September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ ದೇವಸ್ಥಾನದಲ್ಲಿ ಬೃಹತ್ ನೇಜಿ ನಾಟಿ ಕಾರ್ಯಕ್ರಮ

ಕಳೆಂಜ: ಇಲ್ಲಿಯ ದೇವರಮಾರ್ ಶ್ರೀಮತಿ ಚಂಪಾವತಿ ಇವರ ಗದ್ದೆಯಲ್ಲಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಬೃ ಹತ್ ನೇಜಿ ನಾಟಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಮುಖಂಡ ಬಲ್ಕಾಜೆ ಲಕ್ಷ್ಮಣ ಗೌಡ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನೇಜಿ ನಾಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ ಶ್ರೀಧರ್ ರಾವ್ ಕಾಯಡ, ದೇವಸ್ಥಾನದ ಅರ್ಚಕ ರಾಮಕೃಷ್ಣ ಭಟ್, ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ರಾವ್, ಜೆಸಿಐ ಕಪಿಲಾ ಕೊಕ್ಕಡ ಇದರ ಶ್ರೀಮತಿ ಶೋಭಾ ಜೈನ್, ಸಂತೋಷ್ ಜೈನ್, ಜೋಸೆಫ್ ಪಿರೇರೊ, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ, ಖಜಾಂಚಿ ನಿರಂಜನ ಬದಿಮಾರು, ಕೇಶವ ಗೌಡ ಮಲ್ಲಜಾಲ್, ಬಾಲಕೃಷ್ಣ ಗೌಡ ಬರಮೇಲು, ಉಮೇಶ್ ರೈ ಪಂಚಮಿಪಾದೆ, ಶೀನಪ್ಪ ಗೌಡ ಕೊತ್ತೋಡಿ, ಗಣೇಶ್ ಬದಿಮಾರ್, ರಾಘಚಂದ್ರ ಪೂಜಾರಿ, ವಸಂತ ಪೂಜಾರಿ ಶ್ರೀಮತಿ ಸುಜಾತ ಶೆಟ್ಟಿ, ಕಂಬಳ ಕೋಣ ಮಾಲಕರದ ಹರಿಪ್ರಸಾದ್ ಶೆಟ್ಟಿ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಮತ್ತು ಊರ ಭಕ್ತರು ಉಪಸ್ಥಿತರಿದ್ದರು.
ಒಟ್ಟು 85 ಜನರು ನೇಜಿ ನಾಟಿ ಕೆಲಸದಲ್ಲಿ ಪಾಲ್ಗೊಂಡಿದ್ದರು.

Related posts

ಧರ್ಮಸ್ಥಳ: ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸ್ಕಾರ್ಫ್ ಡೇ, ಕಾರ್ಗಿಲ್ ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

Suddi Udaya

ಚಿಕ್ಕಮಗಳೂರಿನಲ್ಲಿ ಕಳ್ಳತನವಾದ ಓಮಿನಿ ಕಾರು ಉಜಿರೆಯಲ್ಲಿ ಪತ್ತೆ: ಮಾಲೀಕನ ಸ್ನೇಹಿತರ ಮೂಲಕ 10 ದಿನದಲ್ಲಿ ಕಾರು ಪತ್ತೆ

Suddi Udaya

ರೋಟರಿ ಕ್ಲಬ್ ವತಿಯಿಂದ ಅಮೂಲ್ ಸಾವಯುವ ಗೊಬ್ಬರದ ಪ್ರಾತ್ಯಕ್ಷಿಕೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಜೇಸಿಂತಾ ಮೋನಿಸ್ ನಿಧನ

Suddi Udaya

ಮೇ 30: ಗುರುವಾಯನಕೆರೆಯಲ್ಲಿ ಶ್ರೀ ಗುರುದೇವ ಎಲೆಕ್ಟ್ರಿಕಲ್ ಸಂಸ್ಥೆಯ ನೂತನ “ಕೆ.ವಿ.ಪಿ.” ಕಾಂಪ್ಲೆಕ್ಸ್ ಶುಭಾರಂಭ

Suddi Udaya

ಪತ್ನಿ – ಮಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪಿ ಬಂಧನ

Suddi Udaya
error: Content is protected !!