25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ತಾಳೆ ಬೆಳೆಯ ಬಗ್ಗೆ ಮಾಹಿತಿ

ಬೆಳ್ತಂಗಡಿ: ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ ಚಿಂತನೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಾಳೆ ಬೆಳೆ ಕೃಷಿಗೆ ಸಂಬಂಧಿಸಿದಂತೆ ಕಲಿಕಾ ಪ್ರವಾಸವನ್ನು ಬೆಳ್ತಂಗಡಿ ತಾಲೂಕಿನ ಕೃಷಿ ಸಖಿಗಳು ಮತ್ತು ತಾಳೆ ಕೃಷಿಗೆ ಆಸಕ್ತಿ ಹೊಂದಿದ ಹೊಸ ರೈತರ ಪ್ರವಾಸ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.

ಸುಳ್ಯ ತಾಲೂಕಿನಲ್ಲಿ ತಾಳೆ ಬೆಳೆಯನ್ನು ಅತ್ಯುತ್ತಮವಾಗಿ ಬೆಳೆದ ಪಂಬೆತ್ತಾಡಿಯ ಕೆ ಎಸ್ ಅಶೋಕ್ ಕುಮಾರ್ ಕರಿಕ್ಕಳ ರೈತರ ತೋಟಕ್ಕೆ ಭೇಟಿ ನೀಡಿ ಅವರಿಂದ ತಾಳೆ ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ತಾಳೆ ಬೆಳೆ ಕೃಷಿಗೆ ಸಂಬಂಧಿಸಿದಂತೆ ಕಲಿಕಾ ಪ್ರವಾಸದಲ್ಲಿ ಒಟ್ಟು 65 ಮಂದಿ ಭಾಗವಹಿಸಿದ್ದರು. ಅದರಲ್ಲಿ 50 ಕೃಷಿ ಸಖಿಗಳು,15 ತಾಳೆ ಕೃಷಿಯ ಹೊಸ ರೈತರು ಹಾಗೂ ಮಂಗಳೂರು ಜಿಲ್ಲೆಯ ತೋಟಗಾರಿಕಾ ಡೆಪ್ಯುಟಿ ಡೈರೆಕ್ಟರ್ ಮಂಜುನಾಥ ಹಾಗೂ ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನ ತೋಟಗಾರಿಕಾ ಅಧಿಕಾರಿಗಳು ಭಾಗವಹಿಸಿದ್ದರು.

ತಾಳೆ ಬೆಳೆಯನ್ನು ಅಡಿಕೆಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಾಗುತ್ತಿದೆ. ಅಡುಗೆ ಎಣ್ಣೆ ಇಂದು ದೇಶದಲ್ಲಿ ಬೇಡಿಕೆ ಇದೆ. ಮುಖ್ಯವಾಗಿ ತಾಳೆ ಎಣ್ಣೆ ಉತ್ಪಾದನೆಗಾಗಿ ಬೆಳೆಸಲಾಗುತ್ತದೆ. ಹೀಗಾಗಿ ಉತ್ತಮ ಬೇಡಿಕೆ ಇದೆ. ಇದಕ್ಕಾಗಿ ರೈತರಿಗೆ ತಾಳೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.

Related posts

ಹೊಕ್ಕಾಡಿಗೋಳಿ ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಬೆಳ್ತಂಗಡಿ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದಲ್ಲಿ ನಿರಂತರ ವಿವಿಧ ಭಜನಾ ತಂಡದಿಂದ ಭಜನಾ ಸೇವೆ

Suddi Udaya

ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಭಿವೃದ್ಧಿ ಅಗಲೀಕರಣ ಕಾಮಗಾರಿ ಆರಂಭ

Suddi Udaya

ಗುರುವಾಯನಕೆರೆ: ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಜೂ.27 : ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಹಾಗೂ ತೋಟದ ಸಮಗ್ರ ನಿರ್ವಹಣೆ ಕುರಿತು ಸಾಂಸ್ಥಿಕ ತರಬೇತಿ

Suddi Udaya

ನಿಟ್ಟಡೆ ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಕುಂಭ ಕಾರ್ನಿವಾಲ್ ಕಾರ್ಯಕ್ರಮ

Suddi Udaya
error: Content is protected !!