25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಮಾಣ ವಚನ ಸ್ವೀಕಾರ

ಕಕ್ಯ ಪದವು: “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು; ಅವರಿಗೆಲ್ಲ ಬೇಕು ನಾಯಕರು” ಎಂಬಂತೆ ಎಲ್ ಸಿ ಆರ್ ವಿದ್ಯಾಸಂಸ್ಥೆಯ 2025-26 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಹಾಗೂ ಪ್ರಮಾಣವಚನ ಕಾರ್ಯಕ್ರಮವನ್ನು ಜು. 12ರಂದು ನೆರೆವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಜೋಸ್ಟಾನ್ ಲೋಬೋ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ವಿಜಯ, ಸಂಸ್ಥೆಯ ಸಂಯೋಜಕ ಯಶವಂತ ಜಿ ನಾಯಕ್ ಹಾಗೂ ಕಾರ್ಯಕ್ರಮದಲ್ಲಿ ಶ್ರೀಮತಿ ದಿವ್ಯಶ್ರೀ ಅಲ್ಲದೇ ಎಲ್ಲಾ ಶಿಕ್ಷಕ ವೃಂದ ಹಾಗೂ ಬೋಧಕೇತರ ವರ್ಗ ಉಪಸ್ಥಿತರಿದ್ದರು.

ಆಯ್ಕೆಯಾದ ಮಂತ್ರಿಮಂಡಲದ ಎಲ್ಲಾ ಸದಸ್ಯರುಗಳಿಗೆ ಬ್ಯಾಡ್ಜ್ ಗಳನ್ನು ವಿತರಿಸಿ ,ಹೂಗುಚ್ಛಗಳನ್ನುನೀಡುವುದರ ಮೂಲಕ ಸಂಸ್ಥೆಯ ಪ್ರಾಂಶುಪಾಲ, ಸಂಯೋಜಕ ಹಾಗೂ ಮುಖ್ಯ ಶಿಕ್ಷಕಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಶಾಲಾ ನಾಯಕಿ 10ನೇ ತರಗತಿಯ ಮನಸ್ವಿನಿ, ಉಪನಾಯಕಿಯಾಗಿ 9ನೇ ತರಗತಿಯ ಅದಿತಿ ಎಂ ಪ್ರಭು, ಶಿಕ್ಷಣ ಮಂತ್ರಿಗಳಾಗಿ ನವನೀತ್ ಮತ್ತು ಗೌತಮ್ ನಾಯಕ್, ಶಿಸ್ತಿನ ಹಾಗೂ ಆರೋಗ್ಯ ಮಂತ್ರಿಗಳಾಗಿ ಫಾತಿಮತ್ ಶೈಮ ಮತ್ತು ಸಾತ್ವಿಕ, ಕ್ರೀಡಾ ಮಂತ್ರಿಗಳಾಗಿ ಸಾನ್ವಿತ್ ಮತ್ತು ಚಿರಾಗ್, ಸಾಂಸ್ಕೃತಿಕ ಮಂತ್ರಿಗಳಾಗಿ ನಿಖಿಲ್ ಮತ್ತು ಚಿರಾಗ್ ಕೆ. ಎಸ್, ಗುಂಪಿನ ಪ್ರತಿನಿಧಿಗಳಾಗಿ ಪ್ರೀತಮ್, ಮೊಹಮ್ಮದ್ ಶಾಹಿಲ್, ಸಾನ್ವಿ ವೈ ಅಂಚನ್ ಮತ್ತು ಸಮೀಕ್ಷಾ ಇವರಿಗೆ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ಕೆ ಇವರು ಪ್ರತಿಜ್ಞಾವಿಧಿಯನ್ನು ಬೋಧಿಸಿ ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಕಿವಿ ಮಾತನ್ನು ಹೇಳಿದರು.

ಶಾಲಾ ಪ್ರಾಂಶುಪಾಲ ಜೋಸ್ಟನ್ ಲೋಬೊ ಆಯ್ಕೆಯಾದ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಿದರು.,

ವಿದ್ಯಾರ್ಥಿಗಳಾದ ರಶ್ಮಿ ಆರ್ ಪೂಜಾರಿ ಸ್ವಾಗತಿಸಿ, ದೀಪ್ತಿ ಹಾಗೂ ತನ್ವೀ ಕಾರ್ಯಕ್ರಮ ನಿರೂಪಿಸಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಪ್ರತೀಕ್ಷ ವಂದಿಸಿದರು.

Related posts

ಬೆಳ್ತಂಗಡಿ: ತಾಲೂಕು ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya

ವಿವಿಧೆಡೆ ಶಾಸಕ ಹರೀಶ್ ಪೂಂಜ ಮತ ಯಾಚನೆ

Suddi Udaya

ಉಜಿರೆ ಅನುಗ್ರಹ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮ

Suddi Udaya

ಭಾರೀ ಮಳೆ ; ಮೈದುಂಬಿ ಹರಿಯುತ್ತಿರುವ ಕಪಿಲ ನದಿ: ಶಿಶಿಲೇಶ್ವರ ದೇವಸ್ಥಾನ ಹೊರಂಗಣ ಜಲಾವೃತ

Suddi Udaya

ಬೆಳ್ತಂಗಡಿ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ನಿವೃತ್ತ ಜಯಕೀರ್ತಿ ಜೈನ್ ರವರಿಗೆ ಬೀಳ್ಕೊಡುಗೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!