26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಪಾದೆ ಮತ್ತು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶೋಭಾ ಗೌಡ ಬಳ್ಳಿ ಜಂಟಿಯಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸನತ್ ಕುಮಾರ್ ಮೂರ್ಜೆ, ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳಾದ ಶ್ರೀನಿವಾಸ ಗೌಡ ಕಲ್ಲರಿಗೆ , ಗುರುವಪ್ಪ ಭಂಡಾರಿ ಆಗರಿ, ಬಾಲಣ್ಣ ಗೌಡ ಬಳ್ಳಿ, ಜಯಂತ ಗೌಡ ಪರಾರಿ, ಭಜನಾ ಮಂಡಳಿಯ ಕಾರ್ಯದರ್ಶಿ ಸತೀಶ್ ಪೂಜಾರಿ, ಮೂರ್ಜೆ ಇಷ್ಟ ದೇವತಾ ಕ್ಷೇತ್ರ ಕಕ್ಕಿಂಜೆ ಇದರ ಅಧ್ಯಕ್ಷ ಜಯಪ್ರಸಾದ್ ಗೌಡ ಪರಾರಿ, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಾರ್ಯದರ್ಶಿ ಶಾರದಾ ಗೌಡ ಪಿತ್ತಿಲು, ಉಪಾಧ್ಯಕ್ಷರುಗಳಾದ ಶ್ರೀಮತಿ ಉಷಾ ಡಿ.ಮಜಲು, ಶ್ರೀಮತಿ ಭಾರತಿ ಆಚಾರ್ಯ ಮುಂಡೈಲು, ಶ್ರೀಮತಿ ನೇತ್ರಾವತಿ ಗೌಡ ಕೆಮ್ಮಟೆ, ಶ್ರೀಮತಿ ಶೋಭಾ ಪೂಜಾರಿ ಬರಮೇಲು, ಶ್ರೀಮತಿ ಸೀತಾ ನೆಲ್ಲಿಗುಡ್ಡೆ, ಜತೆ ಕಾರ್ಯದರ್ಶಿಗಳಾದ ಶ್ರೀಮತಿ ಭವ್ಯ ಗೌಡ ಆಗರಿ, ಕುಮಾರಿ ನಿಖಿತಾ ಡಿ.ಮಜಲು, ಕೋಶಾಧಿಕಾರಿ ಶ್ರೀಮತಿ ಸುಮತಿ ಬರಮೇಲು, ಭಜನಾ ತಂಡದ ಸಂಚಾಲಕಿ ಸ್ವಾತಿ ಗೌಡ ಅರ್ಬಿ, ಸದಸ್ಯರಾದ ಅನ್ವಿತಾ, ಅಶ್ವಿತಾ, ಸುಕನ್ಯಾ, ರಚನಾ, ಉಜ್ವಲ್, ಪ್ರಜ್ವಲ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಪ್ರದಾನ ಅರ್ಚಕರಾದ ದಿವಾಕರ ಭಟ್ ಅವರಿಗೆ ನೀಡಿ ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು.

Related posts

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಸಹಕಾರ ಭಾರತಿ ಅಭ್ಯರ್ಥಿ ಉಮೇಶ್.ಎಂ.ಕೆ ಅವಿರೋಧವಾಗಿ ಆಯ್ಕೆ

Suddi Udaya

ಕರಂಬಾರು:ವಿಪರೀತ ಮಳೆಯಿಂದ ಅಣೆಕಟ್ಟಿನಲ್ಲಿ ಮರಗಳ ರಾಶಿ, ಪಕ್ಕದ ತೋಟಕ್ಕೆ ಹರಿದ ನೀರು, ಕೃಷಿಗೆ ಹಾನಿ

Suddi Udaya

ಅ.28 : ಈ ವರ್ಷದ ಕೊನೆಯ ‘ಚಂದ್ರಗ್ರಹಣ’ : 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ

Suddi Udaya

ಜು.14-19: ಬೆಳ್ತಂಗಡಿ ಪ್ರಭು ಜ್ಯುವೆಲ್ಸ್ ನಲ್ಲಿ ವಿಶೇಷ ಮನ್ಸೂನ್ ಮಾರಾಟ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ

Suddi Udaya
error: Content is protected !!