಕರ ವಿರುದ್ಧ ಇಲ್ಲ ಸಲ್ಲದ ಅವಹೇಳನಕಾರಿ ದ್ವೇಷ ಹುಟ್ಟಿಸುವಂತಹ ಸಂದೇಶ ರವಾನೆ ಮಾಡುತ್ತಿದ್ದು, ರವಾನಿಸಿದಂತಹ ಸಂದೇಶಗಳು ಸತ್ಯಕ್ಕೆ ದೂರವಾದ್ದು ಎಂದು ದೂರಿನಲ್ಲಿ ಉಲ್ಲೆಖಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಸಂದೇಶದಿಂದ ಸಮಾಜದಲ್ಲಿ ಆಶಾಂತಿ ಉಂಟಾಗಿ ಗಲಭೆಗೆ ಪಿತೂರಿ ನಡೆಸುವ ಹುನ್ನಾರದಿಂದ ಸಂದೇಶ ರಚನೆ ಮತ್ತು ಹರಡುವಿಕೆಗೆ ಹೊಣೆಗಾರರಾಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಉಜಿರೆ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಅಲಿ, ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಕಟ್ಟೆ, ಮುಖಂಡರಾದ ಅಶ್ರಫ್ ಚಾರ್ಮಾಡಿ, ಸಿದ್ದಿಕ್ ಚಾರ್ಮಾಡಿ, ಮನ್ಸೂರ್ ಚಾರ್ಮಾಡಿ, ಬ್ರಾಂಚ್ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮ ಕುಂಭಾಭಿಷೇಕ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ

Suddi Udaya

ತಾಲೂಕು ಮಟ್ಟದ ಕ್ರೀಡಾಕೂಟ : ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಬೆಳ್ತಂಗಡಿ ಸ್ಟೇಟ್‌ಬ್ಯಾಂಕ್ ಆಪ್ ಇಂಡಿಯಾ ಶಾಖೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮದ್ದಡ್ಕ ಹೆದ್ದಾರಿ ಕಾಮಗಾರಿಯ ಯಂತ್ರಕ್ಕೆ ಸಿಲುಕಿ ವೃದ್ಧ ಬಲಿ

Suddi Udaya

ಚಾರ್ಮಾಡಿ: ಅಂಗನವಾಡಿ ಸಹಾಯಕಿ ಆತ್ಮಹತ್ಯೆ

Suddi Udaya

ಬಳಂಜ: ಬಿಲ್ಲವ ಸಂಘದಲ್ಲಿ ಮರಿಯಾಲಡೊಂಜಿ ಐತಾರ ವಿಶೇಷ ಕಾರ್ಯಕ್ರಮ: ಆಟಿಯ ವಿವಿಧ ತಿಂಡಿ ತಿನಸುಗಳ ಪ್ರದರ್ಶನ,ವಿವಿಧ ಮನೋರಂಜನಾ ಕಾರ್ಯಕ್ರಮ

Suddi Udaya
error: Content is protected !!