ಬೆಳ್ತಂಗಡಿ: ಮಿತ್ತರೋಡಿ ಸಾಮ್ರಾಟ್ ಶಿಲ್ಪಕಲಾ ಇದರ ಮಾಲಕ ಪ್ರಸಾದ್ ಆಚಾರ್ಯ ಇವರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಬಡಗಕಾರಂದೂರು ಇಲ್ಲಿನ ಶಾಲಾ ಮಕ್ಕಳಿಗೆ ಚಿತ್ರಕಲೆಗೆ ಪ್ರೋತ್ಸಾಹ ಪೂರ್ವಕವಾಗಿ ಉಚಿತವಾಗಿ ಡ್ರಾಯಿಂಗ್ ಪುಸ್ತಕವನ್ನು ಒದಗಿಸಿರುತ್ತಾರೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಧ್ಯಾಯ ಸುರೇಶ್ ಹೆಚ್ , ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್ ಬಾಪಟ್ , ಶಿಕ್ಷಕಿ ಶ್ರೀಮತಿ ಮಂಗಳಾ ಹಾಗೂ ಶಿಲ್ಪಿ ಭೀಮಣ್ಣ ಹಾಗೂ ಅಳದಂಗಡಿ ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಪೂಜಾರಿ ಬಿಕ್ಕಿರ ಉಪಸ್ಥಿತರಿದ್ದರು.











