ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬ: ಎಕ್ಸೆಲ್ ಕಾಲೇಜು ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರಿಂದ ಲಾಂಛನ ಅನಾವರಣ

ವೇಣೂರು : ಐತಿಹಾಸಿಕ ಮಹತ್ತ್ವದ ವೇಣೂರಿನ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ 25 ವರ್ಷ ತುಂಬುವ ಸಂಭ್ರಮ. ಫಲ್ಗುಣಿ ಸೇವಾ ಸಂಘ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವವನ್ನು ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ. ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬದ ಲಾಂಛನವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಅನಾವರಣಗೊಳಿಸಿದರು.

ವೇಣೂರಿನ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಕೆ.ಶಿವರಾಮ ಹೆಗ್ಡೆ, ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ.ಶಾಂತಿ ಪ್ರಸಾದ್, ಭಾಸ್ಕರ ಪೈ, ಅಧ್ಯಕ್ಷರಾದ ಜಗದೀಶ್ ಡಿ ಕೆ, ಫಲ್ಗುಣಿ ಸೇವಾ ಸಂಘದ ಅಧ್ಯಕ್ಷ ವಿ ಎಸ್ ಜಯರಾಜ್, ಸದಸ್ಯರಾದ ಪ್ರಸನ್ನ ಹೆಬ್ಬಾರ್, ಶ್ರೀಕಾಂತ ಉಡುಪ ಹೇಮಂತ್ ಕುಮಾರ್, ಅರುಣ್ ಕುಮಾರ್ ಐಂದಲ್ಕೆ, ಸುದತ್ ಜೈನ್,, ಪ್ರಮೋದ್ ಕುಮಾರ್ ಜೈನ್, ಗಂಗಾಧರ ಆಚಾರ್ಯ, ಪ್ರಶಾಂತ ನಾಯಕ್, ಸದಾಶಿವ ಭಂಡಾರಿ, ಪ್ರಕಾಶ್ ಚಂದ್ರ ಹೆಗ್ಡೆ,ನಿರಂಜನ್ ಕೆ ಎಸ್, ಪ್ರಸಾದ ಜೈನ್, ಶ್ರೀ ಸದಾನಂದ ‘ ಬ್ರಹ್ಮ ಶ್ರೀ ‘, ಸೀತಾರಾಮ ಆಚಾರ್ಯ, ಗಿರೀಶ್ ಕೆ ಎಸ್, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಕ್ಯಾಂಪಸ್ ಮ್ಯಾನೇಜರ್ ಶಾಂತಿ ರಾಜ್ ಜೈನ್ ಹಾಗೂ ಎಕ್ಸೆಲ್ ಟೆಕ್ನೋ ಸ್ಕೂಲ್ ನ ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡರು.

Related posts

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಕ್ಷಾಬಂಧನ – ವರಮಹಾಲಕ್ಷ್ಮೀ ಪೂಜೆ

Suddi Udaya

ಬಂದಾರು ಶ್ರೀ ವಿಷ್ಣುಮೂರ್ತಿ ದೇವರ 22 ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ

Suddi Udaya

ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೆಲ್ಕೋ ಇಂಡಿಯಾ ಫೌಂಡೇಶನ್ ವತಿಯಿಂದ ಸೌರ ವಿದ್ಯುತ್ ಘಟಕ ಹಸ್ತಾಂತರ

Suddi Udaya

ಪುಂಜಾಲಕಟ್ಟೆ – ಚಾಮಾ೯ಡಿ‌ ಹೆದ್ದಾರಿ ಕಾಮಗಾರಿ ಗುತ್ತಿಗೆಯಲ್ಲಿ ಬದಲಾವಣೆ: ಮೊಗ್ರೋಡಿ ಕನ್ ಸ್ಟ್ರಕ್ಷನ್ ಗೆ ನೀಡುವ ಕುರಿತು ನಿಧಾ೯ರ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವಾರ್ಷಿಕ ಮಹಾಸಭೆ

Suddi Udaya

ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಏಳು ಅಸ್ಥಿಪಂಜರ ಎಫ್ಎಸ್ಎಲ್ ಗೆ ರವಾನೆ

Suddi Udaya
error: Content is protected !!