26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: 22ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಫಲಿತಾಂಶ

ಧರ್ಮಸ್ಥಳ : 2024-25ನೆಯ ವರ್ಷದಲ್ಲಿ ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್(ರಿ.) (ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ) ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ “ನಮ್ಮೂರ ಜಾತ್ರೆಗಳು” ಎಂಬ ವಿಷಯದ ಕುರಿತು 22ನೆಯ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ನಡೆಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ನೀಡಿದೆ.

ಅಂಚೆ-ಕುಂಚ ಸ್ಪರ್ಧೆಯಲ್ಲಿ 4 ವಿಭಾಗಗಳಿಂದ ಒಟ್ಟು 2380 ಸ್ಪರ್ಧಾಳುಗಳು ಭಾಗವಹಿಸಿರುತ್ತಾರೆ. ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಲ್ಲದೆ ಪ್ರತಿ ವಿಭಾಗಗಳಿಂದ 10 ಪ್ರೋತ್ಸಾಹಕರ ಕುಂಚ ಕಲಾವಿಧರನ್ನು ಆಯ್ಕೆ ಮಾಡಲಾಗಿದೆ. ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಹಾಗೂ ಅತಿಥಿಗಳ ಸಮ್ಮುಖದಲ್ಲಿ ಕುಂಚ ಕಲಾವಿದರನ್ನು ಗೌರವ ಧನ, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದ ದಿನಾಂಕ ಹಾಗೂ ಸ್ಥಳವನ್ನು ವಿಜೇತರಿಗೆ ದೂರವಾಣಿ ಮೂಲಕ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ತಿಳಿಸಿರುತ್ತಾರೆ.

22ನೆಯ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಫಲಿತಾಂಶ : “ನಮ್ಮೂರ ಜಾತ್ರೆಗಳು”

ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ : ಕು. ಸಾನ್ವಿ ಎನ್. ಎಸ್, ಸ.ಮಾ.ಹಿ.ಪ್ರಾ. ಶಾಲೆ, ಪಂಜ, ಸುಳ್ಯ ತಾಲೂಕು ದ್ವಿತೀಯ : ಕು. ನಿಹಾರ್ ಜೆ.ಎಸ್, ಜಿ. ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ, ತೃತೀಯ : ಕು. ನಿಧಿಶ್ ಜೆ. ನ್ಯಾಕ್, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ,

ಪ್ರೌಢಶಾಲಾ ವಿಭಾಗ:– ಪ್ರಥಮ : ಕು. ಅದಿತ್, ಕೆನರಾ ಹಿ.ಪ್ರಾ. ಶಾಲೆ, ಉರ್ವ, ಮಂಗಳೂರು, ದ್ವಿತೀಯ : ಕು. ದ್ರಿತಿ ಸಂತೋಷ್ ಪೂಜಾರಿ, ಲಿಟ್ಸ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ, ತೃತೀಯ : ಕು. ಅವನಿ ಎ. ಅರಿಗ: ಶ್ರೀ ಲಕ್ಷ್ಮೀ ಜನಾರ್ಧನ ಇಂಟರನ್ಯಾಷನಲ್ ಸ್ಕೂಲ್, ಬೆಳ್ಳಣ್ಣು, ಕಾರ್ಕಳ ತಾಲೂಕು

ಕಾಲೇಜು ವಿಭಾಗ:- ಪ್ರಥಮ : ಕು. ಅನುಪ ಶ್ರೀನಿವಾಸ ವಂದಿಗೆ, ಟಾಗೋರಾ ಚಿತ್ರಕಲಾ ಮಹಾ ವಿದ್ಯಾಲಯ, ಅಂಕೋಲಾ ದ್ವಿತೀಯ : ಕು. ಶರಣ್ಯ ತಂತ್ರಿ, ಮಾಧವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್, ಟೆಕ್ನಲಜಿ & ಮ್ಯಾನೇಜ್‌ಮೆಂಟ್, ಉಡುಪಿ ತೃತೀಯ : ಕು. ಚಂದನಾ ಪಾಂಡುರಂಗ ನಾಯ್ಕ, ದಿ. ನ್ಯೂ ಇಂಗ್ಲೀಷ್ ಪ.ಪೂ. ಕಾಲೇಜ್ ಅಯೋಧ್ಯಾನಗರ, ಭಟ್ಕಳ.

ಸಾರ್ವಜನಿಕ ವಿಭಾಗ: ಪ್ರಥಮ : ಬಿ.ಕೆ. ಮಾಧವ ರಾವ್, ಮಂಗಳೂರು. ದ್ವಿತೀಯ : ಶ್ರೀ ಈರಣ್ಣ ಕನಿಕಟ್ಟಾ ಪದವು, ತೆಂಕ್ಯಾಕಾರ್, ಪೆರ್ಮುಡೆ ಅಂಚೆ, ಮಂಗಳೂರು ತೃತೀಯ : ನಾಗರಾಜ ಆರ್. ಭಟ್, ದೀಪಾಂಜಲಿನಗರ, ಬೆಂಗಳೂರು

Related posts

ಉಜಿರೆ: ಧರ್ಮಜಾಗೃತಿ ಸಮಿತಿಯ ಪ್ರಧಾನ ಸಂಚಾಲಕರಾಗಿ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಆಯ್ಕೆ

Suddi Udaya

ಬಿಜೆಪಿ ಮಹಿಳಾ ಮೋರ್ಚಾದಿಂದ ಬೆಳ್ತಂಗಡಿ ಪ.ಪಂ. ಅಧ್ಯಕ್ಷರಾದ ಜಯಾನಂದ ಗೌಡ, ಉಪಾಧ್ಯಕ್ಷರಾದ ಗೌರಿ ರವರಿಗೆ ಅಭಿನಂದನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶುಶ್ರೂಷ ಮಾಹಿತಿ ಕಾರ್ಯಾಗಾರ: ಜೆಸಿಐ ಪದಾಧಿಕಾರಿಗಳೊಂದಿಗೆ ಕುಟುಂಭೋತ್ಸವ ಆಚರಣೆ, ಬಹುಮಾನ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ನಾರಾಯಣ ಪ್ರಭು ರವರಿಗೆ ಶ್ರದ್ಧಾಂಜಲಿ

Suddi Udaya

ಅಂಡಿಂಜೆ ಗ್ರಾಮ ಪಂಚಾಯತ್ ನಲ್ಲಿ ಅರಿವು ಕಾರ್ಯಕ್ರಮ

Suddi Udaya

ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರೇ ಹಿಂದೇಟು: ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ವೈರಲ್

Suddi Udaya
error: Content is protected !!