25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಮುಖ್ಯ ದ್ವಾರದ ಬಳಿ ಪಾರ್ಕ್ ಮಾಡಿದ ದ್ವಿಚಕ್ರ ವಾಹನ ಕಳವು

ಧರ್ಮಸ್ಥಳ: ಧರ್ಮಸ್ಥಳ ಮುಖ್ಯ ದ್ವಾರದ ಬಳಿಯ ಪಾರ್ಕಿಂಗ್‌ನಲ್ಲಿ ದ್ವಿಚಕ್ರವಾಹವನ್ನು ಕಳ್ಳರು ಕಳವು ಮಾಡಿದ ಪ್ರಕರಣ ಜು.10 ರಂದು ವರದಿಯಾಗಿದೆ.


ನಿಡ್ಲೆ ಗ್ರಾಮದ ಮಜಲುಮಾರು ಸಂಜೀವ ಗೌಡರ ಪುತ್ರಿ ಉಜಿರೆ ಪ್ರಕಾಶ್ ಇಲೆಕ್ಟ್ರಾನಿಕ್ಸ್‌ನಲ್ಲಿ ಉದ್ಯೋಗದಲ್ಲಿರುವ ಆಶಾ ಅವರು ನಿಡ್ಲೆಯಿಂದ ಧರ್ಮಸ್ಥಳ ತನಕ ದ್ವಿಚಕ್ರವಾಹನದಲ್ಲಿ ಬಂದು ಧರ್ಮಸ್ಥಳದ ಮಹಾದ್ವಾರದ ಬಳಿಯ ವಾಹನ ಪಾರ್ಕ್‌ನಲ್ಲಿ ವಾಹನ ನಿಲ್ಲಿಸಿ ಉಜಿರೆಗೆ ಬರುತ್ತಿದ್ದರು. ಜು.10 ರಂದು ಬೆಳಿಗ್ಗೆ ಎಂದಿನಂತೆ ದ್ವಿಚಕ್ರ ವಾಹನ KA 21 X 7375 ನೇ ನಂಬ್ರದ ಹೋಂಡಾ ಕಂಪನಿಯ ಡಿಯೋ ವಾಹನವನ್ನು ಪಾರ್ಕ್ ಮಾಡಿ ಕೆಲಸಕ್ಕೆ ಉಜಿರೆಗೆ ಬಂದಿದ್ದರು. ಸಂಜೆ ಕೆಲಸ ಮುಗಿಸಿ ಹೋಗುವಾಗ ತಾನು ಪಾರ್ಕ್ ಮಾಡಿದ ಸ್ಥಳದಲ್ಲಿ ದ್ವಿಚಕ್ರವಾಹನ ಇರಲಿಲ್ಲ. ನಂತರ ಅಕ್ಕ ಪಕ್ಕದಲ್ಲಿ ಹುಡುಕಾಡಿ ಎಲ್ಲಿಯೂ ಪತ್ತೆಯಾಗಲಿಲ್ಲ. ಕೂಡಲೇ ತನ್ನ ತಂದೆಯವರಿಗೆ ವಿಷಯ ತಿಳಿಸಿ ಅವರ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದಿರುವುದರಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳವಾದ ದ್ವಿಚಕ್ರವಾಹನದ ಮೌಲ್ಯ ರೂ. 25 ಸಾವಿರ ಎಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನಡ: ಶಾರ್ಟ್ ಸರ್ಕ್ಯೂಟ್‌ನಿಂದ ಆಟೋ ರಿಕ್ಷಾ ಸಂಪೂರ್ಣ ಭಸ್ಮ

Suddi Udaya

ಕಲ್ಮಂಜ: ಸತ್ಯನಪಲ್ಕೆ ಎಂಬಲ್ಲಿ ಸೇತುವೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ: ಗ್ರಾಮಸ್ಥರಿಂದ ತೆರವು ಕಾರ್ಯ

Suddi Udaya

ಉಜಿರೆ: 35 ಮಂದಿ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

Suddi Udaya

ಬಂದಾರು: ತೀರ ಹದಗೆಟ್ಟ ರಸ್ತೆ; ದುರಸ್ತಿಗೊಳಿಸುವಂತೆ ಸ್ಥಳೀಯರ ಮನವಿ

Suddi Udaya

ಗೇರುಕಟ್ಟೆ ಜನತಾ ಕಾಲೋನಿ ನಿವಾಸಿ ಹಿರಿಯ ಅಟೋ ಚಾಲಕ ಪುತ್ತುಮೋನು ರವರ ಪುತ್ರ ಮುಸ್ತಫಾ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿಯಲ್ಲಿ ಬಿ.ಎ ಮೊಬೈಲ್ ಮತ್ತು ವಾಚ್ ಮಳಿಗೆ ಶುಭಾರಂಭ

Suddi Udaya
error: Content is protected !!