ಪೆರಿಂಜೆ: ಇಲ್ಲಿನ ಪಟ್ಟಾಡಿಯಲ್ಲಿ ಸ್ಥಾಪಿಸಿರುವ ಮರ್ಕಝ್ ತ್ವೈಬಾ ಎಜುಕೇಶನ್ ಸೆಂಟರಿನ ಸನ್ನಿಧಿಯಲ್ಲಿ ಹಾಜಿಮಲಂಗ್ ಕ್ಯಾಂಪಸ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮವು ಜು.4 ರಂದು ತ್ವೈಬಾ ಮರ್ಕಝ್ ಮೂಡಬಿದ್ರೆಯ ಸಂಸ್ಥೆಯ ಅಧ್ಯಕ್ಷ ಸೈಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೊಹಮ್ಮದ್ ಶರೀಫ್ ಫೈಝಿ ಹೊಸಂಗಡಿ ಗೈದರು ಸಂದೇಶ ಭಾಷಣವನ್ನು ಹುಸೈನ್ ಸಅದಿ ಕೆಸಿರೋಡ್ ಗೈದು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ, ಮಸ್ಊದ್ ಸಅದಿ, ರಝಾಕ್ ಸಖಾಫಿ ಮಡಂತ್ಯಾರ್, ತಾಜುದ್ದೀನ್ ಸಖಾಫಿ ಪೂಲಾಬೆ, ಕಲಂದರ್ ಬಾಖವಿ ಅಲ್ ಮಣ್ಣಾನಿ ಪಡ್ಡಂದಡ್ಕ, ಪೆರಮೊಗರು ಫಾಳಿಲಿ,ಕುಪ್ಪೆಟ್ಟಿ ಮುದರ್ರಿಸ್, ಹಂಝ ಮದನಿ, ಮನ್ಸೂರ್ ಸಖಾಫಿ ಗೋಳಿಯಂಗಡಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಮೊಹಮ್ಮದ್ ಶರೀಫ್ ಸಖಾಫಿ ಮಾಣಿ ಸ್ವಾಗತಿಸಿ, ತರ್ಫೀದ್ ಮುಈನೀ ಕಾಶಿಪಟ್ಣ ವಂದಿಸಿದರು.











