30 C
ಪುತ್ತೂರು, ಬೆಳ್ತಂಗಡಿ
March 6, 2026
ವರದಿಸಂಘ-ಸಂಸ್ಥೆಗಳು

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ,ಸಾಧಕ ರೈತರಿಗೆ,ವಿಧ್ಯಾರ್ಥಿಗಳಿಗೆ ಸನ್ಮಾನ,ಪ್ರತಿಭಾ ಪುರಸ್ಕಾರ : 455.79 ಕೋಟಿ ವ್ಯವಹಾರ,ರೂ1.62 ಕೋಟಿ ಲಾಭ,ಸದಸ್ಯರಿಗೆ ಶೇ.15% ಡಿವಿಡೆಂಟ್ ಘೋಷಣೆ: ಸಹಕಾರಿಗಳಿಗೆ ಅನುಕೂಲವಾಗುವಂತೆ ಪಡಿತರವನ್ನು ರಾತ್ರಿಯವರೆಗೆ ವಿತರಣೆ :ಜೋಯೆಲ್ ಮೆಂಡೋನ್ಸ

ಮಡಂತ್ಯಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 55 ನೇ ವರ್ಷದ ವಾರ್ಷಿಕ ಮಹಾಸಭೆ, ಸಾಧಕರ ರೈತರಿಗೆ ಸನ್ಮಾನ,ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಸ್ತಾಂತರ ಕಾರ್ಯಕ್ರಮವು ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸರವರ ಅಧ್ಯಕ್ಷತೆಯಲ್ಲಿ ಜು.13 ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಿತು.

ಸಂಘದ ಕಾರ್ಯಕ್ಷೇತ್ರವು ಮಾಲಾಡಿ, ಸೋಣಂದೂರು, ಪಾರೆಂಕಿ, ಕುಕ್ಕಳ ಈ ನಾಲ್ಕು ಗ್ರಾಮಗಳನ್ನು ಒಳಗೊಂಡಿದೆ. ಸಂಘವು ಆರ್ಥಿಕ ವರ್ಷಾಂತ್ಯದಲ್ಲಿ 455.79 ಕೋಟಿ ಉತ್ತಮ ವ್ಯವಹಾರ ನಡೆಸಿ, ಶೇ. 97 ಸಾಲ ವಸೂಲಾತಿಯನ್ನು ಮಾಡಿ 2024-25 ನೇ ಆರ್ಥಿಕ ವರ್ಷದಲ್ಲಿ 16255756.84 ಲಾಭ ಗಳಿಸಿದೆ. ರೈತ ಸದಸ್ಯರಿಗೆ ಶೇ.15% ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ ಹೇಳಿದರು.

ಮಹಾಸಭೆ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಪರಿಶ್ರಮ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಧಕ ವಿಧ್ಯಾರ್ಥಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ವೇತನ ಹಸ್ತಾಂತರ ಮಾಡಲಾಯಿತು.

ಮಹಾಸಭೆಯಲ್ಲಿ ಉಪಾಧ್ಯಕ್ಷ ಕಾಂತಪ್ಪ ಗೌಡ,ನಿರ್ದೇಶಕರಾದ ಕೆ.ಅರವಿಂದ ಜೈನ್,ಶ್ರೀಮತಿ ಧನಲಕ್ಷ್ಮಿ,ಶ್ರೀಮತಿ ಅಮಿತಾ ಪ್ರಿಯಾ ಲೋಬೋ,ಸುರೇಶ್ ಎಸ್,ಕುಮಾರ ನಾಯ್ಕ,ಮಹಾಬಲ ಕೆ,ಗಣೇಶ್ ಮೂಲ್ಯ,ಗೋಪಾಲಕೃಷ್ಣ ಕೆ,ಕಿಶೋರ್ ಕುಮಾರ್ ಶೆಟ್ಟಿ, ಬಿ.ಪದ್ಮನಾಭ ಸಾಲಿಯಾನ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೋಕಿಂ ಡಿಸೋಜ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿಗಳು, ಸಹಕಾರಿ ಸದಸ್ಯರು ಸಹಕರಿಸಿದರು. ಮಧ್ಯಾಹ್ನ ಶುಚಿ ರುಚಿಯಾದ ವೆಜ್ & ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.

Related posts

ಕಳೆಂಜ: ಕೊತ್ತೋಡಿ ನಿವಾಸಿ ಸುಂದರ ಗೌಡ ನಿಧನ

Suddi Udaya

ಪದ್ಮುಂಜ ಸರಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಅವಕಾಶ ವಂಚನೆಯ ಆರೋಪ : ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶಾಸಕ ಹರೀಶ್ ಪೂಂಜರವರಿಗೆ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ವೇಣೂರು ಶ್ರೀಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಆಹ್ವಾನ

Suddi Udaya

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಓಣಂ ಮತ್ತು ಕೌಶಲ್ಯಕಲಾ ಕೇಂದ್ರದ ಶಿಕ್ಷಕಿಯರಿಗೆ ಗೌರವ ಕಾರ್ಯಕ್ರಮ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ವೇಣೂರು ಸಹಕಾರಿ ಸಂಘಕ್ಕೆ ಪ್ರಶಸ್ತಿ

Suddi Udaya
error: Content is protected !!