ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಟ್ಟಿಗೆಯ ತುಂಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಆರೋಪ: ಪತಿಯ ವಿರುದ್ಧ ಪತ್ನಿ ವೇಣೂರು ಪೊಲೀಸರಿಗೆ ದೂರು

ಮೂಡುಕೋಡಿ: ಪತಿ ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನ ತಡೆಯಲಾರದೆ ತಾಯಿ ಮನೆಗೆ ಹೋಗಲು ಆಟೋ ರಿಕ್ಷಾದಲ್ಲಿ ಕುಳಿತ ಪತ್ನಿಯ ಕೈಯಲ್ಲಿದ್ದ ಮಗುವನ್ನು ಎಳೆದು ಪತ್ನಿಗೆ ಕಟ್ಟಿಗೆಯ ತುಂಡಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಜು.10 ರಂದು ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ.

ಇಮ್ರಾನ್ ಅಲಿ ಎಂಬಾತ ಸುಮಾರು2 ವರ್ಷಗಳ ಹಿಂದೆ ಖತೀಜ ಕೌಸರ್ ಅವರನ್ನು ಪ್ರೀತಿಸಿ ಮದುವೆಯಾಗಿ ಮೂಡುಕೋಡಿ ಗ್ರಾಮದ ನಡ್ತಿಕಲ್ಲು ಎಂಬಲ್ಲಿ ತನ್ನ ಪತ್ನಿ ಹಾಗೂ 11 ತಿಂಗಳ ಚಿಕ್ಕ ಮಗುವಿನೊಂದಿಗೆ ವಾಸವಾಗಿದ್ದಾರೆ. ಮದುವೆಯಾದ ಸ್ವಲ್ಪ ಸಮಯದಲ್ಲೇ ಇಮ್ರಾನ್ ಆಲಿ ಅಮಲು ಪದಾರ್ಥ ಸೇವಿಸಿಕೊಂಡು ಬಂದು ವಿನಾಕಾರಣ ಖತೀಜರ ಜೊತೆ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ವೇಣೂರು ಠಾಣೆಗೆ ನೀಡಿದ ದೂರಿನಲ್ಲಿ ಖತೀಜ ಆರೋಪಿಸಿದ್ದಾರೆ. ಜು.8 ರಂದು ಮದ್ಯಾಹ್ನ ಖತೀಜ ಕೌಸರ್‌ರನ್ನು ಕರೆದುಕೊಂಡು ಹೋಗಲು ಅಟೋರಿಕ್ಷಾದಲ್ಲಿ ಅವರ ತಂದೆ ಹಾಗೂ ಮಾವ ಬಂದಿದ್ದು, ಖತೀಜರವರು ಮಗುವಿನೊಂದಿಗೆ ಅಟೋರಿಕ್ಷಾದಲ್ಲಿ ಕುಳಿತಾಗ ಇಮ್ರಾನ್ ಆಕೆಯ ಕೈಯಲ್ಲಿದ್ದ ಮಗುವನ್ನು ಎಳೆದು, ಖತೀಜರವರನ್ನು ಕೈಹಿಡಿದು ಎಳೆದು, ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆಯ ತುಂಡಿನಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಖತೀಜಾ ಇಮ್ರಾನ್ ಆಲಿ ಇಲ್ಲದ ಸಮಯ ತವರು ಮನೆಗೆ ಬಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಜು.10 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಭಕ್ತರ ಗಮನ ಸೆಳೆದ ಶ್ರೀ ಮಹಾಲಿಂಗೇಶ್ವರ ದೇವರ ಸೆಲ್ಪಿ ಪ್ಯೊಂಟ್ ಮತ್ತು ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಮಳಿಗೆ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ, ಶೀತಲ್ ಜೈನ್ ಮಾಲೀಕತ್ವದ ಪವರ್ ಆನ್ ಸಂಸ್ಥೆಯ ಪ್ರಾಯೋಜಕತ್ವ

Suddi Udaya

ಬೆಳ್ತಂಗಡಿ: ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯಿಂದ ಆಟಿ ಕೂಟ ಆಚರಣೆ: ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿವಿಧ ಸ್ಪರ್ಧೆಗಳು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕುಟುಂಬ ಸಮೇತರಾಗಿ ಭೇಟಿ

Suddi Udaya

ಧರ್ಮಸ್ಥಳ ಯಕ್ಷಗಾನ ಮೇಳ: ಸೇವೆ ಬಯಲಾಟ ಪ್ರದರ್ಶನ

Suddi Udaya

ಬಂದಾರು ಗ್ರಾಮ ಓಟೆಚ್ಚಾರಿನಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಮತ್ತು ಸೊತ್ತುಗಳಿಗೆ ಹಾನಿ

Suddi Udaya

ನೆರಿಯದಲ್ಲಿ ಚಿರತೆ ಪತ್ತೆ

Suddi Udaya
error: Content is protected !!