ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗದ್ದೆಯಿಂದ ನೇಜಿ ತೆಗೆದು ತಾವೇ ನಾಟಿ ಮಾಡಿದ ಮಕ್ಕಳು: ಕೊಯ್ಯೂರು ಸರಕಾರಿ ಶಾಲೆಯ 70 ಮಕ್ಕಳಿಗೆ ಕೃಷಿ ಪಾಠದ ಸಂಭ್ರಮ ; ಶಿಕ್ಷಕರ, ಪೋಷಕರ ಸಾಥ್

ಕೊಯ್ಯೂರು: ಕೊಯ್ಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ತಾವೇ ನೇಜಿ ತೆಗೆದು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ನಿಜವಾದ ಕೃಷಿಯ ಸಂಭ್ರಮವನ್ನು ಅನುಭವಿಸಿದರು.

ಶಾಲೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಶಾಂತಿಮಾರುವಿನ ನೀಲಮ್ಮ ಅವರ ಗದ್ದೆಯಲ್ಲಿ jಜು. 10 ರಂದು ನಡೆದ ಪ್ರಾತ್ಯಕ್ಷಿಕೆಯಲ್ಲಿ ಆರು ಮತ್ತು ಏಳನೇ ತರಗತಿಯ 70 ಮಕ್ಕಳು ಭಾಗವಹಿಸಿ, ಕೃಷಿ ಜ್ಞಾನ, ವ್ಯವಹಾರ ಜ್ಞಾನ ಮತ್ತು ವಿಜ್ಞಾನವನ್ನು ಏಕಕಾಲದಲ್ಲಿ ಕಲಿತರು. ಶಾಲಾ ಮುಖ್ಯ ಶಿಕ್ಷಕ ಬಳಿರಾಮ ಲಮಾಣಿ ಮಕ್ಕಳಿಗೆ ಬದುಕಿನ ಪಾಠ ಕಲಿಸುವಲ್ಲಿ ಮುಂಚೂಣಿಯಲ್ಲಿದ್ದರು. ಶಿಕ್ಷಕರು. ಮಕ್ಕಳ ಪೋಷಕರು ಇವರೊಂದಿಗೆ ಸಾಥ್ ನೀಡಿದರು.

ಈ ವೇಳೆ ಗದ್ದೆಯ ಮಾಲಕಿ ನೀಲಮ್ಮ ಅವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೃತರಾದ ಕುಶಾಲಪ್ಪ ಗೌಡ ಕಾಂತಿಮಾರು, ಜಯಾನಂದ ಗೌಡ ಶಾಂತಿಮಾರು, ಶಿವಪ್ಪ ಗೌಡ ಸಾದೂರು, ಸ್ಥಳೀಯರಾದ ವೆಂಕಣ್ಣ ಕೊಯ್ಯರು, ಉಮೇಶ್ ನೇಕಾರ, ವಸಂತ ನೇಕಾರ, ಕುಶಾಲಪ್ಪ ಗೌಡ ಬೊಟ್ಟು ತಿಮ್ಮ ಪಾಡನ ಕಲಾವಿದೆ ಗುಲಾಬಿ ಬಜಿಲ, ಭರತ್, ಭವಿತ್, ಶಾಲೆಯ ಸಹ ಶಿಕ್ಷಕರಾದ ರಮೇಶ್ ವಿ.ಎಸ್., ವಾಣಿ ಶ್ರೀ ವಿ, ಅರುಣ್ ನಾಯ್ಕ, ದೇವಪ್ಪ, ಅನುಷ, ವೀಣಾ, ಇತರರು ಉಪಸ್ಥಿತರಿದ್ದರು.

ಅನ್ನದ ಮೂಲ ಅರಿವಾಗಲಿ:
ಭತ್ತದ ಬೇಸಾಯವನ್ನು ಕೃಷಿಕರು ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಮಳೆಗೆ ಅನುಗುಣವಾಗಿ ಭತ್ತದ ಬಿತ್ತನೆ ಮಾಡಿ ನೇಜಿಯನ್ನು ತೆಗೆದು ನಾಟಿ ಮಾಡುತ್ತಾರೆ. ನಂತರ ಮೂರು ತಿಂಗಳಲ್ಲಿ ಬೆಳೆದು ನಿಲ್ಲುವ ಪೈರನ್ನು ಕಟಾವು ಮಾಡಿ ಭತ್ತವನ್ನು ಬೇರ್ಪಡಿಸಿ ಅಕ್ಕಿಯಾಗಿಸುವ ಪ್ರಕ್ರಿಯೆ ಮಕ್ಕಳಿಗೆ ಅರ್ಥವಾಗಬೇಕು. ನಮ್ಮ ಅನ್ನದ ಮೂಲದ ಅರಿವಿರಬೇಕು ಎಂಬ ಕಾರಣಕ್ಕಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿನಯ್ ಕೆ. ತಿಳಿಸಿದರು.

