September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮನೆಯ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ರೂ.1.70 ಲಕ್ಷ ಮೌಲ್ಯದ ಮರಳು ವಶ

ಆರಂಬೋಡಿ: ಮನೆಯ ತೋಟದಲ್ಲಿ ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ. 1.70 ಲಕ್ಷ ಮೌಲ್ಯದ ಮರಳನ್ನು ವೇಣೂರು ಪೊಲೀಸರು ಖಚಿತ ಮಾಹಿತಿ ಮೇಲೆ ವಶಪಡಿಸಿಕೊಂಡ ಪ್ರಕರಣ ಜು.9 ರಂದು ವರದಿಯಾಗಿದೆ.


ಆರಂಬೋಡಿ ಗ್ರಾಮದ ಕಾಂತರಬೆಟ್ಟು ಎಂಬಲ್ಲಿ ಸುಕೀತ್ ಎಂಬವರು ತನ್ನ ಮನೆಯ ಸಮೀಪ ತೋಟದ ಜಮೀನಿನ ಬಳಿ ಹರಿಯುವ ಫಲ್ಗುಣಿ ನದಿಯಿಂದ ಸುಮಾರು 3-4 ತಿಂಗಳ ಹಿಂದೆ ಅಕ್ರಮವಾಗಿ ಮರಳುಗಾರಿಕೆ ನಡೆಸಿ ತೋಟದಲ್ಲಿ ಸಂಗ್ರಹಿಸಿಟ್ಟುವುದಾಗಿ ವೇಣೂರು ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.

ಈ ಮಾಹಿತಿಯನ್ವಯ ಪೊಲೀಸರು ಜು.9ರಂದು ಮಧ್ಯಾಹ್ನ ಆರಂಬೋಡಿ ಗ್ರಾಮದ ಕಾಂತರಬೆಟ್ಟು ಎಂಬಲ್ಲಿ ಹೋಗಿ ಪರಿಶೀಲಿಸಿದಾಗ, ತೋಟದ ಬಳಿ ಅಂದಾಜು ಮೌಲ್ಯ ರೂ 1,70,000 ಮೌಲ್ಯದ ಸುಮಾರು 150-170 ಟನ್ ಗಳಷ್ಟು ಮರಳನ್ನು ತೋಟದಲ್ಲಿ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ರೆಖ್ಯ : ಶೌರ್ಯ ವಿಪತ್ತು ಸ್ವಯಂ ಸೇವಕ ತಂಡದಿಂದ ನೆಲ್ಯಡ್ಕ ಶಾಲೆಯಲ್ಲಿ ಕೈತೋಟ ನಿರ್ಮಾಣ

Suddi Udaya

ಹೊಟೇಲ್ ಗೆ ಬಂದು ಕುಟುಂಬ ಸದಸ್ಯರಿಗೆ ಹಲ್ಲೆ: ಐದು ಮಂದಿಯ ವಿರುದ್ಧ ಪ್ರಕರಣ ದಾಖಲು

Suddi Udaya

ಕಂಬಳ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ

Suddi Udaya

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya

ನಾವೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾಗಿ ಪೂವಪ್ಪ ಗೌಡ, ಕಾರ್ಯದರ್ಶಿಯಾಗಿ ದಿನೇಶ್ ಗೌಡ ಆಯ್ಕೆ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಉದಯ್ ಪೂಜಾರಿಯವರಿಗೆ ಸಾಂತ್ವಾನ ನಿಧಿ ಹಸ್ತಾಂತರ

Suddi Udaya
error: Content is protected !!