ಕುಣಿದು ಕುಪ್ಪಳಿಸಿದರು
ನಾಲ್ಕು ಗೋಡೆಗಳ ನಡುವಿನ ಪಾಠ, ಪ್ರವಚನಗಳಿಂದ ಪರಿಸರದ ನೈಜ ಪಾಠವನ್ನು ಅರಿಯುವ ಪ್ರಕ್ರಿಯೆಯನ್ನು ಮಕ್ಕಳು ಅನುಭವಿಸಿದರು.
ಗದ್ದೆ ಉಳುಮೆ, ಸೇಜಿ, ಸಾಟಿಯನ್ನು ಅರ್ಥ ಮಾಡಿಕೊಂಡು ಕೆಸರಿನ ಗದ್ದೆಯಲ್ಲಿ ಲವಲವಿಕೆಯಿಂದ ಕುಣಿದಾಡಿದರು.
ಕೆಸರು ಎರಟಾಡಿಕೊಂಡು, ಕೋಣಗಳಂತೆ ಓಡಾಡಿಸಿಕೊಂಡು ಖುಷಿಪಟ್ಟರು.
ನೇಜಿ ನಾಟಿ ಸಮಯದಲ್ಲಿ ಹೇಳುವ ಪಾಡ್ಡನಗಳನ್ನು ಅಚ್ಚರಿಯಿಂದ ಕೇಳುತ್ತಾ ತನ್ಮಯರಾದರು.

Related posts

ಅಳದಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಜನಜಾಗೃತಿ ನವ ಜೀವನ ವಲಯ ಸಮಿತಿಯ ಸಭೆ

Suddi Udaya

ಮಚ್ಚಿನ ಸ.ಉ.ಪ್ರಾ. ಶಾಲೆಯ ನೂತನ ತರಗತಿ ಕೊಠಡಿ, ಗ್ರಂಥಾಲಯ ಕೊಠಡಿ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya

ಶಾಸಕ ಹರೀಶ್ ಪೂಂಜಾ ರವರ ಇಂದಬೆಟ್ಟು ಜನಸ್ಪಂದನ ಕಾರ್ಯಕ್ರಮದ ಫಲಶೃತಿ: ಇಂದಬೆಟ್ಟು-ಗುರಿಪಳ್ಳ ರಸ್ತೆಯ ಬದಿಯ ಗಿಡಗಂಟಿಗಳ ತೆರವು ಕಾರ್ಯ

Suddi Udaya

ಬಳಂಜ: ಬಿಲ್ಲವ ಸಂಘದಲ್ಲಿ ಮರಿಯಾಲಡೊಂಜಿ ಐತಾರ ವಿಶೇಷ ಕಾರ್ಯಕ್ರಮ: ಆಟಿಯ ವಿವಿಧ ತಿಂಡಿ ತಿನಸುಗಳ ಪ್ರದರ್ಶನ,ವಿವಿಧ ಮನೋರಂಜನಾ ಕಾರ್ಯಕ್ರಮ

Suddi Udaya

ವೇಣೂರು ಶ್ರೀ ಶಾರದಾ ಟ್ರಸ್ಟ್ ವತಿಯಿಂದ ವೇಣೂರು ಸ.ಪ್ರೌ. ಶಾಲಾ ಶಿಕ್ಷಕ ರವೀಂದ್ರ ಕೆ. ರವರಿಗೆ ಸನ್ಮಾನ

Suddi Udaya

ಉಜಿರೆ ಎಸ್.ಡಿ.ಎಂ ಸಿ.ಬಿ.ಎಸ್.ಇ ಶಾಲೆಗೆ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಭೇಟಿ

Suddi Udaya
error: Content is protected !!